ಜಿಯೋ ಕ್ರಿಕೆಟ್ ವರ್ಲ್ಡ್ ಕಪ್ ಸೀಸನ್ ಆಫರ್ ಧಮಾಕಾ! ಉಚಿತ ಕ್ರಿಕೆಟ್ ಮ್ಯಾಚ್ ಗಳನ್ನು ಆನಂದಿಸಿ..

ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ಹೊಸ ಯೋಜನೆ ಪರಿಚಯಿಸಿದೆ.ರಿಲಯನ್ಸ್ ಜಿಯೊ ತನ್ನ ಪ್ರಸ್ತುತ ಮತ್ತು ಹೊಸ ಚಂದಾದಾರರಿಗೆ ಜಿಯೋ ಕ್ರಿಕೆಟ್ ಸೀಸನ್ ವಿಶೇಷ ಡೇಟಾ ಪ್ಯಾಕ್ ಘೋಷಿಸಿದೆ.

ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ 2019 ಈಗಾಗಲೇ ಆರಂಭಗೊಂಡಿದ್ದು, ಜಗತ್ತಿನಾದ್ಯಂತ ಇರುವ ಕ್ರಿಕೆಟ್ ಪ್ರೇಮಿಗಳಿಗೆ ಕ್ರಿಕೆಟ್ ಜ್ವರ ಹಿಡಿದಿದೆ! ಇಂತಹ ಸಂದರ್ಭಗಳಲ್ಲಿ ಹಲವು ಕಂಪನಿಗಳು ತನ್ನ ಗ್ರಾಹಕರನ್ನು ಸೆಳೆಯಲು ವಿವಿಧ ಆಫರ್ ಗಳನ್ನು ಘೋಷಿಸುತ್ತವೆ.
ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ಹೊಸ ಯೋಜನೆ ಪರಿಚಯಿಸಿದೆ.
ರಿಲಯನ್ಸ್ ಜಿಯೊ ತನ್ನ ಪ್ರಸ್ತುತ ಮತ್ತು ಹೊಸ ಚಂದಾದಾರರಿಗೆ ಜಿಯೋ ಕ್ರಿಕೆಟ್ ಸೀಸನ್ ವಿಶೇಷ ಡೇಟಾ ಪ್ಯಾಕ್ ಘೋಷಿಸಿದೆ.

ಕ್ರಿಕೆಟ್ ಸೀಸನ್ ಆಫರ್

ಕ್ರಿಕೆಟ್ ಸೀಸನ್ ಆಫರ್

ಈಗಾಗಲೇ ಇರುವ ಹಾಗು ಹೊಸದಾಗಿ ಸೇರ್ಪಡೆಗೊಳ್ಳುವ ಗ್ರಾಹಕರು ಜಿಯೋ ಕ್ರಿಕೆಟ್ ಸೀಸನ್ ವಿಶೇಷ ಡೇಟಾ ಪ್ಯಾಕ್ ಆಯ್ಕೆ ಮಾಡಬಹುದು. ಹೊಸ ವಿಶೇಷ ಡೇಟಾ ಪ್ಯಾಕ್ 51 ದಿನಗಳವರೆಗೆ 102 ಜಿಬಿ ಡೇಟಾವನ್ನು ಒದಗಿಸುತ್ತದೆ. ಇದು ಎಲ್ಲಾ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಸಾಕಷ್ಟು ಡೇಟಾ ಹೊಂದಿದೆ ಎಂದು ನಂಬಲಾಗಿದೆ. ಜಿಯೋ ಟಿವಿ ಹಾಗು ಹಾಟ್ ಸ್ಟಾರ್ ಮೂಲಕ ಉಚಿತ ವಿಶ್ವಕಪ್ ಕ್ರಿಕೆಟ್ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.

ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರ ವೀಕ್ಷಣೆ

ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರ ವೀಕ್ಷಣೆ

ಗ್ರಾಹಕರು ಜಿಯೋ ಯೋಜನೆಯ ಸೌಲಭ್ಯಕ್ಕಾಗಿ ಪ್ರಿಪೇಡ್ ಪ್ಲಾನ್ ನಲ್ಲಿ ರೂ. 251 ರೀಚಾರ್ಜ್ ಮಾಡಿದರೆ ಸಾಕು.
ಈ ಯೋಜನೆ 51 ದಿನಗಳ ವ್ಯಾಲಿಡಿಟಿ ಹೊಂದಿದ್ದು, 102 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಹಾಗೂ ಎಸ್ಎಂಎಸ್ ಸೌಲಭ್ಯ ಸಿಗಲಿದೆ.
ಈ ಯೋಜನೆಯ ವಿಶೇಷತೆಯೆಂದರೆ ಬಳಕೆದಾರರು ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ರ ಎಲ್ಲಾ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಬಹುಮಾನ ಗೆಲ್ಲುವ ಅವಕಾಶ

ಬಹುಮಾನ ಗೆಲ್ಲುವ ಅವಕಾಶ

ಜಿಯೋ ಕ್ರಿಕೆಟ್ ಸೀಸನ್ ವಿಶೇಷ ಡೇಟಾ ಪ್ಲಾನ್ ನಲ್ಲಿ ಬಳಕೆದಾರರಿಗೆ ಆನ್ಲೈನ್ ಫ್ಯಾಂಟಸಿ ಕ್ರಿಕೆಟ್ ಆಡುವ ಅವಕಾಶ ಸಿಗುತ್ತಿದೆ. ಯಾವ ತಂಡ ಪಂದ್ಯ ಗೆಲ್ಲಲಿದೆ ಎಂಬ ಭವಿಷ್ಯವಾಣಿ ಹೇಳಿದರೆ ಬಹುಮಾನ ಗೆಲ್ಲುವ ಅವಕಾಶ ನಿಮಗೆ ಸಿಗಲಿದೆ. 102 ಜಿಬಿ ಡೇಟಾ ಜೊತೆ ಅನಿಯಮಿತ ಕಾಲಿಂಗ್ ಹಾಗೂ ಎಸ್ಎಂಎಸ್ ಸೌಲಭ್ಯ ಸಿಗಲಿದೆ.

JioTV ಮೂಲಕ ಉಚಿತ ವೀಕ್ಷಣೆ

JioTV ಮೂಲಕ ಉಚಿತ ವೀಕ್ಷಣೆ

ರಿಲಯನ್ಸ್ ಜಿಯೋ ಕ್ರಿಕೆಟ್ ಆಟ ವೀಕ್ಷಣೆಗೆ ಮೈಜಿಯೋ ಅಪ್ಲಿಕೇಶನ್ ಮೂಲಕ ಎಲ್ಲಾ ಚಂದಾದಾರರಿಗೆ ಪ್ರವೇಶವನ್ನು ನೀಡುತ್ತಿದೆ. ಜೊತೆಗೆ, ರಿಲಯನ್ಸ್ ಜಿಯೋ ತನ್ನ ಚಂದಾದಾರರನ್ನು JioTV ಅಪ್ಲಿಕೇಶನ್ ಮೂಲಕ ಉಚಿತವಾಗಿ 2019 ಕ್ರಿಕೆಟ್ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಬಹುದು ಎಂದು ಘೋಷಿಸಿದೆ.
ಸರಳವಾಗಿ JioTV ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು. ಇದು ಹಾಟ್ಸ್ಟಾರ್ ಮೂಲಕ ಎಲ್ಲಾ ಪಂದ್ಯಗಳನ್ನು ಸ್ಟ್ರೀಮ್ ಮಾಡುತ್ತದೆ.

ಹಾಟ್ಸ್ಟಾರ್ ಸದಸ್ಯತ್ವ

ಹಾಟ್ಸ್ಟಾರ್ ಸದಸ್ಯತ್ವ

ಗ್ರಾಹಕರು ಹಾಟ್ಸ್ಟಾರ್ ಸದಸ್ಯತ್ವ ಹೊಂದಿರದೆ ಹೋದರೂ ಈ ಪ್ಲಾನ್ ಲಾಭ ಸಿಗಲಿದೆ. ಪಂದ್ಯಗಳನ್ನು ಹಾಟ್ಸ್ಟಾರ್ ಹಾಗೂ ಜಿಯೋ ಟಿವಿ ಮೂಲಕ ವೀಕ್ಷಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+