For Quick Alerts
ALLOW NOTIFICATIONS  
For Daily Alerts

ಇಪಿಎಫ್ ಬಡ್ಡಿದರ ಶೇ. 8.65 ಏರಿಕೆ ಕುರಿತು ಹಣಕಾಸು ಸಚಿವಾಲಯದಿಂದ ಇಪಿಎಫ್ಒಗೆ ಪ್ರಶ್ನೆ

ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) 2018-19 ಸಾಲಿನಲ್ಲಿ ಶೇ. 8.65 ಬಡ್ಡಿ ದರವನ್ನು ಪಾವತಿಸಲು ಸಾಕಷ್ಟು ಹೆಚ್ಚುವರಿ ಮೊತ್ತವನ್ನು ಹೊಂದಿದೆಯೇ? ಇದರಿಂದ ಐಎಲ್ & ಎಫ್ಎಸ್ (IL&FS) ನಂತಹ ಸಂಸ್ಥೆಗಳಿಗೂ ಗಂಡಾಂತರ ಎದುರಾಗಬಹುದಾಗಿದೆ.

|

ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) 2018-19 ಸಾಲಿನಲ್ಲಿ ಶೇ. 8.65 ಬಡ್ಡಿ ದರವನ್ನು ಪಾವತಿಸಲು ಸಾಕಷ್ಟು ಹೆಚ್ಚುವರಿ ಮೊತ್ತವನ್ನು ಹೊಂದಿದೆಯೇ? ಇದರಿಂದ ಐಎಲ್ & ಎಫ್ಎಸ್ (IL&FS) ನಂತಹ ಸಂಸ್ಥೆಗಳಿಗೂ ಗಂಡಾಂತರ ಎದುರಾಗಬಹುದಾಗಿದ್ದು, ಅವುಗಳಿಂದ ವಿವರ ಪಡೆಯಲಾಗಿದೆಯೆ? ಎಂಬುದರ ವಿವರ ನೀಡುವಂತೆ ಹಣಕಾಸು ಸಚಿವಾಲಯವು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವನ್ನು ಕೇಳಿದೆ.

 
ಪಿಎಫ್ ಬಡ್ಡಿದರ ಶೇ. 8.65, ಹಣಕಾಸು ಸಚಿವಾಲಯದಿಂದ ಇಪಿಎಫ್ಒಗೆ ಪ್ರಶ್ನೆ

ಫೆಬ್ರವರಿ ತಿಂಗಳಲ್ಲಿ ಕಾರ್ಮಿಕ ಸಚಿವ ಸಂತೋಷ ಗಂಗ್ವಾರ್ ನೇತೃತ್ವದಲ್ಲಿ ನಡೆದ ಇಪಿಎಫ್ಒ ಮಂಡಳಿ ಸಭೆಯಲ್ಲಿ ಇಪಿಎಫ್ ಬಡ್ಡಿದರ ಏರಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು.
ಮುಂದಿನ ಹಣಕಾಸು ವರ್ಷಕ್ಕೆ ಸಾಕಾಗುವಷ್ಟು ಹೆಚ್ಚುವರಿ ಹಣ ಇದೆಯೇ ಎಂದು ಕಾರ್ಮಿಕ ಸಚಿವಾಲಯ ಕೇಳಿದೆ. ಇಪಿಎಫ್ಓ ಚಂದಾದಾರರಿಗೆ ಹಣ ಪಾವತಿಸುವ ಹೊಣೆಗಾರಿಕೆ ಸರ್ಕಾರದ್ದಾಗಿರುತ್ತದೆ. ಅದಕ್ಕಾಗಿಯೇ ಪೂರ್ವನಿಯೋಜಿತವಾಗಿ ಇಪಿಎಫ್ಒ ಖಾತೆಗಳ ಜವಾಬ್ಧಾರಿಯನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 

ನಮ್ಮ ಲೆಕ್ಕಾಚಾರಗಳು ಸರಿಯಾಗಿದ್ದು, ಕಳೆದ 20ಕ್ಕಿಂತ ಹೆಚ್ಚು ವರ್ಷಗಳಿಂದ ನಾವು ಈ ಪ್ರಕ್ರಿಯೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ನಾವು ಅನುಸರಿಸುತ್ತಿರುವ ವಿಧಾನ ಹೊಸದಲ್ಲ. ಹಣಕಾಸು ಸಚಿವಾಲಯ ಕೆಲವು ಪ್ರಶ್ನೆಗಳನ್ನು ನಮ್ಮ ಮುಂದೆ ಇಟ್ಟಿದ್ದು, ನಾವು ಅವುಗಳಿಗೆ ಉತ್ತರಿಸುತ್ತಿದ್ದೇವೆ ಎಂದು ಇಪಿಎಫ್ಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಎಲ್ ಮತ್ತು ಎಫ್ಎಸ್ ಸಂಸ್ಥೆಯ ಮಾನ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ, ಇಪಿಎಫ್ಒ ಅಧಿಕಾರಿಯು ಐಎಲ್ ಮತ್ತು ಎಫ್ಎಸ್ ನಲ್ಲಿ ಹೂಡಿಕೆ ಮಾಡಿದ ಹಣವನ್ನು ಕಳೆದುಕೊಂಡರೆ ಅದನ್ನು ಹೇಗೆ ನಿರ್ವಹಿಸುತ್ತಿರಿ ಎಂಬುದನ್ನು ವಿವರಿಸುವಂತೆ ಅವರಲ್ಲಿ ಕೇಳಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಇಪಿಎಫ್ ಬಡ್ಡಿದರ ಶೇ. 8.65ರಷ್ಟು ಹೆಚ್ಚಿಸಿ ಪಾವತಿಸಲು ನಿರ್ಧರಿಸಲಾಗಿದೆ. 2017-18 ರಲ್ಲಿ ಇಪಿಎಫ್ ಬಡ್ಡಿದರ ಶೇ. 8.55ರಷ್ಟಿತ್ತು. 2016-17 8.65ರಷ್ಟಿತ್ತು. ಅಂದರೆ ಮುರು ವರ್ಷಗಳ ನಂತರ ಮತ್ತೆ ಶೇ. 8.65ರಷ್ಟು ಏರಿಸಲಾಗಿದೆ. ಹೀಗಾಗಿ ಇಷ್ಟೊಂದು ಬಡ್ಡಿದರ ಪಾವತಿಸಲು ಸಾಧ್ಯವಿದೆಯೇ ಎಂದು ಹಣಕಾಸು ಸಚಿವಾಲಯ ಪ್ರಶ್ನಿಸಿ ವಿವರ ನೀಡುವಂತೆ ಇಪಿಎಫ್ಒ ಸಂಸ್ಥೆಗೆ ಹೇಳಿದೆ.

Read more about: epfo epf interest rates money
English summary

To clear 8.65%, Finance Ministry wants some answers from EPFO

The Finance Ministry has sought details about the exposure of EPFO to IL&FS and other such similar risky entities, an official said.
Story first published: Tuesday, May 7, 2019, 12:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X