ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಭಾರತ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಪ್ರಮಾಣ ಕಳೆದ 6 ವರ್ಷಗಳಲ್ಲಿಯೇ ಮೊದಲ ಬಾರಿಗೆ ಕುಸಿತ ಕಂಡಿದೆ.
ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಭಾರತ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಪ್ರಮಾಣ ಕಳೆದ 6 ವರ್ಷಗಳಲ್ಲಿಯೇ ಮೊದಲ ಬಾರಿಗೆ ಕುಸಿತ ಕಂಡಿದೆ.

ಗುರುವಾರ ನರೇಂದ್ರ ಮೋದಿಯವರು ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ಸರ್ಕಾರ ಎದುರಿಸುತ್ತಿರುವ ಆರ್ಥಿಕ ನೀತಿ ಸವಾಲುಗಳನ್ನು ಒತ್ತಿ ಹೇಳಿದೆ.
ದೂರಸಂಪರ್ಕ, ಔಷಧ, ವಿದ್ಯುತ್ ಕ್ಷೇತ್ರಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣ ಗಣನೀಯವಾಗಿ ಕುಸಿದಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಅಂಕಿ ಅಂಶಗಳನ್ನು ಪ್ರಕಟಿಸಿದ್ದು, 2018-19ರಲ್ಲಿ 44.4 ಶತಕೋಟಿ ಡಾಲರ್ (ರೂ. 3.10 ಲಕ್ಷ ಕೋಟಿ) ವಿದೇಶಿ ನೇರ ಬಂಡವಾಳ ಹೂಡಿಕೆ ಹರಿದು ಬಂದಿದೆ.
2017-18ರಲ್ಲಿ 44.8 ಶತಕೋಟಿ ಡಾಲರ್( ರೂ. 3.13 ಲಕ್ಷ ಕೋಟಿ) ಹೂಡಿಕೆ ಹರಿದು ಬಂದಿತ್ತು. ದೂರಸಂಪರ್ಕ ವಲಯದ ಎಫ್‌ಡಿಐ ಶೇ. 56ರಷ್ಟು ಇಳಿದಿದೆ. ಔಷಧ ವಲಯ ಶೇ.74 ರಷ್ಟು ( 266 ದಶಲಕ್ಷ ಡಾಲರ್) ಕುಸಿದಿದೆ.
ದೇಶೀಯ ಸೂಚಕಗಳು ಈಗಾಗಲೇ ಅನುಬೋಗ ಮತ್ತು ಹೂಡಿಕೆಯ ಚಟುವಟಿಕೆಯ ಕುಸಿತದ ಬಗ್ಗೆ ಗಮನ ಸೆಳೆಯುವ ಸಮಯದಲ್ಲಿ ಎಫ್ಡಿಐ ಒಳಹರಿವು ಕುಸಿದಿದೆ. ಡಿಸೆಂಬರ್ ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇ. 6.6% ರಷ್ಟು ನಿಧಾನಗತಿಯ ವೇಗದಲ್ಲಿ ಬೆಳೆಯಿತು.
ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಸಿಂಗಾಪುರದಿಂದ ದೊರಕಿದ್ದು, ಮಾರಿಷಸ್ ಎರಡನೇ ಸ್ಥಾನದಲ್ಲಿದೆ. ಸಿಂಗಾಪುರದಿಂದ ರೂ. 1.13 ಲಕ್ಷ ಕೋಟಿ ಹಾಗೂ ಮಾರಿಷಸ್‌ನಿಂದ ರೂ. 57,510 ಕೋಟಿ ಡಾಲರ್ ಲಭಿಸಿದೆ. ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ವಲಯಕ್ಕೆ 6.41 ಶತಕೋಟಿ ಡಾಲರ್, ವಾಣಿಜ್ಯ ಚಟುವಟಿಕೆಗಳಿಗೆ 4.46 ಶತಕೋಟಿ ಡಾಲರ್, ಆಟೊಮೊಬೈಲ್‌ಗೆ 2.62 ಶತಕೋಟಿ ಡಾಲರ್ ಎಫ್ಡಿಐ ದೊರೆತಿದೆ.


Click it and Unblock the Notifications