ವಿಶ್ವದ ಯಶಸ್ವಿ ವಿಮಾನಯಾನ ಇಂಡಿಗೋ ಏರ್ಲೈನ್ ಸಂಸ್ಥೆ ಯುರೋಪ್ ಏಶಿಯಾದಲ್ಲಿ ಕಡಿಮೆ ದರದಲ್ಲಿ ಬಿಸಿನೆಸ್ ಕ್ಲಾಸ್ ನಂತಹ ಸೌಲಭ್ಯ ಹೊಂದಿರುವ ಸೀಟುಗಳನ್ನು ಹೊಂದಲು ಯೋಜಿಸುತ್ತಿದೆ.
ವಿಶ್ವದ ಯಶಸ್ವಿ ವಿಮಾನಯಾನ ಇಂಡಿಗೋ ಏರ್ಲೈನ್ ಸಂಸ್ಥೆ ಯುರೋಪ್ ಏಶಿಯಾದಲ್ಲಿ ಕಡಿಮೆ ದರದಲ್ಲಿ ಬಿಸಿನೆಸ್ ಕ್ಲಾಸ್ ನಂತಹ ಸೌಲಭ್ಯ ಹೊಂದಿರುವ ಸೀಟುಗಳನ್ನು ಹೊಂದಲು ಯೋಜಿಸುತ್ತಿದೆ.

ಪ್ರಸ್ತುತ, ಇಂಡಿಗೋ ಇಸ್ತಾಂಬುಲ್ ವರೆಗೆ ಹಾರಾಟ ನಡೆಸುತ್ತಿದ್ದು, ಇದೀಗ ಬಹುದೂರದ ನೆಟ್ವರ್ಕ್ ನಲ್ಲಿ ಹಾರಾಟ ನಡೆಸಲು ತಯಾರಿ ನಡೆಸುತ್ತಿದೆ. ಆರು ತಿಂಗಳ ಒಳಗಾಗಿ ಯೂರೋಪ್ ನಲ್ಲಿ ಒಂದು ವಿಮಾನ ನಿಲ್ದಾಣವನ್ನು ಪ್ರಾರಂಭಿಸಲು ವಿಮಾನಯಾನ ಸಂಸ್ಥೆ ಉದ್ದೇಶಿಸಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೊನೋಜಾಯ್ ದತ್ತಾ ಕಳೆದ ವಾರ ನವದೆಹಲಿಯ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಇಂಡಿಗೋ ತನ್ನ ಅಗ್ಗದ ಆಫರ್, ಸಮಯಕ್ಕೆ ಸರಿಯಾಗಿ ಹಾರಾಟ ಮತ್ತು ಬೇರೆ ಯಾವುದಕ್ಕೂ ಹೆಚ್ಚಿನ ಚಾರ್ಜ್ ನ್ನು ಮಾಡದೆ ಉತ್ತಮ ಸೇವೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿ ಕೇವಲ ಒಂದು ದಶಕದ ಅವಧಿಯಲ್ಲಿ ಭಾರತದ ಅರ್ಧದಷ್ಟು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ.
ಸುದೀರ್ಘ ಪ್ರಯಾಣದ ಯೋಜನೆಗಳಲ್ಲಿ ಪ್ರಯಾಣಿಕರಿಗೆ ಸಂತೋಷದಯಕವಾಗಿಸಲು ಪ್ರಯಾಣದ ಅವಧಿಯಲ್ಲಿ ಅಗತ್ಯ ಸೌಕರ್ಯಗಳನ್ನು ಪೂರೈಸಲು ಪ್ರಾಮುಖ್ಯತೆ ನೀಡಲಾಗುತ್ತದೆ ಎಂದಿದ್ದಾರೆ.
ಏಳೆಂಟು ತಾಸುಗಳ ಸುದೀರ್ಘ ಪ್ರಯಾಣಗಳಲ್ಲಿ ಪ್ರಯಾಣಿಕರು ದಣಿಯುತ್ತಾರೆ. ಜನರು ಸ್ನಾನಗೃಹಗಳನ್ನು ಬಳಸಲು ಹಾಗು ಆಗಾಗ್ಗೆ ತಿನ್ನಲು ಇಷ್ಟಪಡುತ್ತಾರೆ. ಹೀಗಾಗಿ ಇಂತಹ ಬದಲಾವಣೆಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ದತ್ತಾ ಹೇಳಿದ್ದಾರೆ. ನಾವು ನಮ್ಮ ಸೇವೆಯನ್ನು ಪುನರ್ವಿನ್ಯಾಸ ಮಾಡಬೇಕು. ಹೆಚ್ಚು ಆಹಾರ, ಹೆಚ್ಚು ಬಿಸಿ ಟವೆಲ್ ನಂತಹ ಅಗತ್ಯ ಸೇವೆಗಳನ್ನು ಪೂರೈಸಿ ಬಿಸಿನೆಸ್ ಕ್ಲಾಸ್ ಗೆ ಪ್ರಾಮುಖ್ಯತೆ ನೀಡುತ್ತೇವೆ ಎಂದಿದ್ದಾರೆ.
ಇಂಡಿಗೊ ಈಗಾಗಲೇ 53 ದೇಶೀಯ ಮತ್ತು 18 ಅಂತರರಾಷ್ಟ್ರೀಯ ಮಾರ್ಗಗಳ ಮಧ್ಯೆ ಸಂಪರ್ಕ ಹೊಂದಿದೆ. ಅಂತರಾಷ್ಟ್ರೀಯ ಮಾರ್ಗಗಳ ನಡುವೆ ಇನ್ನೂ ಹೆಚ್ಚಿನ ಸಂಪರ್ಕ ಹೊಂದಲು ಯೋಜನೆ ನಡೆಸುತ್ತಿದೆ ಎಂದು ದತ್ತಾ ಹೇಳಿದ್ದಾರೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications