ಅಕ್ಷಯ ತೃತೀಯ ಘಳಿಗೆಯಲ್ಲಿ ಚಿನ್ನ ಖರೀದಿಸುವುದನ್ನು ಶುಭಕರ ಎಂದು ನಂಬಲಾಗಿದೆ. ನಮ್ಮ ದೇಶದಲ್ಲಿ ತುಂಬಾ ಜನರು ಅಕ್ಷಯ ತೃತೀಯದ ಸಂದರ್ಭದಲ್ಲಿ ಚಿನ್ನ ಖರೀದಿಸಲು ಮುಗಿ ಬೀಳುತ್ತಾರೆ.
ಅಕ್ಷಯ ತೃತೀಯ ಘಳಿಗೆಯಲ್ಲಿ ಚಿನ್ನ ಖರೀದಿಸುವುದನ್ನು ಶುಭಕರ ಎಂದು ನಂಬಲಾಗಿದೆ. ನಮ್ಮ ದೇಶದಲ್ಲಿ ತುಂಬಾ ಜನರು ಅಕ್ಷಯ ತೃತೀಯದ ಸಂದರ್ಭದಲ್ಲಿ ಚಿನ್ನ ಖರೀದಿಸಲು ಮುಗಿ ಬೀಳುತ್ತಾರೆ. ಈ ದಿನದಂದು ಚಿನ್ನ ಖರೀದಿ ಮಾಡಿದರೆ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ಆದರೆ ಬಡವರಿಗೆ ಚಿನ್ನ ಖರೀದಿಸುವುದು ಸಾಧ್ಯವಾಗುವುದಿಲ್ಲ. ಆರ್ಥಿಕ ಸಮಸ್ಯೆಯಲ್ಲಿರುವ ಜನರು ಅಕ್ಷಯ ತೃತೀಯದಂದು ಬಂಗಾರ ಖರೀದಿ ಮಾಡಲ್ಲ.
ಆದರೆ ಇತ್ತೀಚಿನ ದಿನಗಳಲ್ಲಿ 1 ರೂಪಾಯಿಗೆ ಚಿನ್ನ ಖರೀದಿ ಸದ್ದು ಮಾಡುತ್ತಿದ್ದು, ಆನ್ಲೈನ್ ಕಂಪನಿಗಳು 1 ರೂಪಾಯಿಗೆ ಬಂಗಾರ ಖರೀದಿಗೆ ಅವಕಾಶ ಕಲ್ಪಿಸಿ ಜನರನ್ನು ಆಕರ್ಷಿಸಲು ಯತ್ನಿಸುತ್ತಿವೆ.

1 ರೂಪಾಯಿಗೆ ಬಂಗಾರ ಖರೀದಿ
ಇ-ವಾಲೆಟ್ ಸಂಸ್ಥೆ ಪೇಟಿಎಂ ಗೋಲ್ಡ್ ಸೇವೆ ಶುರು ಮಾಡಿದ್ದು, ನೀವು ಒಂದು ರೂಪಾಯಿಗೆ ಬಂಗಾರ ಖರೀದಿ ಮಾಡಬಹುದು. 1 ರೂಪಾಯಿಯಿಂದ ರೂ. 1.5 ಲಕ್ಷದವರೆಗೆ ಬಂಗಾರ ಖರೀದಿಗೆ ಅವಕಾಶವಿದೆ. ಪೆಟಿಎಂ ಮೂಲಕ 24 ಕ್ಯಾರೆಟ್ 999.9 ಶುದ್ಧ ಬಂಗಾರ ಸಿಗಲಿದೆ. ಖರೀದಿಸಿದ ಬಂಗಾರ ಸುರಕ್ಷಿತ ಲಾಕರ್ ನಲ್ಲಿ ಇಡಬಹುದಾಗಿದ್ದು, ಬೇಕಾದಾಗ ಮನೆಗೆ ತರಬಹುದು.
ಬಂಗಾರ ಖರೀದಿ ಹೇಗೆ?
ಪೇಟಿಎಂನಲ್ಲಿ ಬಂಗಾರ ಖರೀದಿ ಮಾಡಲು ಪೇಟಿಎಂ ಆಪ್ ನಲ್ಲಿನ ಗೋಲ್ಡ್ ಆಪ್ಷನ್ ಆಯ್ಕೆ ಮಾಡಬೇಕು. ಅಲ್ಲಿ ನೀವು ಬಂಗಾರ ಖರೀದಿ ಮಾಡಬಹುದು. ನಿಮ್ಮ ಬಂಗಾರ ಎಂಎಟಿಸಿ-ಪಿಎಂಪಿಯಲ್ಲಿ ಸುರಕ್ಷಿತವಾಗಿರಲಿದೆ. ಜೊತೆಗೆ ಪೇಟಿಎಂ ಮೂಲಕ ನೀವು ಬಂಗಾರ ಮಾರಾಟ ಮಾಡಬಹುದು. ನಿಮಗೆ ಬೇಕಾದಾಗ ಬಂಗಾರವನ್ನು ಡಿಲೆವರಿ ಪಡೆಯಬಹುದು. 1, 2, 5, 10, 20 ಗ್ರಾಂ ಬಂಗಾರದ ನಾಣ್ಯದ ರೂಪದಲ್ಲಿ ಚಿನ್ನ ಸಿಗಲಿದೆ.
ಪೇಟಿಎಂನಂತೆ ಬುಲಿಯನ್ ಇಂಡಿಯಾ ಮೂಲಕ ಚಿನ್ನ ಖರೀದಿ ಮಾಡಬಹುದು. ಇಲ್ಲಿ 300 ರೂಪಾಯಿಗೆ ಬಂಗಾರ ಖರೀದಿ ಮಾಡಬಹುದಾಗಿದೆ.


Click it and Unblock the Notifications