ಹೊಸ ಜಿಡಿಪಿ! ಯುಪಿಎಗಿಂತ ಮೋದಿ ಸರ್ಕಾರದ ಜಿಡಿಪಿ ಬೆಳವಣಿಗೆ ಹೆಚ್ಚು: ಎನ್ಎಸ್ಎಸ್ಒ

ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಭಾರತದ ಜಿಡಿಪಿ ಸರಣಿಯನ್ನು ಲೆಕ್ಕಹಾಕುವ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಲೋಪದೋಷಗಳನ್ನು ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್ಎಸ್ಎಸ್ಒ) ಕಂಡುಹಿಡಿದಿದೆ.

ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಭಾರತದ ಜಿಡಿಪಿ ಸರಣಿಯನ್ನು ಲೆಕ್ಕಹಾಕುವ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ಲೋಪದೋಷಗಳನ್ನು ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್ಎಸ್ಎಸ್ಒ) ಕಂಡುಹಿಡಿದಿದೆ.

ಯುಪಿಎಗಿಂತ ಮೋದಿ ಸರ್ಕಾರದ ಜಿಡಿಪಿ ಬೆಳವಣಿಗೆ ಹೆಚ್ಚು: ಎನ್ಎಸ್ಎಸ್ಒ

2015 ರಲ್ಲಿ ನರೇಂದ್ರ ಮೋದಿ ಸರ್ಕಾರವು 2004-2005 ರಿಂದ 2011-12ರವರೆಗಿನ ಜಿಡಿಪಿ ಲೆಕ್ಕಾಚಾರಗಳಿಗೆ ಮೂಲ ವರ್ಷವನ್ನು ಪರಿಷ್ಕರಿಸಿದೆ. ಇದು ಹಿಂದಿನ ಯುಪಿಎ ಆಡಳಿತದ ಜಿಡಿಪಿ ಬೆಳವಣಿಗೆಯ ಗಮನಾರ್ಹ ಕುಸಿತಕ್ಕೆ ದಾರಿ ಮಾಡಿಕೊಟ್ಟಿದೆ. 2010-11ರಲ್ಲಿ ಯುಪಿಎ ಸರ್ಕಾರ ಶೇ. 10.26 ಜಿಡಿಪಿ ಬೆಳವಣಿಗೆಯನ್ನು ಸಾಧಿಸಿದಾಗ, ಇದು ಭಾರತೀಯ ಆರ್ಥಿಕತೆಯಲ್ಲಿ ಅತಿಹೆಚ್ಚಿನ ಜಿಡಿಪಿ ದರ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಮೂಲ ವರ್ಷ ಪರಿಷ್ಕರಿಸಿದ ನಂತರ ಇದು ಶೇ. 8.5 ಕ್ಕೆ ಕುಸಿದಿದೆ!

ಜಿಡಿಪಿ ಸರಣಿ ಎಲ್ಲಾ ಅಂಕಿಅಂಶಗಳ ಚಟುವಟಿಕೆಯನ್ನು ಸರ್ಕಾರಿ ಸಂಸ್ಥೆಯಾದ ಕೇಂದ್ರ ಅಂಕಿಅಂಶಗಳ ಕಚೇರಿ (Central Statistics Office) ತಯಾರಿಸಿದೆ. ಹಳೆಯ ಜಿಡಿಪಿ ಸರಣಿಯ ಅಂಕಿಅಂಶಗಳು ಖಾಸಗಿ ಕಾರ್ಪೋರೇಟ್ ಕಂಪನಿಗಳ ಸಮೀಕ್ಷೆಯ ಮೇಲೆ ಅವಲಂಬಿತವಾಗಿದೆ.

ಈ ಅಂಕಿಅಂಶಗಳ ವಿಶ್ವಾಸಾರ್ಹತೆಯ ಬಗ್ಗೆ ಮೊದಲಿನಿಂದಲೂ ಸಂಶಯಗಳು ಎದುರಾಗಿದ್ದು, ಸೂಕ್ತ ಮೌಲ್ಯಮಾಪನ ಇಲ್ಲದ ಹಾಗು ಪರೀಕ್ಷಿಸದ ಡೇಟಾಬೇಸ್ ಬಳಕೆಯ ಬಗ್ಗೆ ಪ್ರಶ್ನೆಗಳಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+