ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಬಹುಮತ ಪಡೆದಿರುವ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 400ಕ್ಕಿಂತ ಹೆಚ್ಚು ಪಾಯಿಂಟ್ ಜಿಗಿತ ದಾಖಲಿಸಿ ವಹಿವಾಟು ಆರಂಭಿಸಿತ್ತು
ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಬಹುಮತ ಪಡೆದಿರುವ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 400ಕ್ಕಿಂತ ಹೆಚ್ಚು ಪಾಯಿಂಟ್ ಜಿಗಿತ ದಾಖಲಿಸಿ ವಹಿವಾಟು ಆರಂಭಿಸಿತ್ತು.

ಇಂದು 12 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ ಸೂಚ್ಯಂಕವು 335 ಅಂಕಗಳ ಮುನ್ನಡೆಯೊಂದಿಗೆ 39146 ಅಂಶಗಳ ಮಟ್ಟದಲ್ಲೂ ಹಾಗು ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 98 ಅಂಕಗಳ ಮುನ್ನಡೆಯೊಂದಿಗೆ 11755 ಪಾಯಿಂಟ್ ಗಳಲ್ಲಿ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ 23 ಪೈಸೆ ಏರಿಕೆ ಕಂಡು ರೂ. 69.78 ಮಟ್ಟಕ್ಕೆ ಏರಿಕೆಯಾಗಿದೆ.
ದಿನದ ಮಧ್ಯಂತರದ ವಹಿವಾಟಿನ ಸಂದರ್ಭದಲ್ಲಿ ಲಾರ್ಸನ್, ಭಾರ್ತಿ ಏರ್‌ಟೆಲ್, ಝೀ ಎಂಟರ್ಟೆನ್ಮೆಂಟ್, ಐಶರ್ ಮೋಟರ್ಸ್, ಹೀರೋ ಮೋಟೋಕಾರ್ಪ್, ಎಸ್‌ಬಿಐ, ಟಾಟಾ ಮೋಟರ್, ಬಜಾಜ್ ಫಿನಾನ್ಸ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಲಾಬ ಗಳಿಸಿದ್ದವು.
ನಿನ್ನೆ ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 1,000 ಕ್ಕೂ ಅಧಿಕ ಪಾಯಿಂಟ್ ಭರ್ಜರಿ ಏರಿಕೆ ದಾಖಲಿಸಿ ಮೊದಲ ಬಾರಿಗೆ 40,000 ಅಂಕಗಳ ದಾಖಲೆಯ ಮಟ್ಟವನ್ನು ತಲುಪಿತ್ತು. ಆದರೆ ಲಾಭನಗದೀಕರಣದಿಂದಾಗಿ ದಿನದ ವಹಿವಾಟಿನ ಅಂತ್ಯಕ್ಕೆ 200 ಅಂಕಗಳ ನಷ್ಟ ಕಂಡಿತ್ತು.


Click it and Unblock the Notifications