ಜಾಗತಿಕ ಷೇರುಪೇಟೆಯಲ್ಲಿನ ದೌರ್ಬಲ್ಯದ ಹೊರತಾಗಿಯೂ ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರ ಸುಮಾರು 10 ಗಂಟೆಯ ಆಸುಪಾಸಿನಲ್ಲಿ 200ಕ್ಕೂ ಅಧಿಕ ಪಾಯಿಂಟ್ ಮುಟ್ಟುವಲ್ಲಿ ಸಫಲವಾಯಿತು.
ಒಂದೇಡೆ ಅಕ್ಷಯ ತೃತೀಯ ಪ್ರಯುಕ್ತ ಚಿನ್ನಾಭರಣ ಖರೀದಿ ಭರಾಟೆ, ಇನ್ನೊಂದೆಡೆ ಷೇರುಪೇಟೆಯಲ್ಲಿ ಧನಾತ್ಮಕ ಏರಿಕೆ ಸಾಗಿದೆ.

ಜಾಗತಿಕ ಷೇರುಪೇಟೆಯಲ್ಲಿನ ದೌರ್ಬಲ್ಯದ ಹೊರತಾಗಿಯೂ ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರ ಸುಮಾರು 10 ಗಂಟೆಯ ಆಸುಪಾಸಿನಲ್ಲಿ 200ಕ್ಕೂ ಅಧಿಕ ಪಾಯಿಂಟ್ ಮುಟ್ಟುವಲ್ಲಿ ಸಫಲವಾಯಿತು.
ನಿನ್ನೆ ಸೋಮವಾರದ ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 362.92 ಪಾಯಿಂಟ್ ನಿಫ್ಟಿ ಸೂಚ್ಯಂಕ 114 ಅಂಕ ನಷ್ಟ ಅನುಭವಿಸಿದ್ದವು.
ಇಂದು ಮಧ್ಯಾಹ್ನ 1.00 ಗಂಟೆಗೆ ಸೆನ್ಸೆಕ್ಸ್ ಸೂಚ್ಯಂಕ 143.51 ಪಾಯಿಂಟ್ ಮುನ್ನಡೆ ಕಾಯ್ದುಕೊಂಡು 38,744 ಅಂಕಗಳ ಮಟ್ಟದಲ್ಲಿ, ನಿಫ್ಟಿ ಸೂಚ್ಯಂಕ 11,627.25 ಅಂಕಗಳೊಂದಿಗೆ ವ್ಯವಹಾರ ನಿರತವಾಗಿದ್ದವು.
ಬ್ಯಾಂಕಿಂಗ್ ಮತ್ತು ಐಟಿ ವಲಯದ ಷೇರುಗಳು ಉತ್ತಮ ಖರೀದಿ ಬೆಂಬಲವನ್ನು ಪಡೆದವು.
ಟಾಪ್ ಗೇನರ್‌ಗಳಾಗಿ ಮೂಡಿ ಬಂದ
ವೇದಾಂತ, ಕೋಲ್ ಇಂಡಿಯಾ, ಹೀರೋ ಮೋಟೋ ಕಾರ್ಪ್, ಟಿಸಿಎಸ್, ಎಸ್‌ಬಿಐ, ಟಾಟಾ ಸ್ಟೀಲ್, ಎಕ್ಸಿಸ್ ಬ್ಯಾಂಕ್, ಪವರ್ ಗ್ರಿಡ್, ಎಸ್ ಬ್ಯಾಂಕ್, ಟಾಟಾ ಮೋಟರ್, ಎಚ್ ಯು ಎಲ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಇನ್‌ಫೋಸಿಸ್ ಷೇರುಗಳು ಟಾಪ್ ಗೇನರ್ ಗಳಾಗಿದ್ದು, ಶೇ.1.83ರ ಏರಿಕೆ ಕಂಡವು.
ಇನ್ನೊಂದೆಡೆ ಇಂಡಸ್ಲ್ಯಾಂಡ್ ಬ್ಯಾಂಕ್, ಒಎನ್ಜಿಸಿ, ಆರ್ಐಎಲ್, ಸನ್ ಫಾರ್ಮಾ ಎಚ್ಸಿಎಲ್ ಟೆಕ್ ಮತ್ತು ಭಾರ್ತಿ ಏರ್ಟೆಲ್ ಶೇ.1.92 ವರೆಗೆ ನಷ್ಟ ಅನುಭವಿಸಿದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 4 ಪೈಸೆಯ ಚೇತರಿಕೆಯನ್ನು ಕಂಡು 69.36 ರೂ. ಮಟ್ಟದಲ್ಲಿ ವಹಿವಾಟು ನಿರತವಾಗಿತ್ತು.


Click it and Unblock the Notifications