For Quick Alerts
ALLOW NOTIFICATIONS  
For Daily Alerts

ಇನ್ಮುಂದೆ ಇಂಥ ಆಧಾರ್ ಕಾರ್ಡ್ ಮಾನ್ಯವಲ್ಲ

ಪ್ಲಾಸ್ಟಿಕ್ ಆಧಾರ್, ಆಧಾರ್ ಸ್ಮಾರ್ಟ್ ಕಾರ್ಡ್ ಹಾಗೂ ಪಿವಿಸಿ ಕಾರ್ಡ್ ಮಾನ್ಯವಾಗುವುದಿಲ್ಲವೆಂದು ಯುಐಡಿಎಐ ತನ್ನ ಅಧಿಕೃತ ಟ್ವೀಟರ್ ನಲ್ಲಿ ಮಾಹಿತಿ ನೀಡಿದೆ.

|

ಪ್ಲಾಸ್ಟಿಕ್ ಆಧಾರ್ ಕಾರ್ಡ್ ಉಪಯೋಗಿಸುವವರಿಗೆ ಇಲ್ಲೊಂದು ಪ್ರಮುಖ ಸುದ್ದಿ ಇದ್ದು, ಇನ್ಮುಂದೆ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಮಾನ್ಯವಾಗುವುದಿಲ್ಲ.
ಪ್ಲಾಸ್ಟಿಕ್ ಆಧಾರ್, ಆಧಾರ್ ಸ್ಮಾರ್ಟ್ ಕಾರ್ಡ್ ಹಾಗೂ ಪಿವಿಸಿ ಕಾರ್ಡ್ ಮಾನ್ಯವಾಗುವುದಿಲ್ಲವೆಂದು ಯುಐಡಿಎಐ ತನ್ನ ಅಧಿಕೃತ ಟ್ವೀಟರ್ ನಲ್ಲಿ ಮಾಹಿತಿ ನೀಡಿದೆ.
ಪ್ಲಾಸ್ಟಿಕ್ ಆಧಾರ್ ಕಾರ್ಡ್ಬಳಸುವುದರಿಂದ ಸಾಕಷ್ಟ ಹಾನಿ ಸಂಭವ ಸಾಧ್ಯತೆಯಿದ್ದು, ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಅಥವಾ ಆಧಾರ್ ಸ್ಮಾರ್ಟ್ ಕಾರ್ಡ್ ಬಳಕೆ ಮಾಡಬೇಡಿ ಯುಐಡಿಎಐ ಸೂಚನೆ ನೀಡಿದೆ. ಇಂತಹ ಕಾರ್ಡುಗಳ ಬಳಕೆಯಿಂದ ನಿಮ್ಮ ಆಧಾರ್ ವಿವರಗಳ ಗೌಪ್ಯತೆಗೆ ಅಪಾಯವಿದೆ.

 

ಹೆಚ್ಚು ಖರ್ಚು

ಹೆಚ್ಚು ಖರ್ಚು

ಪ್ಲಾಸ್ಟಿಕ್ ಆಧಾರ್ ಕಾರ್ಡ್ ತಯಾರಿಸಲು ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ. ರೂ. 50 ಬದಲು 300 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಕೆಲವು ಕಡೆ ಇದಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತದೆ. ಪ್ಲಾಸ್ಟಿಕ್ ಆಧಾರ್ ತಯಾರಿಸುವ ಜನರಿಂದ ದೂರವಿರಿ ಎಂದೂ ಯುಐಡಿಎಐ ಸಲಹೆ ನೀಡಿದೆ.

ಈ ಆಧಾರ್ ಕೂಡ ಮಾನ್ಯವಾಗಿದೆ

ಈ ಆಧಾರ್ ಕೂಡ ಮಾನ್ಯವಾಗಿದೆ

ಒರಿಜಿನಲ್ ಆಧಾರ್ ಹೊರತಾಗಿ ಖಾಲಿ ಹಾಳೆಯಲ್ಲಿ ಮುದ್ರಣಗೊಂಡ ಆಧಾರ್ ಕೂಡ ಮಾನ್ಯವಾಗುತ್ತದೆ. ಕಲರ್ ಪ್ರಿಂಟಿಂಗ್ ಅಗತ್ಯವೂ ಇಲ್ಲವೆಂದು ಯುಐಡಿಎಐ ಹೇಳಿದೆ. ಆದ್ದರಿಂದ ನಿಮಗೆ ಸ್ಮಾರ್ಟ್ ಆಧಾರ್ ಪಡೆಯಬೇಕೆಂಬ ಗೊಂದಲ ಕೂಡ ಇರಲ್ಲ. ಆಧಾರ್ ಕಾರ್ಡ್ ಲ್ಯಾಮಿನೇಷನ್ ಅಥವಾ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಅಗತ್ಯ ಇಲ್ಲ.

ಡೌನ್ಲೋಡ್ ಮಾಡಿ
 

ಡೌನ್ಲೋಡ್ ಮಾಡಿ

ನಿಮ್ಮ ಆಧಾರ್ ಕಾರ್ಡ್ ಒಂದು ವೇಳೆ ನೀವು ಆಧಾರ್ ಕಾರ್ಡ್ ಕಳೆದುಕೊಂಡಿದ್ದರೆ https://eaadhaar.uidai.gov.in ವೆಬ್ಸೈಟ್ ನಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಹಲವು ಬಾರಿ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಕಾರ್ಯ ನಿರ್ವಹಿಸುವುದಿಲ್ಲ. ಅನಧಿಕೃತ ಮುದ್ರಣದಿಂದ ಕ್ಯೂಆರ್ ಕೋಡ್ ಸಂಪರ್ಕ ಸಾಧ್ಯವಾಗದೆ ಆಧಾರ್ ವಿವರ ಸೋರಿಕೆಯಾಗುತ್ತದೆ.

Read more about: ಆಧಾರ್ aadhar uidai
English summary

uidai alert plastic aadhaar or smart aadhaar card is not valid now

This is big news! uidai alert plastic aadhaar or smart aadhaar card is not valid now.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X