ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸತತ ಮೂರನೇ ಮೇ ತಿಂಗಳಲ್ಲೂ ಲಕ್ಷ ಕೋಟಿ ಸಂಗ್ರಹವಾಗಿದ್ದು, ರೂ. 1,00,289 ಕೋಟಿ ತಲುಪಿದೆ. ಸತತ ಮೂರನೇ ತಿಂಗಳೂ ಲಕ್ಷ ಕೋಟಿ ತೆರಿಗೆ ಸಂಗ್ರಹವನ್ನು ಕಾಯ್ದುಗೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

2018-19ರ ಆರ್ಥಿಕ ವರ್ಷದ ಸರಾಸರಿ ಜಿಎಸ್ಟಿ ಆದಾಯಕ್ಕೆ ಹೋಲಿಕೆ ಮಾಡಿದರೆ, ಮೇ 2019ರ ಜಿಎಸ್ಟಿ ಆದಾಯವು ಶೇ. 2.21ರಷ್ಟು ವೃದ್ಧಿಯಾಗಿದೆ. 2018ರ ಮಾರ್ಚ್ ಜಿಎಸ್ಟಿ ಸಂಗ್ರಹಕ್ಕೆ ಹೋಲಿಸಿದರೆ ಕಳೆದ ಮೇ ತಿಂಗಳಲ್ಲಿನ ಜಿಎಸ್ಟಿ ಸಂಗ್ರಹವು ಶೇ. 6.77ರಷ್ಟು ಹೆಚ್ಚಾಗಿದೆ. ಆದರೆ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಮೇನಲ್ಲಿ ಜಿಎಸ್ಟಿ ಅಲ್ಪ ಇಳಿಕೆಯಾಗಿದೆ. ಕಳೆದ ಏಪ್ರಿಲ್‌ನಲ್ಲಿ 1,13,865 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದರೆ, ಮಾರ್ಚ್ ತಿಂಗಳಲ್ಲಿ ರೂ. 1,06,577 ಕೋಟಿ ತೆರಿಗೆ ಸಂಗ್ರಹಿಸಲಾಗಿತ್ತು. ಮೇ ತಿಂಗಳಲ್ಲಿ ಕೇಂದ್ರ ಜಿಎಸ್‌ಟಿ ರೂ. 17,811 ಕೋಟಿ, ರಾಜ್ಯ ಜಿಎಸ್ಟಿ ರೂ. 24,462 ಕೋಟಿ ಮತ್ತು ಇಂಟಿಗ್ರೇಟೆಡ್ ಜಿಎಸ್ಟಿ ರೂ. 49,891 ಕೋಟಿ ಸಂಗ್ರಹವಾಗಿತ್ತು. ಏಪ್ರಿಲ್ ತಿಂಗಳ ಆರಂಭದಿಂದ ಮೇ 31ರ ತನಕ ರೂ. 72.45 ಲಕ್ಷ ಜಿಎಸ್ಟಿಆರ್ 3ಬಿ ರಿಟರ್ನ್ಸ್ ದಾಖಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಕಳೆದ 2018-19ರ ಸಾಲಿನಲ್ಲಿ ಅಂದಾಜು ಗುರಿ ಮೀರಿ ಜಿಎಸ್ಟಿ ಸಂಗ್ರಹವಾಗಿತ್ತು. ಒಟ್ಟು ರೂ. 11.77 ಲಕ್ಷ ಕೋಟಿ ಏರಿಕೆಯಾಗಿತ್ತು.

Click it and Unblock the Notifications