ವಿಮಾನ ಪ್ರಯಾಣಿಕರಿಗೆ ಏರ್ ಇಂಡಿಯಾ ಸಿಹಿ ಸುದ್ದಿ ನೀಡಿದ್ದು, ಕೊನೆ ಕ್ಷಣದಲ್ಲಿ ಟಿಕೆಟ್ ಬುಕಿಂಗ್ ಮೇಲೆ ಭಾರೀ ರಿಯಾಯಿತಿ ಘೋಷಣೆ ಮಾಡಿದೆ.
ವಿಮಾನ ಪ್ರಯಾಣಿಕರಿಗೆ ಏರ್ ಇಂಡಿಯಾ ಸಿಹಿ ಸುದ್ದಿ ನೀಡಿದ್ದು, ಕೊನೆ ಕ್ಷಣದಲ್ಲಿ ಟಿಕೆಟ್ ಬುಕಿಂಗ್ ಮೇಲೆ ಭಾರೀ ರಿಯಾಯಿತಿ ಘೋಷಣೆ ಮಾಡಿದೆ.

ಜೆಟ್ ಏರ್ವೇಸ್ ಸಂಸ್ಥೆ ಸ್ಥಗಿತಗೊಂಡ ನಂತರ ವಿಮಾನಯಾನ ಪ್ರಯಾಣಿಕರ ಮೇಲೆ ದೊಡ್ಡ ಪರಿಣಾಮವಾಗಿದ್ದು, ಪ್ರಯಾಣಿಕರು ದುಬಾರಿ ಟಿಕೆಟ್ ಖರೀದಿಸಿ ಪಯಣಿಸುವಂತಾಗಿದೆ.
ಆದರೆ ಸರ್ಕಾರಿ ಸ್ವಾಮ್ಯದ ವೈಮಾನಿಕ ಸಂಸ್ಥೆ ಏರ್ ಇಂಡಿಯಾ ಕಡೆ ಕ್ಷಣದ ಟಿಕೆಟ್ ಗಳನ್ನು "ಭಾರಿ ರಿಯಾಯಿತಿ" ಯಲ್ಲಿ ಮಾರಾಟ ಮಾಡುವುದಾಗಿ ಶುಕ್ರವಾರ ಪ್ರಕಟಣೆ ಹೊರಡಿಸಿದೆ.
ವಿಮಾನ ಹೊರಡುವ ಮೂರು ಗಂಟೆ ಮೊದಲು ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ಶೇ. 40ರಷ್ಟು ರಿಯಾಯಿತಿ ನೀಡಲು ಏರ್ ಇಂಡಿಯಾ ಮುಂದಾಗಿದೆ. ವಿಮಾನ ಪ್ರಯಾಣಕ್ಕೆ ಕೇವಲ ಮೂರು ಗಂಟೆಗಳ ಮೊದಲ ಬುಕಿಂಗ್ ಮಾಡಲಾಗುವ ಟಿಕೆಟ್ ಗಳಿಗೆ ಸಹ ರಿಯಾಯಿತಿ ಅನ್ವಯವಾಗಲಿದೆ. ಸಾಮಾನ್ಯವಾಗಿ, ಪ್ರಯಾಣಿಕರು ಸರಾಸರಿ ದರಕ್ಕಿಂತ ಕೊನೆ ಕ್ಷಣದ ಬುಕಿಂಗ್ ಮೇಲೆ ಶೇ. 40ಕ್ಕಿಂತ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.
ಏರ್ ಇಂಡಿಯಾ ಕೈಗೊಂಡಿರುವ ನಿರ್ಧಾರ ಪ್ರಯಾಣಿಕರಿಗೆ ವರದಾನವಾಗಲಿದೆ. ರಿಯಾಯಿತಿ ದರದ ಟಿಕೆಟ್ ಗಳನ್ನು ಏರ್ ಇಂಡಿಯಾ ಬುಕಿಂಗ್ ಕೇಂದ್ರಗಳಲ್ಇ, ಎಐ ಆಪ್, ಕಂಪನಿಯ ವೆಬ್ಸೈಟ್ ಮತ್ತು ಏಜೆನ್ಸಿಗಳ ಮೂಲಕ ಪಡೆಯಬಹುದು.
ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸುವ ಗ್ರಾಹಕರಿಗೆ ಇದು ಅನುಕೂಲಕರವಾಗಲಿದ್ದು, ಕೊನೆ ಕ್ಷಣದಲ್ಲಿ ದುಬಾರಿ ಟಿಕೆಟ್ ಕೊಳ್ಳುವುದು ತಪ್ಪಲಿದೆ. ಏರ್ ಇಂಡಿಯಾ ಘೋಷಿಸಿರುವ ಈ ಆಫರ್ ಶನಿವಾರದಿಂದ ಜಾರಿಯಾಗಲಿದೆ. ವಿಮಾನ ಹೊರಡುವ ಮೂರು ಗಂಟೆ ಮೊದಲು ಈ ರಿಯಾಯಿತಿ ದರದ ಟಿಕೆಟ್‌ಗಳು ಸಿಗಲಿವೆ.


Click it and Unblock the Notifications