ಅಮೆರಿಕ-ಚೀನಾದ ನಡುವಿನ ಬಿಕ್ಕಟ್ಟಿನಿಂದಾಗಿ ಸೆನ್ಸೆಕ್ಸ್ ಸೂಚ್ಯಂಕ ಭಾರೀ ನಷ್ಟ ಕಂಡಿದೆ. ಬುಧವಾರದ ವಹಿವಾಟಿನ ಆರಂಭದಿಂದ ಕರಡಿ ಕುಣಿತ ಜೋರಾಗಿದ್ದು, ಆರಂಭಿಕ ವಹಿವಾಟಿನ ಸಂದರ್ಭದಲ್ಲಿ 250 ಅಂಕಗಳ ನಷ್ಟ ಕಂಡಿತ್ತು.
ಜಾಗತಿಕ ಷೇರುಪೇಟೆಯ ಮೇಲೆ ಅಮೆರಿಕ, ಚೀನ ವಾಣಿಜ್ಯ ಸಮರ ತಲ್ಲಣ ಸೃಷ್ಟಿಸಿದೆ! ಅಮೆರಿಕ-ಚೀನಾದ ನಡುವಿನ ಬಿಕ್ಕಟ್ಟಿನಿಂದಾಗಿ ಸೆನ್ಸೆಕ್ಸ್ ಸೂಚ್ಯಂಕ ಭಾರೀ ನಷ್ಟ ಕಂಡಿದೆ. ಬುಧವಾರದ ವಹಿವಾಟಿನ ಆರಂಭದಿಂದ ಕರಡಿ ಕುಣಿತ ಜೋರಾಗಿದ್ದು, ಆರಂಭಿಕ ವಹಿವಾಟಿನ ಸಂದರ್ಭದಲ್ಲಿ 250 ಅಂಕಗಳ ನಷ್ಟ ಕಂಡಿತ್ತು.

ದಿನದ ಮಧ್ಯಂತರ 1 ಗಂಟೆ ಸುಮಾರಿಗೆ ಮುಂಬೈ ಷೇರುಪೆಟೆ ಸೆನ್ಸೆಕ್ಸ್ ಸೂಚ್ಯಂಕ 352 ಅಂಕ ಕುಸಿತ ಕಂಡಿತು. ನಿಪ್ಟಿ ಸೂಚ್ಯಂಕವು 77 ಅಂಕ ಕೆಳಕ್ಕೆ ಜಾರಿತ್ತು.
ಮುಂಬೈ ಷೇರು ಪೇಟೆ ನಿರಂತರ ಆರನೇ ದಿನವೂ ನಷ್ಟದ ಹಾದಿಯಲ್ಲಿ ಸಾಗಿದೆ. ಇಂದು ಬಜಾಜ್ ಆಟೋ, ಬಜಾಜ್ ಫೈನಾನ್ಸ್, ಆರ್‌ಐಎಲ್, ಒಎನ್‌ಜಿಸಿ, ಎಚ್‌ಡಿಎಫ್ಸಿ, ಎಚ್‌ಯುಎಲ್ ಮತ್ತು ಎಸ್‌ಬಿಐ ಷೇರುಗಳು ಶೇ.1.57ರ ಕುಸಿತ ಕಂಡವು.
ಬೆಳಿಗ್ಗೆ 10.40ರ ಸುಮಾರಿಗೆ ಸೆನ್ಸೆಕ್ಸ್ ಸೂಚ್ಯಂಕ 275.15 ಅಂಕಗಳ ನಷ್ಟದೊಂದಿಗೆ 38,001.48 ಅಂಶಗಳಲ್ಲಿ, ನಿಫ್ಟಿ ಸೂಚ್ಯಂಕ 84.30 ಅಂಕ ನಷ್ಟದೊಂದಿಗೆ 11,413.60 ಅಂಕಗಳಲ್ಲಿ ವ್ಯವಹಾರ ನಡೆಸಿದ್ದವು. ಅದೇ ರಿತಿ ಮದ್ಯಾಹ್ನ 1 ಗಂಟೆಗೆ ಸೆನ್ಸೆಕ್ಸ್ 351.59 ಪಾಯಿಂಟ್ ನಷ್ಟದೊಂದಿಗೆ, 37,925 ಅಂಶ ಹಾಗು ನಿಪ್ಟಿ ಸೂಚ್ಯಂಕ 76.85 ಪಾಯಿಂಟ್ ನೊಂದಿಗೆ 11,421 ಅಂಕಗಳ ಕುಸಿತದೊಂದಿಗೆ ವಹಿವಾಟು ನಡೆಸುತ್ತಿತ್ತು. ದಿನದಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 20 ಪೈಸೆಗಳ ಕುಸಿತ ಕಂಡು 69.62 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.


Click it and Unblock the Notifications