For Quick Alerts
ALLOW NOTIFICATIONS  
For Daily Alerts

ಗ್ರಾಹಕರಿಗೆ ಹೊರೆ! ಗೃಹಸಾಲದ ಬಡ್ಡಿದರ, ಇಎಂಐ ಏರಿಕೆ

ಬ್ಯಾಂಕುಗಳ ವಿಲೀನದ ನಂತರ ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಕಹಿಸುದ್ದಿ ನೀಡಿದೆ.

|

ಬ್ಯಾಂಕುಗಳ ವಿಲೀನದ ನಂತರ ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಕಹಿಸುದ್ದಿ ನೀಡಿದೆ.

 
ಗ್ರಾಹಕರಿಗೆ ಹೊರೆ! ಗೃಹಸಾಲದ ಬಡ್ಡಿದರ, ಇಎಂಐ ಏರಿಕೆ

ಬ್ಯಾಂಕ್ ಆಫ್ ಬರೋಡಾ ಎಂಸಿಎಲ್ಆರ್ ದರವನ್ನು ಶೇ. 0.05ರಷ್ಟು ಏರಿಕೆ ಮಾಡಿದೆ. ಬ್ಯಾಂಕ್ ಆಫ್ ಬರೋಡಾ ಹೊಸ ದರವು ಮೇ 7ರ ಮಂಗಳವಾರದಿಂದ ಜಾರಿಗೆ ಬರಲಿದೆ. ಎಂಸಿಎಲ್ಆರ್ ದರದ ಏರಿಕೆ ನಂತರ ಒಂದು ವರ್ಷಕ್ಕಿಂತ ಹೆಚ್ಚು ಅವಧಿ ಸಾಲದ ಮೇಲಿನ ಬಡ್ಡಿ ದರ ಶೇ. 8.25 - 8.30ಕ್ಕೆ ಏರಿಕೆಯಾಗಿದೆ.
ಒಂದು ತಿಂಗಳಿನಿಂದ ಮೂರು ತಿಂಗಳ ಅವಧಿ ಸಾಲದ ಬಡ್ಡಿ ದರ ಶೇ. 8.35 ರಿಂದ ಶೇ. 8.45ರಷ್ಟಾಗಿದೆ. 6 ತಿಂಗಳ ಸಾಲದ ಮೇಲಿನ ಬಡ್ಡಿದರ ಶೇ. 8.65 ಹಾಗೂ ಒಂದು ವರ್ಷ ಅವಧಿಯ ಸಾಲದ ಮೇಲಿನ ಬಡ್ಡಿ ದರ ಶೇ. 8.70ರಷ್ಟು ಏರಿಕೆ ಆಗಲಿದೆ.
ಎಂಸಿಎಲ್ಆರ್ ಮೇಲಾಗುವ ವೆಚ್ಚದ ಆಧಾರದಲ್ಲಿ ಬ್ಯಾಂಕ್ ಬಡ್ಡಿ ನಿರ್ಧರಿಸಲಿದ್ದು, ಎಂಸಿಎಲ್ಆರ್ ದರದಲ್ಲಿ ಏರಿಕೆಯಾದರೆ ಬಡ್ಡಿ ದರ ಹಾಗು ಇಎಂಐ ಏರಿಕೆಯಾಗಿ ಗ್ರಾಹಕರಿಗೆ ಹೊರೆಯಾಗಲಿದೆ.

English summary

Bank of Baroda hikes MCLR

State-owned Bank of Baroda (BoB) Saturday said it has hiked its marginal cost of funds based lending rate (MCLR) by 0.05 per cent with effect from May 7.
Story first published: Monday, May 6, 2019, 12:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X