ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ವೇತನ ಎಷ್ಟು ಗೊತ್ತೆ?
ದೇಶದ ಎರಡನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ (ಐಟಿ) ಸೇವಾ ಸಂಸ್ಥೆ ಇನ್ಫೋಸಿಸ್, ಕಳೆದ ಹಣಕಾಸು ವರ್ಷದಲ್ಲಿ ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಲೀಲ್ ಪರೇಖ್ ಅವರಿಗೆ ರೂ. 24.67 ಕೋಟಿ ವೇತನ ನೀಡಿದೆ.
ದೇಶದ ಎರಡನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ (ಐಟಿ) ಸೇವಾ ಸಂಸ್ಥೆ ಇನ್ಫೋಸಿಸ್, ಕಳೆದ ಹಣಕಾಸು ವರ್ಷದಲ್ಲಿ ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಲೀಲ್ ಪರೇಖ್ ಅವರಿಗೆ ರೂ. 24.67 ಕೋಟಿ ವೇತನ ನೀಡಿದೆ.

ಇನ್ಫೋಸಿಸ್ ತನ್ನ ವಾರ್ಷಿಕ ವರದಿಯನ್ನು ಬಿಡುಗಡೆಗೊಳಿಸಿದ್ದು, 2018 ರಲ್ಲಿ ಸಿಇಒ ಆಗಿ ನೇಮಕಗೊಂಡ ಸಲೀಲ್ ಪರೇಖ್ ವರ್ಷಕ್ಕೆ ಬರೋಬ್ಬರಿ ರೂ. 24.67 ಕೋಟಿ ವೇತನ ಪಡೆದಿದ್ದಾರೆ ಎಂದು ತಿಳಿಸಿದೆ.
ಇನ್ಫೋಸಿಸ್ ವೇತನದ ರೂಪದಲ್ಲಿ ರೂ. 6.07 ಕೋಟಿ, ಬೋನಸ್ ರೂ. 10.96 ಕೋಟಿ, ವಿವಿಧ ಭತ್ಯೆ ಹಾಗೂ ವೇರಿಯಬಲ್ ಪೇ ರೂಪದಲ್ಲಿ ನೀಡಿದೆ.
ಇನ್ನುಳಿದಂತೆ ಸುಮಾರು 10 ಕೋಟಿಯನ್ನು ಆರ್‌ಎಸ್‌ಯು ಹಾಗೂ ವಿಶೇಷ ಮೊತ್ತವಾಗಿ ನೀಡಲಾಗಿದೆ ಎಂದು ಇನ್ಫಿ ತಿಳಿಸಿದೆ.
ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್, ವಾರ್ಷಿಕ ರೂ. 16 ಕೋಟಿ ವೇತನ ಪಡೆಯಲಿದ್ದಾರೆ ಎಂದ ವರದಿಯಲ್ಲಿ ಹೇಳಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 28ರಷ್ಟು ಹೆಚ್ಚಾಗಿದೆ. ಗೋಪಿನಾಥನ್ ಅವರಿಗೆ ರೂ. 1.16 ಕೋಟಿ ವೇತನ, ರೂ. 1.26 ಕೋಟಿ ವಿಶೇಷ ಭತ್ಯೆ, ರೂ. 13 ಕೋಟಿ ಕಮಿಷನ್ ಸೇರಿ ರೂ. 60 ಲಕ್ಷ ವಿವಿಧ ಭತ್ಯೆ ನೀಡಲಾಗುತ್ತಿದೆ.

Click it and Unblock the Notifications