ಸೌದಿ ಅರೇಬಿಯಾದಲ್ಲಿನ ಸೌದಿ ಅರಾಮ್ಕೋ ತೈಲ ಪೈಪ್ ಲೈನ್ ಎರಡು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಯೆಮೆನ್ ಬಂಡುಕೋರರು ಡ್ರೋನ್ ದಾಳಿ ನಡೆಸಿದ್ದಾರೆ ಎಂದು ಅಧಿಕೃತ ಸೌದಿ ಪ್ರೆಸ್ ಏಜೆನ್ಸಿ (SPA) ವರದಿ ಮಾಡಿದೆ.
ಸೌದಿ ಅರೇಬಿಯಾದಲ್ಲಿನ ಸೌದಿ ಅರಾಮ್ಕೋ ತೈಲ ಪೈಪ್ ಲೈನ್ ಎರಡು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಯೆಮೆನ್ ಬಂಡುಕೋರರು ಡ್ರೋನ್ ದಾಳಿ ನಡೆಸಿದ್ದಾರೆ ಎಂದು ಅಧಿಕೃತ ಸೌದಿ ಪ್ರೆಸ್ ಏಜೆನ್ಸಿ (SPA) ವರದಿ ಮಾಡಿದೆ.

ಮಂಗಳವಾರ ಮುಂಜಾನೆ ಇರಾನ್ ಜೊತೆಗೆ ಸ್ನೇಹವಿರುವ ಯೆಮೆನ್ ಬಂಡುಕೋರರು ಸೌದಿ ಅರೇಬಿಯಾದ ಪ್ರಮುಖ ಎರಡು ತೈಲ ಪಂಪಿಂಗ್ ಕೇಂದ್ರಗಳ ಮೇಲೆ ದಾಳಿ ನಡೆಸಿರುವ ಪರಿಣಾಮ ಸೌದಿ ಅರೇಬಿಯಾ ಪ್ರಮುಖ ಆಯಿಲ್ ಪೈಪ್‌ಲೈನ್‌ನ ಕಾರ್ಯಾಚರಣೆ ಸ್ಥಗಿತಗೊಂಡಿದೆ.
ಸೌದಿ ಅರೇಬಿಯಾದ ಇಂಧನ ಸಚಿವ ಖಾಲಿದ್ ಅಲ್ ಫಾಲಿಹ್ ದಾಳಿಯನ್ನು ಖಂಡಿಸಿದ್ದು, ಇದೊಂದು ವಿದ್ವಂಸಕ ಕೃತ್ಯ ಎಂದಿದ್ದಾರೆ. ಇದು ತಾತ್ಕಾಲಿಕವಾಗಿದ್ದು, ಶೀಘ್ರದಲ್ಲೇ ಎಲ್ಲವೂ ಹದಬಸ್ತಿಗೆ ಬರಲಿದೆ. ತೈಲ ರಪ್ತು ಮತ್ತು ಉತ್ಪಾದನೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಈಸ್ಟ್ ವೆಸ್ಟ್ ಪೈಪ್‌ಲೈನ್‌ನಲ್ಲಿ ದಿನವೊಂದಕ್ಕೆ 50 ಲಕ್ಷ ಬ್ಯಾರೆಲ್ ತೈಲವನ್ನು ಪಂಪ್ ಮಾಡಲಾಗುತ್ತದೆ. ಪ್ರಸ್ತುತ ಈ ಪೈಪ್‌ಲೈನ್ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ಖಾಲಿದ್ ಅಲ್-ಫಾಲಿಹ್ ತಿಳಿಸಿದ್ದಾರೆ.
ಇಂತಹ ದಾಳಿಗಳಿಂದಾಗಿ ಜಾಗತಿಕ ತೈಲ ಬೆಲೆಗಳು ಏರಿಕೆಯಾಗಲಿವೆ. ಇದು ವಿಶ್ವ ತೈಲ ಸರಬರಾಜು ಭದ್ರತೆ ಮೇಲೂ ಪರಿಣಾಮ ಬೀರಲಿದೆ. ಸೌದಿ ಅರೇಬಿಯಾವು ಇಂತಹ ಹೇಡಿತನದ ದಾಳಿಗಳನ್ನು ಖಂಡಿಸುತ್ತದೆ ಎಂದಿದೆ.
ಅಮೆರಿಕ ಮತ್ತು ಸೌದಿ ಅರೇಬಿಯಾವು ಯೆಮೆನ್ ಯುದ್ಧದಲ್ಲಿ ಹಸ್ತಕ್ಷೇಪ ಮಾಡಿದ್ದು, ಯೆಮೆನ್‌ನ ನಾಗರಿಕರ ಹತ್ಯಾಕಾಂಡ ನಡೆಸುತ್ತಿದ್ದು, ಇದಕ್ಕೆ ನಾವು ಪ್ರತೀಕಾರ ತೀರಿಸುತ್ತಿದ್ದೇವೆ ಎಂದು ಬಂಡುಕೋರರು ಹೇಳಿಕೊಂಡಿದ್ದಾರೆ.


Click it and Unblock the Notifications