For Quick Alerts
ALLOW NOTIFICATIONS  
For Daily Alerts

ಭಾರತದ ಆರ್ಥಿಕ ಬೆಳವಣಿಗೆಗೆ ಅಡಚಣೆ, ಜಿಡಿಪಿ ಶೇ. 7ಕ್ಕಿಂತ ಕಡಿಮೆ ಇರಲಿದೆ

2018-19ರ ಸಾಲಿನಲ್ಲಿ ನಾಲ್ಕನೇ ತ್ರೈಮಾಸಿಕದ ಕಳಪೆ ಪ್ರದರ್ಶನದಿಂದಾಗಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ. 7ಕ್ಕಿಂತ ಕಡಿಮೆ ಇರಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ವರದಿ ಹೇಳಿದೆ.

|

2018-19ರ ಸಾಲಿನಲ್ಲಿ ನಾಲ್ಕನೇ ತ್ರೈಮಾಸಿಕದ ಕಳಪೆ ಪ್ರದರ್ಶನದಿಂದಾಗಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ. 7ಕ್ಕಿಂತ ಕಡಿಮೆ ಇರಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ವರದಿ ಹೇಳಿದೆ.

 

ಆರ್ಥಿಕ ಬೆಳವಣಿಗೆಗೆ ಅಡಚಣೆ, ಜಿಡಿಪಿ ಶೇ. 7ಕ್ಕಿಂತ ಕಡಿಮೆ ಇರಲಿದೆ

ಮಾರ್ಚ್ ತಿಂಗಳಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಶೇ. 5.9ಕ್ಕಿಂತ ಕಡಿಮೆ ಎಂದು ನಿರೀಕ್ಷಿಸಲಾಗಿತ್ತು. ಕಳೆದ ಕೆಲವು ವರ್ಷಗಳಲ್ಲೇ ಭಾರತ ತನ್ನ ಕೆಟ್ಟ ಆರ್ಥಿಕ ಕುಸಿತವನ್ನು ಎದುರಿಸಲಿದೆ ಎಂದು ವರದಿ ತಿಳಿಸಿದೆ.
ಬೆಳವಣಿಗೆ ಕುಸಿತವು ಬರಲಿರುವ ಎರಡು ತಿಂಗಳ ಹಣಕಾಸು ನೀತಿ ಸಭೆಯಲ್ಲಿ ದರವನ್ನು ಕಡಿತಗೊಳಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು (ಆರ್ಬಿಐ) ಪ್ರೇರೆಪಿಸಲಿದೆ. ವರದಿ ಪ್ರಕಾರ, ದರ ಕಡಿತವು ಶೇಕಡಾ 0.50 ರಷ್ಟಿರುತ್ತದೆ.
ಪೂರ್ಣ ವರ್ಷದ ಬೆಳವಣಿಗೆ (2018-19) ಎಸ್ಬಿಐ ಆರ್ಥಿಕ ಸಂಶೋಧಕರ ಅಂದಾಜಿನ ಪ್ರಕಾರ, ಹಿಂದಿನ ದತ್ತಾಂಶಗಳಿಗೆ ವಿರುದ್ಧವಾಗಿ ಬೆಳವಣಿಗೆ ಶೇ. 6.9 ಕ್ಕೆ ಬರಬಹುದು. ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತಾತ್ಕಾಲಿಕ ದತ್ತಾಂಶವನ್ನು ಘೋಷಿಸಬಹುದಾಗಿದೆ.
ಹಣಕಾಸು ವರ್ಷ ೨೦೧೯ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 6.1ರಷ್ಟು ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸುತ್ತೇವೆ. GVA (gross value added) ಬೆಳವಣಿಗೆ ಶೇ. 6ರಷ್ಟು ಅಥವಾ ಶೇ. 6 ರಿಂದ ಶೇ. 5.9 ಕ್ಕೆ ಕುಸಿಯಬಹುದು. ವರ್ಷದ ಜಿಡಿಪಿ ಬೆಳವಣಿಗೆ ಶೇ. 6.9 ರಷ್ಟಿರುತ್ತದೆ ಎಂದು ವರದಿ ಹೇಳಿದೆ.

ವರದಿಯ ಪ್ರಕಾರ, ಸರ್ಕಾರವು ಸರಿಯಾದ ನೀತಿಗಳನ್ನು ಜಾರಿಗೊಳಿಸಿದಲ್ಲಿ ಬೆಳವಣಿಗೆ ಕುಸಿತವನ್ನು ತಡೆಗಟ್ಟಬಹುದು. ಹೆಚ್ಚಿನ ಬಡ್ಡಿದರಗಳು ಹೂಡಿಕೆಗೆ ಅಡಚಣೆಯಾಗುತ್ತಿವೆ. ಆರ್ಬಿಐ ಈ ವರ್ಷದ ತನ್ನ ಎರಡನೇ ವಿತ್ತೀಯ ನೀತಿ ಸಭೆಯನ್ನು ಜೂನ್ 6 ರಂದು ನಡೆಸಲಿದೆ ಎಂದು ತಿಳಿಸಿದೆ.

Read more about: gdp economy india money
English summary

India faces growth hurdle, GDP for entire fiscal likely below 7%

A report by State Bank of India (SBI) indicated that the country's GDP growth for 2018-19 is likely to come in below 7 per cent due to a poor fourth quarter performance.
Story first published: Wednesday, May 29, 2019, 13:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X