ರಾಷ್ಟ್ರೀಯ ತಲಾ ಆದಾಯ ಅಂದಾಜು ಶೇ. 10 ಏರಿಕೆ
2019ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ರಾಷ್ಟ್ರೀಯ ತಲಾ ಆದಾಯವು ಅಂದಾಜು ಶೇ.10ಕ್ಕೆ ಏರಿಕೆಯಾಗಿದ್ದು, ಮಾಸಿಕ ರೂ. 10,534ರಷ್ಟು ವೃದ್ಧಿಸಿದೆ ಎಂದು ಸರ್ಕಾರ ಬಿಡುಗಡೆಗೊಳಿಸಿರುವ ಅಂಕಿಅಂಶಗಳು ತಿಳಿಸಿವೆ.
2019ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ರಾಷ್ಟ್ರೀಯ ತಲಾ ಆದಾಯವು ಅಂದಾಜು ಶೇ.10ಕ್ಕೆ ಏರಿಕೆಯಾಗಿದ್ದು, ಮಾಸಿಕ ರೂ. 10,534ರಷ್ಟು ವೃದ್ಧಿಸಿದೆ ಎಂದು ಸರ್ಕಾರ ಬಿಡುಗಡೆಗೊಳಿಸಿರುವ ಅಂಕಿಅಂಶಗಳು ತಿಳಿಸಿವೆ.

ರಾಷ್ಟ್ರೀಯ ಆದಾಯ ಅಂಕಿ ಅಂಶಗಳು ಮತ್ತು ಅನುಷ್ಠಾನ ಇಲಾಖೆಯು ವರದಿಯನ್ನು ಬಿಡುಗಡೆಗೊಳಿಸಿದ್ದು, 2017-18ರಲ್ಲಿ ಮಾಸಿಕ ತಲಾ ಆದಾಯವು ರೂ. 9,580 ರಷ್ಟಿತ್ತು. 2017-18ಲ್ಲಿ ವಾರ್ಷಿಕ ತಲಾ ಆದಾಯವು ರೂ. 1,14,958 ಗಳಾಗಿತ್ತು ಎಂದು ತಿಳಿಸಿದೆ.
ಮಾಸಿಕ ತಲಾ ಆದಾಯದಲ್ಲಿನ ಹೆಚ್ಚಳವು ದೇಶದ ಸಂಪತ್ತಿನಲ್ಲಿ ಉಂಟಾಗಿರುವ ಅಭಿವೃದ್ಧಿಯನ್ನು ಬಿಂಬಿಸುತ್ತದೆ. ದೇಶದ ಒಟ್ಟು ಆದಾಯದಿಂದ ಜನಸಂಖ್ಯೆಯನ್ನು ಭಾಗಿಸಿದಾಗ ತಲಾ ಆದಾಯ ದೊರೆಯುತ್ತದೆ.
ಕಳೆದ ಏಳೆಂಟು ವರ್ಷಗಳಲ್ಲಿ ಭಾರತೀಯರ ಸರಾಸರಿ ಆದಾಯ ದುಪ್ಪಟ್ಟಾಗಿದೆ. 2018-19ರಲ್ಲಿ ಭಾರತದ ಒಟ್ಟಾರೆ ರಾಷ್ಟ್ರೀಯ ಆದಾಯ ಅಂದಾಜು 188.17 ಲಕ್ಷ ಕೋಟಿಗಳಾಗಿದೆ. ಳೆದ ಜನವರಿ-ಮಾರ್ಚ್ ಅವಧಿಯಲ್ಲಿ ಜಿಡಿಪಿ ದರವು ಶೇ. 5.8ಕ್ಕೆ ಇಳಿಕೆಯಾಗಿತ್ತು.
ಪ್ರಸ್ತುತ ಬೆಲೆಗಳಲ್ಲಿ ಒಟ್ಟು ರಾಷ್ಟ್ರೀಯ ಆದಾಯ (ಜಿಎನ್ಐ) 2018-19ರಲ್ಲಿ ರೂ. 188.17 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. 2017-18ರ ಅವಧಿಯಲ್ಲಿ ರೂ. 169.10 ಲಕ್ಷ ಕೋಟಿಗೆ ಹೋಲಿಸಿದರೆ ಶೇ. 11.3ರಷ್ಟು ಏರಿಕೆಯಾಗಿದೆ.
2018-19ರ ಮಾರ್ಚ್ ಅಂತ್ಯದ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಭಾರತದ ಒಟ್ಟಾರೆ ದೇಶೀ ಉತ್ಪನ್ನ ಐದು ವರ್ಷಗಳಲ್ಲೇ ಶೇ. 5.8 ರಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ. ಮುಖ್ಯವಾಗಿ ಕೃಷಿ ಮತ್ತು ಉತ್ಪಾದನಾ ವಲಯದಲ್ಲಿ ಪ್ರಗತಿ ಕುಂಥಿತಗೊಂಡಿರುವುದು ಮುಖ್ಯ ಕಾರಣವಾಗಿದೆ.


Click it and Unblock the Notifications