For Quick Alerts
ALLOW NOTIFICATIONS  
For Daily Alerts

ಏಪ್ರಿಲ್ ನಲ್ಲಿ ಕಾರು ಮಾರಾಟ ಶೇ. 16 ರಷ್ಟು ಕುಸಿತ

ಏಪ್ರಿಲ್ ತಿಂಗಳಲ್ಲಿ ಭಾರತದ ಕಾರು ಮಾರಾಟ ಶೇ. 15.9 ರಷ್ಟು ಕುಸಿದಿದ್ದು, ಕಳೆದ ಎಂಟು ವರ್ಷಗಳಲ್ಲಿಯೇ ಅತೀ ಕೆಟ್ಟ ಸ್ಥಿತಿಗೆ ತಲುಪಿದೆ.

|

ಏಪ್ರಿಲ್ ತಿಂಗಳಲ್ಲಿ ಭಾರತದ ಕಾರು ಮಾರಾಟ ಶೇ. 15.9 ರಷ್ಟು ಕುಸಿದಿದ್ದು, ಕಳೆದ ಎಂಟು ವರ್ಷಗಳಲ್ಲಿಯೇ ಅತೀ ಕೆಟ್ಟ ಸ್ಥಿತಿಗೆ ತಲುಪಿದೆ.

 
ಏಪ್ರಿಲ್ ನಲ್ಲಿ ಕಾರು ಮಾರಾಟ ಶೇ. 16 ರಷ್ಟು ಕುಸಿತ

ಲೋಕಸಭಾ ಚುನಾವಣೆಯ ನಂತರ ಅಧಿಕಾರಕ್ಕೆ ಬರುವ ಹೊಸ ಸರ್ಕಾರದ ನೀತಿಗಳ ಆಧಾರದ ಮೇಲೆ ಮುಂದಿನ ಚೇತರಿಕೆ ನಿರ್ಧಾರವಾಗಲಿದ್ದು, ಇದು ಸಲ್ಪ ಸಮಯಾವಕಾಶ ತೆಗೆದುಕೊಳ್ಳಲಿದೆ ಎನ್ನಲಾಗಿದೆ.
ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (Siam) ಮಾಹಿತಿಯ ಪ್ರಕಾರ, ಜುಲೈ 2018 ರಿಂದ ಇಲ್ಲಿಯವರೆಗೆ ಸತತ ಹತ್ತು ತಿಂಗಳು ಕಾರು ಮಾರಾಟದ ಪ್ರಮಾಣದಲ್ಲಿ ಕುಸಿತ ಕಂಡಿದೆ. ಒಟ್ಟಾರೆ, ವಾಹನ ಉದ್ಯಮವು ಏಪ್ರಿಲ್ ನಲ್ಲಿ 2,001,096 ಘಟಕಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2,380,294 ಮಿಲಿಯನ್ ಯುನಿಟ್ಗಳನ್ನು ಮಾರಾಟ ಮಾಡಲಾಗಿತ್ತು.

 

ವಾಹನ ಉದ್ಯಮವು ಎಲ್ಲಾ ವಿಭಾಗಗಳಲ್ಲಿ ಈ ರೀತಿಯ ಕುಸಿತ ಕಂಡಿರುವುದು ಕಳೆದ 10 ವರ್ಷಗಳಲ್ಲಿ ನೋಡಿರಲಿಲ್ಲ. ಹೊಸ ಹಣಕಾಸು ವರ್ಷದಲ್ಲಿ ಫಲಿತಾಂಶ ಹೇಗಿರಲಿದೆ ನೋಡಬೇಕು ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (Siam) ಉಪ ಮಹಾನಿರ್ದೇಶಕ ಸುಗತೊ ಸೇನ್ ಹೇಳಿದ್ದಾರೆ.
ಎಲ್ಲಾ ವಿಭಾಗಗಳಲ್ಲಿ ಮಾರಾಟ ಕುಸಿತ ಕಂಡಿದ್ದು, ಪ್ರಯಾಣಿಕರ ವಾಹನಗಳ ಮಾರಾಟದಲ್ಲಿ ಶೇ. 17 ರಷ್ಟು ಕುಸಿತ ಕಂಡಿದೆ. ಏಪ್ರಿಲ್ ನಲ್ಲಿ ವಾಹನ ಮಾರಾಟ 247,541 ಯುನಿಟ್ ಗಳಷ್ಟಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 298,504 ಯುನಿಟ್ ಗಳಷ್ಟಿತ್ತು. ನಗರ ಪ್ರದೇಶಗಳಲ್ಲಿ ವಾಹನ ಬೇಡಿಕೆ ಶೇ. 26 ರಷ್ಟು ಹಾಗು ಗ್ರಾಮೀಣ ಭಾಗಗಳಲ್ಲಿ ಶೇ. 16ರಷ್ಟು ಕುಸಿದಿದೆ.

Read more about: india money business
English summary

India's car sales decline 16% in April

India’s car sales saw a decline of 15.9 per cent in April, the worst in eight years.
Story first published: Tuesday, May 14, 2019, 12:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X