ಜಿಯೋ ಪ್ರವೇಶಾತಿಯು ಟೆಲಿಕಾಂ ಕ್ಷೇತ್ರದ ಪ್ರಮುಖ ಕಂಪನಿಗಳ ಮೇಲೆ ಭಾರೀ ಪ್ರಭಾವವನ್ನೇ ಬೀರಿದ್ದು, ಇದೀಗ ಪ್ರಮುಖ ಕಂಪನಿಗಳ ಚಂದಾದಾರರ ಇಳಿಕೆಗೆ ಕಾರಣವಾಗಿದೆ!
ಜಿಯೋ ಪ್ರವೇಶಾತಿಯು ಟೆಲಿಕಾಂ ಕ್ಷೇತ್ರದ ಪ್ರಮುಖ ಕಂಪನಿಗಳ ಮೇಲೆ ಭಾರೀ ಪ್ರಭಾವವನ್ನೇ ಬೀರಿದ್ದು, ಇದೀಗ ಪ್ರಮುಖ ಕಂಪನಿಗಳ ಚಂದಾದಾರರ ಇಳಿಕೆಗೆ ಕಾರಣವಾಗಿದೆ!
ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್ಟೆಲ್ ಕಂಪನಿಗಳ ಮೊಬೈಲ್ ಚಂದಾದಾರರ ಸಂಖ್ಯೆ ಕ್ರಮವಾಗಿ 14.5 ಮಿಲಿಯನ್ ಮತ್ತು 15.1 ಮಿಲಿಯನ್ ಕುಸಿದಿದೆ. ಕಳೆದ ತಿಂಗಳು ಮಾರ್ಚ್ ನಲ್ಲಿ ರಿಲಯನ್ಸ್ ಜಿಯೋ 9.4 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎಂದು ಟ್ರಾಯ್ ವರದಿ ತಿಳಿಸಿದೆ.

ಮಾರ್ಚ್ 31, 2019 ರಲ್ಲಿ ಭಾರತದ ಒಟ್ಟು ವೈರ್ಲೆಸ್ ಚಂದಾದಾರರ ಸಂಖ್ಯೆ 1,161.8 ಮಿಲಿಯನ್ ಗಳಿಗೆ ಇಳಿದಿದೆ. ಮಾರ್ಚ್ ಅಂತ್ಯದ ವೇಳೆಗೆ ಒಟ್ಟಾರೆ ಟೆಲಿ ಸಾಂದ್ರತೆಯು ಫೆಬ್ರವರಿಯಲ್ಲಿನ 91.86 ರಿಂದ 90.11 ಕ್ಕೆ ಇಳಿದಿದೆ.
ಟ್ರಾಯ್ ಪ್ರಕಾರ, ಮಾರ್ಚ್ 2019 ರ ಕೊನೆಯಲ್ಲಿ ವೊಡಾಫೋನ್ ಐಡಿಯಾದ ವೈರ್ಲೆಸ್ ಚಂದಾದಾರರ ಸಂಖ್ಯೆ 394.8 ಮಿಲಿಯನ್ ಆಗಿತ್ತು. ಕಂಪನಿಯು 2018-19 ರ ಕೊನೆಯ ತ್ರೈಮಾಸಿಕ ವರದಿಯಲ್ಲಿ 334.1 ಮಿಲಿಯನ್ ಬಳಕೆದಾರರನ್ನು ತೋರಿಸಿದೆ. ಮಾರ್ಚ್ 2019 ರ ಹೊತ್ತಿಗೆ ಭಾರ್ತಿ ಏರ್ಟೆಲ್ ಮೊಬೈಲ್ ಚಂದಾದಾರರ ಸಂಖ್ಯೆ 325.1 ಮಿಲಿಯನ್ ಹಾಗು ಪ್ರತಿಸ್ಪರ್ಧಿ ರಿಲಯನ್ಸ್ ಜಿಯೋ 306.7 ಮಿಲಿಯನ್ ಚಂದಾದಾರರನ್ನು ಹೊಂದಿತ್ತು.
ಫೆಬ್ರವರಿ 2019ರ ಅಂತ್ಯದ ವೇಳೆಗೆ ಒಟ್ಟು ವೈರ್ಲೆಸ್ ಚಂದಾದಾರರು 1,183.68 ದಶಲಕ್ಷದಿಂದ ಮಾರ್ಚ್ 2019 ರ ಅಂತ್ಯದ ವೇಳೆಗೆ 1,161.81 ದಶಲಕ್ಷಕ್ಕೆ ಇಳಿದರು. ಇದರಿಂದಾಗಿ 1.85 ಪ್ರತಿಶತದಷ್ಟು ಮಾಸಿಕ ಕುಸಿತ ದಾಖಲಾಗಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ವರದಿ ತಿಳಿಸಿದೆ.


Click it and Unblock the Notifications