For Quick Alerts
ALLOW NOTIFICATIONS  
For Daily Alerts

ಏರ್ ಇಂಡಿಯಾಗೆ ಅಘಾತ! ಬೇರೆಯವರಿಗೆ ಸೇರಿದ 3775 ಕೋಟಿ ಮೌಲ್ಯದ ಭೂಮಿ ನಷ್ಟ

|

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಕೆಲ ವರ್ಷಗಳಿಂದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಏರ್ ಇಂಡಿಯಾ ರೂ. 3775 ಕೋಟಿ ಮೌಲ್ಯದ ಭೂಮಿ ಅಡಮಾನವನ್ನು ತನ್ನದಾಗಿಸಿಕೊಂಡಿತ್ತು. ಬೇರೆಯವರಿಗೆ ಸೇರಿದ ಭೂಮಿಯನ್ನು ಐದು ವರ್ಷಗಳವರೆಗೆ ಈ ಬಗ್ಗೆ ತಿಳಿಸದೇ ಗುತ್ತಿಗೆ ನಿಯಮಗಳ ಉಲ್ಲಂಘನೆ ಮಾಡಿ ಮತ್ತೊಂದು ಸರ್ಕಾರಿ ಘಟಕದ ಮೂಲಕ ಗುತ್ತಿಗೆಗೆ ನೀಡಲಾಯಿತು ಎಂದು ದಿ ಪ್ರಿಂಟ್ ತನಿಖೆ ವರದಿ ಮಾಡಿದೆ.

ಏರ್ ಇಂಡಿಯಾಗೆ ಅಘಾತ! ಬೇರೆಯವರಿಗೆ ಸೇರಿದ 3775 ಕೋಟಿ ಮೌಲ್ಯದ ಭೂಮಿ

 

ಇದೊಂದುವಿ ವಲಕ್ಷಣ ಕಥೆಯಾಗಿದ್ದು, ಇದರಲ್ಲಿ ಏರ್ ಇಂಡಿಯಾ ಅಷ್ಟೇ ಅಲ್ಲ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕುಗಳ ಒಕ್ಕೂಟ, ನಾಗರಿಕ ವಿಮಾನಯಾನ, ಹಣಕಾಸು ಮತ್ತು ಕಾನೂನು ಕೇಂದ್ರ ಸಚಿವರು ಮತ್ತು ಪ್ರಧಾನ ಮಂತ್ರಿ ಕಚೇರಿಗಳ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ.

ದೇಶದ ರಾಜಧಾನಿಯಲ್ಲಿ ಎರಡು ಅವಿಭಾಜ್ಯ ಫ್ಲಾಟ್ ಗಳು ಇದೀಗ ಎಸ್ಬಿಐ ನೇತೃತ್ವದ 19 ಬ್ಯಾಂಕುಗಳ ಒಕ್ಕೂಟದ ಅಧೀನದಲ್ಲಿದ್ದು, ನರೇಂದ್ರ ಮೋದಿ ಸರಕಾರ ಇದನ್ನು ಏರ್ ಇಂಡಿಯಾದ ಸಾಲವನ್ನು ಪಾವತಿಸಲು ಆದಾಯವನ್ನು ಬಳಸುತ್ತಿದೆ. ಆದರೆ ಹೀಗಾಗಬೇಕಾದರೆ ಏರ್ಲೈನ್ಗೆ ಗುತ್ತಿಗೆ ನೀಡಿದ್ದ ಫ್ಲಾಟ್ ಗಳನ್ನು ಏರ್ ಇಂಡಿಯಾ, ಕೇಂದ್ರ ಗೃಹ ಸಚಿವಾಲಯವು ಎಸ್ಬಿಐ ಬ್ಯಾಂಕುಗಳ ಒಕ್ಕೂಟಕ್ಕೆ ಮೊದಲು ಮರುಪಾವತಿಸಬೇಕಾಗಿದೆ.

ಬ್ಯಾಂಕುಗಳ ಒಕ್ಕೂಟವು ಭೂಮಿ ಮೌಲ್ಯವನ್ನು 6 ಸಾವಿರ ಕೋಟಿ ನಿಗದಿಪಡಿಸಿದೆ. ಆದರೆ ಏರ್ ಇಂಡಿಯಾ ರೂ. 55,000 ಕೋಟಿ ಸಾಲವನ್ನು ಹೊಂದಿದೆ.

ವಸತಿ ಸಚಿವಾಲಯ ಮತ್ತು ಏರ್ ಇಂಡಿಯಾ ನಡುವಿನ ಘರ್ಷಣೆಯಲ್ಲಿ ಸಿಲುಕಿಕೊಂಡಿರುವ ಎರಡು ಫ್ಲಾಟ್ ಗಳು ದಕ್ಷಿಣ ದೆಹಲಿಯ ವಸಂತ್ ವಿಹಾರ್ ನಲ್ಲಿದೆ. 1967 ರಲ್ಲಿ ಏರ್ ಇಂಡಿಯಾಕ್ಕೆ 30 ಎಕರೆ ಜಾಗವನ್ನು ರೂ . 65 ಲಕ್ಷ (ಭೂಮಿ ವೆಚ್ಚ) ಮತ್ತು ಏರ್ಲೈನ್ ಸಿಬ್ಬಂದಿಗಳ ವಸತಿ ಗೃಹಗಳಿಗಳ ನಿರ್ಮಾಣಕ್ಕಾಗಿ ವಾರ್ಷಿಕ ಬಾಡಿಗೆ ರೂ. 1.64 ಲಕ್ಷ ಬಾಡಿಗೆಗೆ ಭೂಮಿಯನ್ನು ನೀಡಲಾಗಿತ್ತು.

Read more about: air india airlines money
English summary

Broke Air India mortgaged land worth Rs 3,775 crore — land that belonged to someone else

the state-run flag-carrier was so desperate for funds that it allegedly mortgaged land worth Rs 3,775 crore.
Company Search
Enter the first few characters of the company's name or the NSE symbol or BSE code and click 'Go'
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more