ಸೋಮವಾರದ ದಿನದ ಅಂತ್ಯಕ್ಕೆ ದಾಖಲೆಯ ಗರಿಷ್ಠ ಮಟ್ಟ ತಲುಪಿದ ನಂತರ ಜೂನ್ 4 ರ ಮಂಗಳವಾರದಂದು ದಿನದ ವಹಿವಾಟಿನ ಅಂತ್ಯಕ್ಕೆ ಬೆಂಚ್ಮಾರ್ಕ್ ಸೂಚ್ಯಂಕಗಳು ಕುಸಿತ ಕಂಡವು.
ಸೋಮವಾರದ ದಿನದ ಅಂತ್ಯಕ್ಕೆ ದಾಖಲೆಯ ಗರಿಷ್ಠ ಮಟ್ಟ ತಲುಪಿದ ನಂತರ ಜೂನ್ 4 ರ ಮಂಗಳವಾರದಂದು ದಿನದ ವಹಿವಾಟಿನ ಅಂತ್ಯಕ್ಕೆ ಬೆಂಚ್ಮಾರ್ಕ್ ಸೂಚ್ಯಂಕಗಳು ಕುಸಿತ ಕಂಡವು. ನಿನ್ನೆಯ ಸೋಮವಾರದ ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡಿದ್ದವು.

ಸೆನ್ಸೆಕ್ಸ್ ಸೂಚ್ಯಂಕ 184.08 ಪಾಯಿಂಟ್ ಕುಸಿತ ಕಂಡು 40083.54 ಕ್ಕೆ ತಲುಪಿದೆ. ಜೊತೆಗೆ ನಿಫ್ಟಿ 66.80 ಪಾಯಿಂಟ್ ಕುಸಿತದೊಂದಿಗೆ 12021.70 ಮಟ್ಟ ತಲುಪಿದೆ. ಸುಮಾರು 1108 ಷೇರುಗಳು ಲಾಭ, 1428 ಷೇರುಗಳು ಕುಸಿತ ಮತ್ತು 175 ಷೇರುಗಳು ಯಥಾಸ್ಥಿತಿಯಲ್ಲಿದ್ದವು. ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರು ಪೇಟೆ 15 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಜಾಗತಿಕ ಷೇರುಪೇಟೆಯಲ್ಲಿ ತೋರಿ ಬಂದ ದೌರ್ಬಲ್ಯ, ಆರ್‌ಬಿಐ ಇನ್ನೆರಡು ದಿನಗಳಲ್ಲಿ ಪ್ರಕಟಿಸಲಿರುವ ಹಣಕಾಸು ನೀತಿ ಬಗೆಗಿನ ಕಾತರ ಮೊದಲಾದ ಕಾರಣಗಳಿಗೆ ದೇಶಿ ಷೇರುಪೇಟೆಯಲ್ಲಿ ಉತ್ಸಾಹ ಕಂಡು ಬರಲಿಲ್ಲ.
ಝೀ ಎಂಟರ್ಟೈನ್ಮೆಂಟ್, ಹೀರೋ ಮೊಟೊಕಾರ್ಪ್, ಏಷ್ಯನ್ ಪೇಂಟ್ಸ್, ಎಚ್ಸಿಎಲ್ ಟೆಕ್ ಮತ್ತು ಟಿಸಿಎಸ್ ಕಂಪನಿಗಳು ನಷ್ಟ ಅನುಭವಿಸಿದವು. ಯೆಸ್ ಬ್ಯಾಂಕ್, ಭಾರ್ತಿ ಇನ್ಫ್ರಾಟೆಲ್, ಆಕ್ಸಿಸ್ ಬ್ಯಾಂಕ್, ಎನ್ಟಿಪಿಸಿ ಮತ್ತು ವೇದಾಂತ ಕಂಪನಿಗಳು ಲಾಭ ಗಳಿಸಿವೆ.
ಇಂದು ಡಾಲರ್ ಎದುರು ರೂಪಾಯಿ ಮೌಲ್ಯ 26 ಪೈಸೆಗಳ ಏರಿಕೆಯನ್ನು ಕಂಡು 69.00 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
More From GoodReturns

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications