For Quick Alerts
ALLOW NOTIFICATIONS  
For Daily Alerts

ಆಗಸ್ಟ್ ನಿಂದ ಜಿಎಸ್ಟಿ ಹೊಸ ನಿಯಮ ಜಾರಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಯನ್ನು ಸರಳೀಕೃತಗೊಳಿಸಿ ವೇಗ ನೀಡಲು ವ್ಯವಸ್ಥೆಯು ಆಗಸ್ಟ್ ತಿಂಗಳಿನಿಂದ ಜಾರಿ ಬರಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

|

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಯನ್ನು ಸರಳೀಕೃತಗೊಳಿಸಿ ವೇಗ ನೀಡುವ ವ್ಯವಸ್ಥೆಯು ಆಗಸ್ಟ್ ತಿಂಗಳಿನಿಂದ ಜಾರಿ ಬರಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಸರಕು ಮತ್ತು ಸೇವಾ ತೆರಿಗೆ ಮರುಪಾವತಿ ಪ್ರಕ್ರಿಯೆಗಳಿಗೆ ಮತ್ತು ಅನುಮೋದನೆಗೆ ಸಂಬಂಧಿಸಿದಂತೆ ಏಕ ಪ್ರಾಧಿಕಾರವನ್ನು ಕೇಂದ್ರ ಹಣಕಾಸು ಸಚಿವಾಲಯವು ಆಗಸ್ಟ್‌ನಲ್ಲಿ ಜಾರಿ ತರಲಿದೆ. ರಫ್ತುದಾರರಿಗೆ ಜಿಎಸ್‌ಟಿ ಮರುಪಾವತಿ ತ್ವರಿತ ಮತ್ತು ಸುಲಭಗೊಳಿಸುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ

ಆಗಸ್ಟ್ ನಿಂದ ಜಿಎಸ್ಟಿ ಹೊಸ ನಿಯಮ ಜಾರಿ

ಪ್ರಸ್ತುತ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಜಿಎಸ್ಟಿ ಕಾಯಿದೆ, ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳು ಜಿಎಸ್ಟಿ ಮರುಪಾವತಿಗೆ ಪ್ರತ್ಯೇಕ ಅನುಮೋದನೆ ನೀಡುತ್ತಿದ್ದಾರೆ.
ಕೇಂದ್ರದಿಂದ ಜಿಎಸ್ಟಿ ಮರುಪಾವತಿಗೆ ಅರ್ಜಿ ಸಲ್ಲಿಸಿದ ನಂತರ ಶೇ.50 ರಷ್ಟು ಮೊತ್ತ ಪಾವತಿಯಾಗುತ್ತಿದೆ. ಇನ್ನುಳಿದ ಮೊತ್ತಕ್ಕೆ ರಾಜ್ಯ ತೆರಿಗೆ ಅಧಿಕಾರಿಗಳು ಅನಮೋದನೆ ನೀಡುತ್ತಿದ್ದಾರೆ. ಈ ಪ್ರಕ್ರಿಯೆಯ ಪರಿಣಾಮವಾಗಿ ಪೂರ್ತಿ ಪ್ರಮಾನದ ಮೊತ್ತವು ತೆರಿಗೆದಾರರ ತಲುಪಲು ವಿಳಂಬವಾಗುತ್ತದೆ.
ಇದರ ಬದಲಾಗಿ, ಕೇಂದ್ರ ಮತ್ತು ರಾಜ್ಯದ ಈ ಗೊಂದಲಗಳನ್ನು ಬಗೆಹರಿಯುವ ನಿಟ್ಟಿನಲ್ಲಿ ಆಗಸ್ಟ್ ನಿಂದ ಯಾವುದಾದರೂ ಒಂದು ತೆರಿಗೆ ಇಲಾಖೆಯ ಅಧಿಕಾರಿಗಳು ಮರುಪಾವತಿಗೆ ಅನುಮೋದನೆ ನೀಡಲಿದ್ದಾರೆ ಎನ್ನಲಾಗಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸರಳೀಕೃತ ವ್ಯವಸ್ಥೆ ಜಾರಿಗೊಳಿಸಲು ಆದಾಯ ಇಲಾಖೆ ಕಾರ್ಯಗತವಾಗಿದೆ.
ಜಿಎಸ್ಟಿಯ ಹೊಸ ಮರುಪಾವತಿ ವ್ಯವಸ್ಥೆಯಡಿ ಮರುಪಾವತಿಗೆ ಅರ್ಜಿ ಸಲ್ಲಿಸಿದ ನಂತರ ಕೇಂದ್ರ/ರಾಜ್ಯ ತೆರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಹೊಸ ವ್ಯವಸ್ಥೆ ಜಾರಿಗೆ ವೇಗ ನೀಡಲಿದ್ದಾರೆ.

Read more about: gst income tax money
English summary

GST Council to implement changes in phased manner

A single authority for sanctioning and processing GST refunds is in the offing as the Finance Ministry looks to speed up and simplify the process for exporters, an official said.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X