ಜಾಗತಿಕ ಷೇರುಪೇಟೆಗಳಲ್ಲಿ ಎದುರಾದ ದೌರ್ಬಲ್ಯ ಮತ್ತು ಹೊಸದಾಗಿ ಆರಂಭಗೊಂಡಿರುವ ವಿದೇಶೀ ಬಂಡವಾಳದ ಹೊರ ಹರಿವಿನ ಕಾರಣ ದೇಶೀ ಷೇರುಪೇಟೆ ಮೇಲೆ ಪ್ರಭಾವ ಬೀರಿತು.
ಜಾಗತಿಕ ಷೇರುಪೇಟೆಗಳಲ್ಲಿ ಎದುರಾದ ದೌರ್ಬಲ್ಯ ಮತ್ತು ಹೊಸದಾಗಿ ಆರಂಭಗೊಂಡಿರುವ ವಿದೇಶೀ ಬಂಡವಾಳದ ಹೊರ ಹರಿವಿನ ಕಾರಣ ದೇಶೀ ಷೇರುಪೇಟೆ ಮೇಲೆ ಪ್ರಭಾವ ಬೀರಿತು.

ಬುಧವಾರದ ಆರಂಭಿಕ ವಹಿವಾಟಿನ ಸಂದರ್ಭದಲ್ಲಿ ಮುಂಬಯಿ ಷೇರು ಪೇಟೆ ಹಿನ್ನಡೆ ಅನುಭವಿಸಿತು. ಇಂದಿನ ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕ 247 ಪಾಯಿಂಟ್ ಕುಸಿತದೊಂದಿಗೆ 39502 ರ ಮಟ್ಟದಲ್ಲೂ ಹಾಗು ನಿಫ್ಟಿ ಸೂಚ್ಯಂಕ 67 ಅಂಕ ಇಳಿಕೆ ಕಂಡು 11861 ಅಂಶಗಳಲ್ಲಿ ವಹಿವಾಟು ನಡೆಸಿತು.
ಇಂದು ಬೆಳಿಗ್ಗೆ ಸುಮಾರು 10.45ಕ್ಕೆ ಸೆನ್ಸೆಕ್ಸ್ ಸೂಚ್ಯಂಕ 85.06 ಪಾಯಿಂಟ್ ನಷ್ಟದೊಂದಿಗೆ 39,664.67 ಮಟ್ಟದಲ್ಲೂ ನಿಫ್ಟಿ ಸೂಚ್ಯಂಕ 23.80 ಅಂಕಗಳ ನಷ್ಟದೊಂದಿಗೆ 11,905.00 ಅಂಕಗಳ ಮಟ್ಟದಲ್ಲೂ ವಹಿವಾಟು ನಡೆಸಿದ್ದವು.
ಬೆಳಿಗ್ಗೆ ಡಾಲರ್ ಎದುರು ರೂಪಾಯಿ ಇಂದು 14 ಪೈಸೆಗಳ ಹಿನ್ನಡೆಯನ್ನು ಕಂಡು 69.83 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ಸುಮಾರು 1051 ಷೇರುಗಳು ಮುಂದುವರಿದರೆ, 1493 ಷೇರುಗಳು ಕುಸಿದವು ಮತ್ತು 156 ಷೇರುಗಳು ಯಥಾಸ್ಥಿತಿಯಲ್ಲಿದ್ದವು.
ಜೆಎಸ್ಡಬ್ಲ್ಯೂ ಸ್ಟೀಲ್, ಎಸ್ಬಿಐ, ಟಾಟಾ ಸ್ಟೀಲ್, ಸಿಪ್ಲಾ ಮತ್ತು ಝೀ ಎಂಟರ್ಟೇನ್ಮೆಂಟ್ ಷೇರುಗಳು ನಿಫ್ಟಿಯಲ್ಲಿ ಭಾರೀ ನಷ್ಟ ಅನುಭವಿಸಿದವು. ಸನ್ ಫಾರ್ಮಾ, ಭಾರ್ತಿ ಇನ್ಫ್ರಾಟೆಲ್, ಟಿಸಿಎಸ್ ಮತ್ತು ಎಚ್ಸಿಎಲ್ ಟೆಕ್ ಕಂಪನಿಗಳು ಲಾಭ ಗಳಿಸಿದವು.
ಇಂದು ಬೆಳಗ್ಗಿನ ವಹಿವಾಟಿನ ಸಂದರ್ಭಲ್ಲಿ ಭಾರ್ತಿ ಇನ್ಫ್ರಾಟೆಲ್, ಟಿಸಿಎಸ್, ಎಚ್‌ಸಿಎಲ್ ಟೆಕ್, ಗೇಲ್, ವಿಪ್ರೋ ಲಾಭದಲ್ಲಿದ್ದರೆ, ವೇದಾಂತ, ಒಎನ್‌ಜಿಸಿ, ಇಂಡಿಯಾ ಬುಲ್ಸ್ ಹೌಸಿಂಗ್, ಝೀ ಎಂಟರ್‌ಟೇನ್‌ಮೆಂಟ್, ಯುಪಿಎಲ್ ನಷ್ಟದಲ್ಲಿದ್ದವು.


Click it and Unblock the Notifications