145 ಪಾಯಿಂಟ್ ಏರಿಕೆ ಕಂಡ ಸೆನ್ಸೆಕ್ಸ್
ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 145 ಅಂಕಗಳ ಏರಿಕೆ ಹಾಗು ನಿಪ್ಟಿ ಸೂಚ್ಯಂಕ 33.65 ಅಂಕಗಳ ಏರಿಕೆಯೊಂದಿಗೆ ಧನಾತ್ಮಕ ಚೇತರಿಕೆ ಕಂಡಿದೆ.
ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 145 ಅಂಕಗಳ ಏರಿಕೆ ಹಾಗು ನಿಪ್ಟಿ ಸೂಚ್ಯಂಕ 33.65 ಅಂಕಗಳ ಏರಿಕೆಯೊಂದಿಗೆ ಧನಾತ್ಮಕ ಚೇತರಿಕೆ ಕಂಡಿದೆ.

ವಿದೇಶಿ ಬಂಡವಾಳದ ಒಳ ಹರಿವಿನಲ್ಲಿನ ಹೆಚ್ಚಳ ಮತ್ತು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯನ ಇಳಿಕೆಯ ಪರಿಣಾಮವಾಗಿ ಷೇರುಪೆಟೆ ಸಕರಾತ್ಮಕವಾಗಿ ವಹಿವಾಟು ನಡೆಸಿದೆ.
ಇಂದು 11.23ರ ಸಮಯಕ್ಕೆ ಸೆನ್ಸೆಕ್ಸ್ 150 ಪಾಯಿಂಟ್ ಅಂಕಗಳ ಏರಿಕೆ ದಾಖಲಿಸಿ, 39,131 ಅಂಶಗಳಲ್ಲಿ ಹಾಗು ನಿಪ್ಟಿ ಸೂಚ್ಯಂಕ 33 ಪಾಯಿಂಟ್ ನೊಂದಿಗೆ 11,757.65 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬೆಳಗ್ಗಿನ ವಹಿವಾಟಿನ ಸಂದರ್ಭಲ್ಲಿ ಕೋಟಕ್ ಮಹೀಂದ್ರ, ಭಾರ್ತಿ ಏರ್‌ಟೆಲ್, ಎನ್‌ಟಿಪಿಸಿ, ಟಾಟಾ ಮೋಟರ್, ಭಾರ್ತಿ ಇನ್‌ಫ್ರಾಟೆಲ್ ಶೇರುಗಳು ಪ್ರಮುಖ ಲಾಭದಾಯಕ ಕಂಪನಿಗಳಾಗಿದ್ದವು. ಅದೇ ವೇಳೆ ಎಚ್ ಸಿ ಎಲ್ ಟೆಕ್, ಟಿಸಿಎಸ್, ಗ್ರಾಸಿಂ, ವಿಪ್ರೋ, ಟೆಕ್ ಮಹೀಂದ್ರ ನಷ್ಟ ಅನುಭವಿಸಿದ್ದವು.
ಶುಕ್ರವಾರದ ಬೆಳಗ್ಗಿನ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 13 ಪೈಸೆ ಚೇತರಿಕೆ ಕಂಡು ರೂ. 69.24 ಮಟ್ಟದಲ್ಲಿ ವ್ಯವಹಾರ ನಡೆಸಿತ್ತು.


Click it and Unblock the Notifications