2013- 2018 ಸಾಲಿನ ಅವಧಿಯಲ್ಲಿ ಬಿನ್ನಿ ಬನ್ಸಾಲ್, ಸಚಿನ್ ಬನ್ಸಾಲ್ ಸೇರಿದಂತೆ ಭಾರತದಲ್ಲಿ ಹೊಸ ಶತಕೋಟ್ಯಧಿಪತಿಗಳು ಹುಟ್ಟಿಕೊಂಡಿದ್ದಾರೆ. ಜೊತೆಗೆ ಇದೇ ಸಮಯಯಲ್ಲಿ ಅನಿಲ್ ಅಂಬಾನಿ ಸೇರಿದಂತೆ ಹಳೆಯ ಶತಕೋಟ್ಯಧಿಪತಿಗಳ ಸಂಪತ್ತು ಕುಸಿದಿದೆ.
ಭಾರತವು ಒಂದೇ ಸಮಯದ ಅಧಿಯಲ್ಲಿ ಸಂಪತ್ತು ಸೃಷ್ಟಿ ಮತ್ತು ಸಂಪತ್ತಿನ ನಷ್ಟವನ್ನು ಎದುರಿಸಿದೆ. ಸೆಲ್ಪ್ ಮೇಡ್ ಉದ್ಯಮಿಗಳು ಉತ್ತಮ ಸಂಪತ್ತಿನೊಂದಿಗೆ ಮೇಲುಗೈ ಸಾಧಿಸಿದರೆ, ಸಾಲದ ಭಾರವಿರುವ ಹಳೆಯ ಕೈಗಾರಿಕೋದ್ಯಮಿಗಳು ನಷ್ಟ ಅನುಭವಿಸಿದ್ದಾರೆ.

2013- 2018 ಸಾಲಿನ ಅವಧಿಯಲ್ಲಿ ಬಿನ್ನಿ ಬನ್ಸಾಲ್, ಸಚಿನ್ ಬನ್ಸಾಲ್ ಸೇರಿದಂತೆ ಭಾರತದಲ್ಲಿ ಹೊಸ ಶತಕೋಟ್ಯಾಧಿಪತಿಗಳು ಹುಟ್ಟಿಕೊಂಡಿದ್ದಾರೆ. ಜೊತೆಗೆ ಇದೇ ಸಮಯಯಲ್ಲಿ ಅನಿಲ್ ಅಂಬಾನಿ ಸೇರಿದಂತೆ ಹಳೆಯ ಶತಕೋಟ್ಯಾಧಿಪತಿಗಳ ಸಂಪತ್ತು ಕುಸಿದಿದೆ.
ಭಾರತದಲ್ಲಿ 2013 ಮತ್ತು 2018ರ ಅವಧಿಯಲ್ಲಿ ಬಿಲಿಯನೇರ್ಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಇದೇ ಅವಧಿಯಲ್ಲಿ 119 ಬಿಲಿಯನೇರ್ ಸೃಷ್ಟಿಯಾಗಿದ್ದಾರೆ ಎಂದು ನೈಟ್ ಫ್ರಾಂಕ್ ವರದಿ ತಿಳಿಸಿದೆ.
ತಂತ್ರಜ್ಞಾನ ವಲಯದ ಉದ್ಯಮಗಳಲ್ಲಿ ಸ್ವಯಂ ನಿರ್ಮತ ಬಿಲಿಯನೇರ್ ಗಳಾದವರ ಸಂಖ್ಯೆ ಈ ಅವಧಿಯಲ್ಲಿ ಏರಿಕೆ ಕಂಡಿದೆ. ವ್ಯಕ್ತಿಗತವಾಗಿ ಹೆಚ್ಚು ಆದಾಯ ಹೊಂದಿದ ಜನರ ಸೃಷ್ಟಿಯಲ್ಲಿ ಭಾರತವು ಜಗತ್ತಿನಲ್ಲಿ ಮುನ್ನಡೆ ಸಾಧಿಸಿದೆ.
ಹೊಸ ಬಿಲಿಯನೇರ್ ಗಳ ಪಟ್ಟಿಯಲ್ಲಿ ಎಸ್ಸಾರ್ ಗ್ರೂಪ್ ಆರಂಭಿಸಿದ ರವಿ ರಿಯಾ ಮತ್ತು ಶಶಿ ಅವರು ಸ್ಥಾನ ಗಳಿಸಿದ್ದಾರೆ. ಒನ್97 ಕಮ್ಯುನಿಕೇಷನ್ಸ್‌ನ ವಿಜಯ್ ಶೇಖರ್ ಶರ್ಮಾ ಹಾಗು ಥಿಂಕ್ ಆ್ಯಂಡ್ ಲರ್ನ್ ಕಂಪನಿಯ ಬೈಜು ರವೀಂದ್ರನ್ ಹೊಸ ಬಿಲಿಯನೇರ್ ಗಳಾಗಿ ಸ್ಥಾನ ಗಳಿಸಿದ್ದಾರೆ.
ಇದೇ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಯಿಂದ ಏರ್‌ಲೈನ್ಸ್ ವರೆಗಿನ ಕ್ಷೇತ್ರದ ಹಳೆಯ ಬಿಲಿಯನೇರ್ ಗಳು ನಷ್ಟ ಕಂಡಿದ್ದಾರೆ. ಉಲ್ಲೇಖಾರ್ಹವಾದ ಸಂಗತಿಯೆಂದರೆ ಇವರಲ್ಲಿ ಅನೇಕರ ಆಸ್ತಿಗಳನ್ನು ಕೇಂದ್ರ ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ.
ಏಷ್ಯಾದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಅನಿಲ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ನಷ್ಟದಲ್ಲಿದ್ದು, ಇದನ್ನು 2005ರಲ್ಲಿ ಆರಂಭಿಸಿದ್ದರು. ಅನಿಲ್ ಅಂಬಾನಿಯವರ ಸಂಪತ್ತು ಗಣನೀಯವಾಗಿ ಇಳಿದಿದೆ. ಕಿಂಗ್‌ಫಿಷರ್ ಏರ್‌ಲೈನ್ಸ್ ಮೂಲಕ ಆರ್ಥಿಕ ಬಿಕ್ಕಟ್ಟು ಕಂಡ ವಿಜಯ ಮಲ್ಯ ವಿದೇಶಕ್ಕೆ ಹಾರಿದ್ದಾರೆ. ಆದರೆ ಇವರ ಕಂಪನಿ ನಷ್ಟದಲ್ಲಿದ್ದು, ಸಂಪತ್ತು ಗಣನೀಯವಾಗಿ ಕುಸಿದಿದೆ. ಭಾರತದಲ್ಲಿ ಬಿಲಿಯನೇರ್ ಗಳ ಸಂಖ್ಯೆ 2023ರ ಹೊತ್ತಿಗೆ ಶೇ. 39ರಷ್ಟು ವೃದ್ಧಿಯಾಗಲಿದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.


Click it and Unblock the Notifications