ಅಮೆರಿಕ – ಚೀನ ನಡುವಿನ ವಾಣಿಜ್ಯ ಸಮರ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದು, ಇದರ ಪರಿಣಾಮ ಜಾಗತಿಕ ಷೇರುಪೇಟೆಯ ಕುಸಿತಕ್ಕೆ ಕಾರಣವಾಗಿದೆ.
ಅಮೆರಿಕ - ಚೀನ ನಡುವಿನ ವಾಣಿಜ್ಯ ಸಮರ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದು, ಇದರ ಪರಿಣಾಮ ಜಾಗತಿಕ ಷೇರುಪೇಟೆಯ ಕುಸಿತಕ್ಕೆ ಕಾರಣವಾಗಿದೆ.
ಉಭಯ ದೇಶಗಳ ವಾಣಿಜ್ಯ ಸಮರದ ನಡುವೆಯೂ ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 150 ಅಂಕಗಳ ಏರಿಕೆ ಸಾಧಿಸಿತ್ತು.

ಶುಕ್ರವಾರದ ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕ 95.92 ಅಂಕ ಕುಸಿತ ಕಂಡು 37,462.99 ಕ್ಕೆ ತಲುಪಿದೆ. ನಿಫ್ಟಿ 22.90 ಅಂಕ ಕುಸಿತ ಕಂಡು 11,278.90 ಕ್ಕೆ ತಲುಪಿದೆ. 1270 ಷೇರುಗಳು ಕುಸಿತ ಕಂಡರೆ, 162 ಷೇರುಗಳು ಬದಲಾಗಲಿಲ್ಲ.
ಇಂದು ಬೆಳಿಗ್ಗೆ 10.50ರ ವೇಳೆಗೆ ಸೆನ್ಸೆಕ್ಸ್ ಸೂಚ್ಯಂಕ 7.36 ಅಂಕಗಳ ಏರಿಕೆಯೊಂದಿಗೆ 37,566.27 ಅಂಕಗಳ ಚೇತರಿಕೆ ಹಾಗು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಸೂಚ್ಯಂಕ 6.10 ಅಂಕಗಳ ನಷ್ಟದೊಂದಿಗೆ 11,295 ಪಾಯಿಂಟ್ ನಲ್ಲಿ ವಹಿವಾಟು ನಿರತವಾಗಿದ್ದವು.
ಟಾಟಾ ಸ್ಟೀಲ್, ಎಚ್ಸಿಎಲ್ ಟೆಕ್, ಯೆಸ್ ಬ್ಯಾಂಕ್, ಇಂಡಸ್ಲ್ಯಾಂಡ್ ಬ್ಯಾಂಕ್ ಮತ್ತು ಐಓಸಿ ಷೇರುಗಳು ನಷ್ಟವನ್ನು ಅನುಭವಿಸಿವೆ. ಝೀ ಎಂಟರ್ಟೈನ್ಮೆಂಟ್, ಟೈಟಾನ್ ಕಂಪನಿ, ಭಾರ್ತಿ ಏರ್ಟೆಲ್, ಎಸ್ಬಿಐ ಮತ್ತು ಇಂಡಿಯಾಬುಲ್ಸ್ ಹೌಸಿಂಗ್ ಗೇನರ್ ಕಂಪನಿಗಳಾಗಿವೆ.
ಮಿಡ್ ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕವು ಕನಿಷ್ಟ ಲಾಭದೊಂದಿಗೆ ಕೊನೆಗೊಂಡಿತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 7 ಪೈಸೆಯ ನಷ್ಟಕ್ಕೆ ಗುರಿಯಾಗಿ ರೂ. 70.01 ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.


Click it and Unblock the Notifications