ಭಾರತದ ಅತ್ಯಧಿಕ ಮೌಲ್ಯದ ಅಗ್ರ 10 ಸಂಸ್ಥೆಗಳ ಪೈಕಿ 6 ಕಂಪನಿಗಳ ಮಾರುಕಟ್ಟೆ ಮೌಲ್ಯವು ರೂ. 99,994 ಕೋಟಿ ವೃದ್ಧಿಸಿದ್ದು, ಕಳೆದ ವಾರದ ಒಟ್ಟು ವಹಿವಾಟಿಗೆ ಸಂಬಂಧಿಸಿದಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮೊದಲನೇ ಸ್ಥಾನ.
ಭಾರತದ ಅತ್ಯಧಿಕ ಮೌಲ್ಯದ ಅಗ್ರ 10 ಸಂಸ್ಥೆಗಳ ಪೈಕಿ 6 ಕಂಪನಿಗಳ ಮಾರುಕಟ್ಟೆ ಮೌಲ್ಯವು ರೂ. 99,994 ಕೋಟಿ ವೃದ್ಧಿಸಿದ್ದು, ಕಳೆದ ವಾರದ ಒಟ್ಟು ವಹಿವಾಟಿಗೆ ಸಂಬಂಧಿಸಿದಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮೊದಲನೇ ಸ್ಥಾನವನ್ನು ಕಾಯ್ದುಗೊಂಡಿದೆ.

ಎಚ್ಡಿಎಫ್ಸಿ ಬ್ಯಾಂಕ್, ಎಚ್‌ಯುಎಲ್, ಎಚ್‌ಡಿಎಫ್‌ಸಿ, ಇನ್ಫೋಸಿಸ್, ಕೋಟಕ್ ಮಹೀಂದ್ರಾ ಬ್ಯಾಂಕುಗಳ ಷೇರುಗಳು ಲಾಭ ಗಳಿಸುವತ್ತ ಮುಖಮಾಡಿವೆ. ಮತ್ತೊಂದೆಡೆ ಪ್ರಮುಖ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಐಟಿಸಿ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ಗಳು ನಷ್ಟ ಕಂಡಿವೆ.
ಟಿಸಿಎಸ್‌ನ ಮೌಲ್ಯವು ರೂ. 55,235 ಕೋಟಿ ಏರಿಕೆಯಾಗಿ, ಒಟ್ಟಾರೆ ಮಾರುಕಟ್ಟೆ ಮೌಲ್ಯ ರೂ. 8,24,342 ಕೋಟಿಗೆ ತಲುಪಿದೆ.
ಎಚ್ಡಿಎಫ್ಸಿ ಮಾರುಕಟ್ಟೆ ಬಂಡವಾಳ ರೂ. 3,75,774.07 ಕೋಟಿ ರೂಪಾಯಿಯಿಂದ ರೂ. 9,538.27 ಕೋಟಿ ಹೆಚ್ಚಳವಾಗಿದೆ. ಹಿಂದೂಸ್ಥಾನ್ ಯೂನಿಲಿವರ್ ಲಿಮಿಟೆಡ್ (ಎಚ್.ಎಲ್.ಎಲ್) ರೂ. 3,86,449.46 ಕೋಟಿಯಿಂದ ರೂ. 7,799.37 ಕೋಟಿ ಮುಂದುವರಿದಿದೆ. ಕೋಟಾಕ್ ಮಹೀಂದ್ರಾ ಬ್ಯಾಂಕಿನ ಮೌಲ್ಯ ರೂ. 1,116.72 ಕೋಟಿ ಏರಿಕೆಯಾಗಿ ರೂ. 2,90,098.18 ಕೋಟಿ ರೂಪಾಯಿಗಳಿಗೆ ತಲುಪಿದೆ.


Click it and Unblock the Notifications