ಇರಾನ್ ನಿಂದ ತೈಲ ಆಮದು ಪುನರಾರಂಭಿಸುವ ಭಾರತದ ಪ್ರಯತ್ನಕ್ಕೆ ಯುಎಸ್ ಹೇಳಿದ್ದೇನು?

ಇರಾನ್ ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಭಾರತ ಒಳಗೊಂಡಂತೆ ಇತರೆ ಏಳು ದೇಶಗಳಿಗೆ ಯುಎಸ್ ಸೂಚನೆ ನೀಡಿ, ಮೇ 1ರ ನಂತರ ವಿನಾಯಿತಿ ಮುಂದುವರೆಸುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

ಇರಾನ್ ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಭಾರತ ಒಳಗೊಂಡಂತೆ ಇತರೆ ಏಳು ದೇಶಗಳಿಗೆ ಯುಎಸ್ ಸೂಚನೆ ನೀಡಿ, ಮೇ 1ರ ನಂತರ ವಿನಾಯಿತಿ ಮುಂದುವರೆಸುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

ಇರಾನ್  ತೈಲ ಆಮದು ಪುನರಾರಂಭಿಸುವ  ಪ್ರಯತ್ನಕ್ಕೆ ಯುಎಸ್ ಹೇಳಿದ್ದೇನು

ಯುಎಸ್ ನಿರ್ಬಂಧಗಳ ಹೊರತಾಗಿಯೂ ಇರಾನ್ ನಿಂದ ತೈಲ ಆಮದನ್ನು ಪುನರಾಂಭಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರೂ ಉಲ್ಲೇಖಿಸಿರುವುದನ್ನು ಅಮೆರಿಕ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪುನರುಚ್ಚಿಸಿದೆ.
ಇರಾನ್ ನಿಂದ ತೈಲವನ್ನು ಆಮದು ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಮೇ 2 ರ ನಂತರ ಹೊಸ ವಿನಾಯಿತಿಗಳಿಲ್ಲ ಎಂದು ಅಮೆರಿಕಾ ಹೇಳಿದ್ದು, ನಮ್ಮ ನಿರ್ಧಾರ ಸಾಕಷ್ಟು ದೃಢವಾಗಿದೆ ಎಂದು ಯುಎಸ್ ಪ್ರಶ್ನೆಯೊಂದಕ್ಕೆ ಉತ್ತರಿಸಿದೆ.
ಇರಾನ್ ನಿಂದ ತೈಲ ಆಮದು ಮಾಡುವುದರ ಮೇಲೆ ಯುಎಸ್ ನಿರ್ಬಂಧ ಹೇರಿದ ನಂತರ ಮೇ 2ರಿಂದ ಭಾರತವು ತೈಲ ಆಮದು ನಿಲ್ಲಿಸಿದೆ ಎಂದು ಕಳೆದ ವಾರ ಅಮೆರಿಕದ ಭಾರತ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲಿರುವ ನರೇಂದ್ರ ಮೋದಿ ಸರಕಾರವು ತೈಲ ಆಮದುಗಳನ್ನು ಪುನರಾರಂಭಿಸಲು ಅನುಮತಿಸುವ ಕ್ರಮಗಳನ್ನು ಚರ್ಚಿಸಲು ತಕ್ಷಣವೇ ಇರಾನಿನೊಂದಿಗೆ ಮಾತುಕತೆ ನಡೆಸಲಿದೆ ಎಂದು ಸರ್ಕಾರಿ ಮೂಲಗಳು ನಿನ್ನೆ ತಿಳಿಸಿದ್ದವು.
ಇರಾನ್‌ನಿಂದ ತೈಲ ಆಮದು ಸ್ಥಗಿತಗೊಂಡರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆಯಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+