ಸೋಮವಾರದಂದು ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 1,421.90 ಪಾಯಿಂಟ್ ಗಳ ಜಿಗಿತದೊಂದಿಗೆ ದಿನದ ವಹಿವಾಟನ್ನು ಮುಗಿಸಿತ್ತು. ಆದರೆ ಮಂಗಳವಾರದ ದಿನದ ವಹಿವಾಟಿನ ಅಂತ್ಯಕ್ಕೆ 382.87 ಅಂಕ ನಷ್ಟ ಕಂಡಿದೆ.
ಸೋಮವಾರದಂದು ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 1,421.90 ಪಾಯಿಂಟ್ ಗಳ ಜಿಗಿತದೊಂದಿಗೆ ದಿನದ ವಹಿವಾಟನ್ನು ಮುಗಿಸಿತ್ತು. ಆದರೆ ಮಂಗಳವಾರದ ದಿನದ ವಹಿವಾಟಿನ ಅಂತ್ಯಕ್ಕೆ 382.87 ಅಂಕ ನಷ್ಟ ಕಂಡಿದೆ.

ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ದಿನದ ವಹಿವಾಟನ್ನು ಮುಗಿಸಿದಾಗ 382.87 ಪಾಯಿಂಟ್ ನಷ್ಟದೊಂದಿಗೆ 39,571.73 ಅಂಶಗಳಲ್ಲೂ, ರಾಷ್ಟ್ರೀಯ ಷೇರು ಪೇಟೆಯ ನಿಫ್ಟಿ ಸೂಚ್ಯಂಕ 119.15 ಅಂಕಗಳ ನಷ್ಟ ಕಂಡಿದ್ದು, ದಿನದ ವಹಿವಾಟನ್ನು 11,709.10 ಅಂಕಗಳಲ್ಲಿ ಕೊನೆಗೊಳಿಸಿದೆ.
ಷೇರು ಪೇಟೆಯ ಹಿನ್ನಡೆಗೆ ವಹಿವಾಟುದಾರರು ಮತ್ತು ಹೂಡಿಕೆದಾರರಿಂದ ನಡೆದ ವ್ಯಾಪಕ ಲಾಭ ನಗದೀಕರಣದ ಷೇರು ಮಾರಾಟವೇ ಕಾರಣ ಎಂದು ತಜ್ಞರು ಹೇಳಿದ್ದಾರೆ.
ಹೆಚ್ಚು ನಷ್ಟ ಹೊಂದಿದವರಲ್ಲಿ ಟಾಟಾ ಮೋಟರ್ ಶೇ.7.05ರ ಕುಸಿತ ಕಂಡರೆ, ಮಾರುತಿ, ಝೀ ಎಂಟರ್ಟೇನ್ಮೆಂಟ್, ಇಂಡಸ್ ಲ್ಯಾಂಡ್ ಬ್ಯಾಂಕ್, ಮಹೀಂದ್ರ, ಭಾರ್ತಿ ಏರ್‌ಟೆಲ್, ಎಸ್ಬಿಐ, ಪವರ್ ಗ್ರಿಡ್, ಹೀರೋ ಮೋಟೋ ಕಾರ್ಪ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಇನ್‌ಫೋಸಿಸ್, ಯೆಸ್ ಬ್ಯಾಂಕ್, ಟಿಸಿಎಸ್ ಷೇರುಗಳು ನಷ್ಟ ಅನುಭವಿಸಿವೆ.
ಡಾ. ರೆಡ್ಡೀಸ್ ಲ್ಯಾಬ್ಸ್, ಭಾರ್ತಿ ಇನ್ಫ್ರಾಟೆಲ್, ಬ್ರಿಟಾನಿಯ ಇಂಡಸ್ಟ್ರೀಸ್, ಟೈಟಾನ್ ಕಂಪನಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಾಭ ಗಳಿಸಿದ ಪ್ರಮುಖ ಕಂಪನಿಗಳಾಗಿವೆ.
ಬಿಎಸ್ಇ ಸೂಚ್ಯಂಕ ಒಟ್ಟು 2,712 ಕಂಪೆನಿಗಳ ಷೇರುಗಳು ವಹಿವಾಟಿಗೆ ಒಳಪಟ್ಟವು. ಅವುಗಳಲ್ಲಿ 975 ಷೇರುಗಳು ಮುನ್ನಡೆ ಸಾಧಿಸಿದವು, 1,583 ಷೇರುಗಳು ಹಿನ್ನಡೆ ಕಂಡವು, ಉಳಿದಂತೆ 154 ಷೇರುಗಳ ಧಾರಣೆ ಯಾವುದೇ ಬದಲಾವಣೆ ಕಂಡಿಲ್ಲ.


Click it and Unblock the Notifications