ಗೂಳಿ ಅಬ್ಬರ..! ಸೆನ್ಸೆಕ್ಸ್ 553 ಅಂಕ ದಾಖಲು
ಆರ್ಬಿಐ ದ್ವೈಮಾಸಿಕ ಹಣಕಾಸು ನೀತಿಯ ಪರಾಮರ್ಶೆ ಸಭೆ ಇಂದು ಆರಂಭಗೊಂಡಿರುವುದು ಷೇರುಪೇಟೆ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.
ಆರ್ಬಿಐ ದ್ವೈಮಾಸಿಕ ಹಣಕಾಸು ನೀತಿಯ ಪರಾಮರ್ಶೆ ಸಭೆ ಇಂದು ಆರಂಭಗೊಂಡಿರುವುದು ಷೇರುಪೇಟೆ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.

ಆರ್ಬಿಐ ದ್ವೈಮಾಸಿಕ ಹಣಕಾಸು ನೀತಿಯ ಪರಾಮರ್ಶೆಯ ಭಾರೀ ನಿರೀಕ್ಷೆಯೊಂದಿಗೆ ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಆರಂಭಿಕ ವಹಿವಟಿನಲ್ಲಿ 200ಕ್ಕೂ ಅಧಿಕ ಅಂಕಗಳ ನೆಗೆತವನ್ನು ಕಂಡಿತ್ತು.
ಬಿಎಸ್ಇ ಸೆನ್ಸೆಕ್ಸ್ 553.42 ಪಾಯಿಂಟ್ ಗಳೊಂದಿಗೆ 40,267.62 ಕ್ಕೆ ಏರಿಕೆ ಕಂಡಿತು. ನಿಫ್ಟಿ ಸೂಚ್ಯಂಕ 165.70 ಅಂಕ ಏರಿಕೆಯೊಂದಿಗೆ 12,088.50 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತ್ತು.
ಬಜಾಜ್ ಆಟೋ, ಏಶ್ಯನ್ ಪೇಂಟ್ಸ್, ಇಂಡಿಯಾಬುಲ್ಸ್ ಹೌಸಿಂಗ್, ಟಿಸಿಎಸ್, ಎಚ್ಸಿಎಲ್ ಟೆಕ್ನಾಲಜೀಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹೀರೋ ಮೊಟೊಕಾರ್ಪ್ ಪ್ರಮುಖ ಲಾಭ ಗಳಿಸಿವೆ. ಗೈಲ್ (GAIL) ನಷ್ಟ ಅನುಭವಿಸಿತು.
ಕಳೆದ ಶುಕ್ರವಾರದ ಬಿಎಸ್ಇ 118 ಅಂಕಗಳ ನಷ್ಟದೊಂದಿಗೆ ಕೊನೆಗೊಂಡಿದ್ದರೆ, ಎನ್ಎಸ್ಇ ನಿಫ್ಟಿ ಸೂಚ್ಯಂಕ 23 ಅಂಕಗಳ ನಷ್ಟವಾಗಿತ್ತು.
ಇಂದು ಬೆಳಗ್ಗಿನ ವಹಿವಾಟಿನ ಸಂದರ್ಭದಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 10.45ರ ಸುಮಾರಿಗೆ 186 ಅಂಕಗಳ ಮುನ್ನಡೆಯೊಂದಿಗೆ 39,900.46 ಅಂಕಗಳಲ್ಲೂ, ನಿಫ್ಟಿ 52.50 ಅಂಕಗಳ ಮುನ್ನಡೆಯೊಂದಿಗೆ 11,975.30 ಅಂಕಗಳಲ್ಲೂ ವ್ಯವಹಾರ ನಿರತವಾಗಿದ್ದವು.
ಇದೇ ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಲಿದೆ. ಕಳೆದ ಎರಡು ಬಾರಿಯ ಪರಾಮರ್ಶೆಯಲ್ಲಿ ಆರ್‌ಬಿಐ ತಲಾ ಶೇ.0.25ರ ಪ್ರಮಾಣದಲ್ಲಿ ರಿಪೋ ದರ ಕಡಿತ ಮಾಡಿತ್ತು.
ಡಾಲರ್ ಎದುರು ರೂಪಾಯಿ ಮೌಲ್ಯ ಇಂದು ಬೆಳಗ್ಗಿನ ವಹಿವಾಟಿನಲ್ಲಿ ಸಂದರ್ಭದಲ್ಲಿ 31 ಪೈಸೆಗಳ ಏರಿಕೆಯನ್ನು ದಾಖಲಿಸಿ 69.39 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.


Click it and Unblock the Notifications