ಟಾಟಾ ಲ್ಯಾಂಡ್ ರೋವರ್ ಸವಾಲು! 14 ಶತಕೋಟಿ ಡಾಲರ್ ಸಾಲ, ಚೀನಾದಲ್ಲಿ ಬೇಡಿಕೆ ಕುಸಿತ

ಅಮೆರಿಕಾ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ ಜಾಗತಿಕ ಮಾರುಕಟ್ಟೆಯ ಮೇಲೆ ಅತೀ ಕೆಟ್ಟ ಪರಿಣಾಮ ಬೀರಿದ್ದು, ಭಾರತದ ಕಾಪೋರೇಟ್ ಇತಿಹಾಸದಲ್ಲಿ ದಾಖಲೆಯ ನಷ್ಟಕ್ಕೆ ಗುರಿಯಾಗಿ ಜಾಗ್ವಾರ್ ಲ್ಯಾಂಡ್ ರೋವರ್ ಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ.

ಅಮೆರಿಕಾ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ ಜಾಗತಿಕ ಮಾರುಕಟ್ಟೆಯ ಮೇಲೆ ಅತೀ ಕೆಟ್ಟ ಪರಿಣಾಮ ಬೀರಿದ್ದು, ಭಾರತದ ಕಾಪೋರೇಟ್ ಇತಿಹಾಸದಲ್ಲಿ ದಾಖಲೆಯ ನಷ್ಟಕ್ಕೆ ಗುರಿಯಾಗಿ ಜಾಗ್ವಾರ್ ಲ್ಯಾಂಡ್ ರೋವರ್ ಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ.

ಟಾಟಾ ಲ್ಯಾಂಡ್ ರೋವರ್ ಸವಾಲು! 14 ಶತಕೋಟಿ ಡಾಲರ್ ಸಾಲ

2008 ರಲ್ಲಿ ಟಾಟಾ ಗ್ರೂಪ್ ಬ್ರಿಟಿಷ್ ಐಷಾರಾಮಿ ಕಾರು ತಯಾರಕ ಕಂಪನಿಯನ್ನು 2.3 ಶತಕೋಟಿ ಡಾಲರ್ ಗಳಿಗೆ ಖರೀದಿಸಿತು.
ಜಾಗ್ವಾರ್ ಈ ವಾರ 119 ದಶಲಕ್ಷ ಪೌಂಡ್ ಗಳಷ್ಟು (151 ದಶಲಕ್ಷ ಡಾಲರ್) ನಿವ್ವಳ ಆದಾಯವನ್ನು ಪ್ರಕಟಿಸಿದರೂ, ಟಾಟಾ ಮೋಟರ್ಸ್ ಲಿಮಿಟೆಡ್ ಸಾಲವು 14 ಶತಕೋಟಿ ಡಾಲರ್ ನಷ್ಟು ಹೆಚ್ಚಾಗಿದೆ. ವಿಶ್ವದ ದೊಡ್ಡ ವಾಹನ ಮಾರುಕಟ್ಟೆಯಾಗಿರುವ ಚೀನಾದ ಬೇಡಿಕೆಯ ಕುಸಿತ ಪರಿಣಾಮ ಬೀರಿದೆ.
ಚೀನಾದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಬೇಡಿಕೆ ಭಾರೀ ಪ್ರಮಾಣದಲ್ಲಿ ಕುಸಿದಿರುವುದು ಟಾಟಾ ಗ್ರೂಪ್ ಗೆ ತಲೆನೋವಿನ ಸಂಗತಿಯಾಗಿದೆ.

ಜಾಗ್ವಾರ್ ಲ್ಯಾಂಡ್ ರೋವರ್ ಅನೇಕ ರಂಗಗಳಲ್ಲಿ ಮುಖಾಮುಖಿಗಳನ್ನು ಎದುರಿಸುತ್ತಿದೆ. ಯುಎಸ್, ಚೀನಾ ವ್ಯಾಪಾರ ಸಮರದ ಪರಿಣಾಮ, ಜಡ ಬೇಡಿಕೆಯ ಸನ್ನಿವೇಶದ ಹೊರತಾಗಿಯೂ ರಾಜಕೀಯ ಅನಿಶ್ಚಿತತೆ ಮತ್ತು ತಾಂತ್ರಿಕ ಅಡ್ಡಿ ಎದುರಾಗಿದೆ ಎಂದು ಸ್ಟೀವರ್ಟ್ ಮತ್ತು ಮ್ಯಾಕೆರ್ಟಿಕ್ ವೆಲ್ತ್ ಮ್ಯಾನೇಜ್ಮೆಂಟ್ ವಿಶ್ಲೇಷಕ ಡೆಬ್ಜಿತ್ ಮಾಜಿ ಹೇಳಿದ್ದಾರೆ.

ಕಳೆದ 26 ವರ್ಷಗಳ ಅವಧಿಯಲ್ಲಿ ಮುಂಬೈ ಷೇರುಪೇಟೆಯ ವ್ಯಾಪಾರದಲ್ಲಿ ಟಾಟಾ ಮೋಟರ್ಸ್ ಲಿಮಿಟೆಡ್ ಷೇರುಗಳು ಅತಿದೊಡ್ಡ ಕುಸಿತವನ್ನು ಹೊಂದಿವೆ. ಟಾಟಾ ಮೋಟರ್ಸ್ ಕಂಪನಿಯು ತನ್ನ ಐಷಾರಾಮಿ ಜಾಗ್ವಾರ್ ಲ್ಯಾಂಡ್ ರೋವರ್ ಆಟೊಮೋಟಿವ್ ಘಟಕವನ್ನು ಅನಾವರಣಗೊಳಿಸಿದ ನಂತರ ಈ ಭಾರೀ ಕುಸಿತಕ್ಕೆ ಒಳಗಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+