For Quick Alerts
ALLOW NOTIFICATIONS  
For Daily Alerts

ಲಕ್ಷಾಧಿಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇಶ ಬಿಟ್ಟು ವಲಸೆ ಹೋಗುತ್ತಿದ್ದಾರೆ: ವರದಿ

ಸುಮಾರು 5,000 ಲಕ್ಷಾಧಿಪತಿಗಳು ಅಥವಾ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳು (HNWIs) ದೇಶವನ್ನು ಬಿಟ್ಟು ವಲಸೆ ಹೋಗಿದ್ದಾರೆ. ಇದು ಭಾರತದ ಒಟ್ಟು ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳ ಪೈಕಿ ಶೇ. 2 ರಷ್ಟಿದೆ.

|

ಸುಮಾರು 5,000 ಲಕ್ಷಾಧಿಪತಿಗಳು ಅಥವಾ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳು (HNWIs) ದೇಶವನ್ನು ಬಿಟ್ಟು ವಲಸೆ ಹೋಗಿದ್ದಾರೆ. ಇದು ಭಾರತದ ಒಟ್ಟು ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳ ಪೈಕಿ ಶೇ. 2 ರಷ್ಟಿದೆ ಎಂದು 2019ರ ಗ್ಲೋಬಲ್ ವೇಲ್ತ್ ಮೈಗ್ರೇಷನ್ ರಿವ್ಯೂ ಹೇಳಿದೆ.

ಲಕ್ಷಾಧಿಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದಾರೆ: ವರದಿ

ಕಳೆದ ವರ್ಷ ದೇಶ ಬಿಟ್ಟು ವಲಸೆ ಹೋದ ಲಕ್ಷಾಧಿಪತಿಗಳ ಪಟ್ಟಿಯಲ್ಲಿ ಭಾರತ ಮೂರನೇ ಅತ್ಯಧಿಕ ಹೊರಹರಿವು ಕಂಡಿತು. ಅಫ್ರಾಏಶಿಯಾ ಬ್ಯಾಂಕ್ ಮತ್ತು ಸಂಶೋಧನಾ ಸಂಸ್ಥೆಯಾಗಿರುವ ನ್ಯೂ ವರ್ಲ್ಡ್ ವೇಲ್ತ್ ತನ್ನ ವರದಿಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

2018 ರಲ್ಲಿ ದೇಶ ಬಿಟ್ಟು ಹೋದ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳ (HNWIs) ಹೊರಹರಿವು ಯುಕೆಗಿಂತಲೂ ವೇಗವಾಗಿತ್ತು. ಕಳೆದ ಮೂರು ದಶಕಗಳಲ್ಲಿ ಯುಕೆ ಲಕ್ಷಾಧಿಪತಿಗಳ ಅತಿಹೆಚ್ಚು ಒಳಹರಿವು ಹೊಂದಿರುವ ದೇಶಗಳಲ್ಲಿ ಸ್ಥಾನ ಪಡೆದಿದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳ (HNWIs) ಒಳಹರಿವು ತೀವ್ರವಾಗಿ ವ್ಯತಿರಿಕ್ತವಾಗಿದೆ. ಭಾರತೀಯ ಆರ್ಥಿಕತೆ ಅಪಾಯಕಾರಿ ದರದಲ್ಲಿ ಬೆಳೆಯುತ್ತಿರುವುದು ಕೂಡ ಲಕ್ಷಾಧಿಪತಿಗಳ ವಲಸೆಗೆ ಕಾರಣವಾಗಿದೆ. ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳು (HNWIs) ದೇಶದ ಅರ್ಧದಷ್ಟು ಸಂಪತ್ತನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

ಮೊದಲೆರಡು ಸ್ಥಾನದಲ್ಲಿ ಚೀನಾ, ರಷ್ಯಾ
ಅಮೆರಿಕಾ ಮತ್ತು ಚೀನಾ ನಡುವಿನ ವಾಣಿಜ್ಯ ಸಮರದ ಪರಿಣಾಮ ದೇಶ ಬಿಟ್ಟು ವಲಸೆ ಹೋದ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳ (HNWIs) ಹೊರಹರಿವಿನ ಪಟ್ಟಿಯಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ. ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾ ವಾಣಿಜ್ಯ ಸಮರದ ಫಲವಾಗಿ ಇನ್ನಷ್ಟು ಬಿಕ್ಕಟ್ಟು ಎದುರಿಸುವ ಸಾಧ್ಯತೆಯಿದೆ.

ರಷ್ಯಾದ ಆರ್ಥಿಕತೆಯು ಅನೇಕ ನಿರ್ಬಂಧಗಳನ್ನು ಎದುರಿಸುತ್ತಿರುವುದರಿಂದ ಲಕ್ಷಾಧಿಪತಿಗಳ ವಲಸೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಲಕ್ಷಾಧಿಪತಿಗಳ ವಲಸೆ ಪಟ್ಟಿಯಲ್ಲಿ ಯುಎಸ್ ಮತ್ತು ಆಸ್ಟ್ರೇಲಿಯಾ ದೇಶಗಳು ಮೇಲಕ್ಕೆರಿವೆ.

ಭಾರತದ ಸಂಪತ್ತು ಉತ್ತಮ ದರದಲ್ಲಿ ಬೆಳವಣಿಗೆ
ವಿಶ್ವಾದ್ಯಂತ ಇದರ ಪ್ರಮಾಣ ಸರಾಸರಿ ಶೇ. 36 ಇದ್ದರೂ, ಭಾರತದಲ್ಲಿ ಶೇ. 48 ರಷ್ಟಿತ್ತು. ಆದರೆ ಮುಂದಿನ ಹತ್ತು ವರ್ಷಗಳಲ್ಲಿ ಭಾರತದ ಒಟ್ಟು ಸಂಪತ್ತು ಉತ್ತಮ ದರದಲ್ಲಿ ಬೆಳವಣಿಗೆಯಾಗಲಿದೆ. 2028 ರ ಹೊತ್ತಿಗೆ ಸಂಪತ್ತು ಉತ್ಪಾದನೆಯ ದೃಷ್ಟಿಯಿಂದ ಭಾರತವು ಯುಕೆ ಮತ್ತು ಜರ್ಮನಿಗಳನ್ನು ಮೀರಿಸಲಿದ್ದು, ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ಸಂಪತ್ತು ಮಾರುಕಟ್ಟೆಯಾಗಲಿದೆ ಎಂದು GWMR ವರದಿ ಹೇಳಿದೆ. ಮುಂದಿನ 10 ವರ್ಷಗಳಲ್ಲಿ ಈ ಬೆಳವಣಿಗೆಯನ್ನು ಹೆಚ್ಚಿಸುವ ನಗರಗಳಲ್ಲಿ ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್ ಅಗ್ರ ಸ್ಥಾನದಲ್ಲಿವೆ.

Read more about: india money gdp finance news
English summary

Millionaires fleeing India in larger numbers: Report

India saw the third highest outflow of wealthy individuals last year. Nearly 5,000 millionaires, or high-net-worth individuals (HNWIs).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X