For Quick Alerts
ALLOW NOTIFICATIONS  
For Daily Alerts

ನಿವೃತ್ತಿ ಘೋಷಿಸಿದ ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್ ಜೀ

ವಿಪ್ರೊ ಸಂಸ್ಥಾಪಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜೀಂ ಪ್ರೇಮ್ ಜೀ ಅವರು ತಮ್ಮ ಸ್ಥಾನಕ್ಕೆ ನಿವೃತ್ತಿ ಘೋಷಿಸಿದ್ದು, ಜುಲೈ 30 ಕ್ಕೆ ಹುದ್ದೆ ತೊರೆಯಲಿದ್ದಾರೆ.

|

ವಿಪ್ರೊ ಸಂಸ್ಥಾಪಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜೀಂ ಪ್ರೇಮ್ ಜೀ ಅವರು ತಮ್ಮ ಸ್ಥಾನಕ್ಕೆ ನಿವೃತ್ತಿ ಘೋಷಿಸಿದ್ದು, ಜುಲೈ 30 ಕ್ಕೆ ಹುದ್ದೆ ತೊರೆಯಲಿದ್ದಾರೆ.

ನಿವೃತ್ತಿ ಘೋಷಿಸಿದ ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್ ಜೀ

ದೇಶದ ಅತಿದೊಡ್ಡ ತಾಂತ್ರಿಕ ಸೇವಾ ಸಂಸ್ಥೆಗಳ ಪೈಕಿ ಒಂದಾದ ವಿಪ್ರೊ ಕಂಪೆನಿಯನ್ನು ಐದು ದಶಕಗಳ ಕಾಲ ಬೆಳೆಸಿರುವ ಅಜೀಂ ಪ್ರೇಮ್ ಜೀ ಜುಲೈನಲ್ಲಿ ನಿವೃತ್ತಿ ಪಡೆಯಲಿದ್ದಾರೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಕಾರ್ಯಗಳಿಗೆ, ಲೋಕೋಪಕಾರದ ಸೇವೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಿದ್ದಾರೆ.

ಭಾರತದ 2ನೇ ಅತಿ ಶ್ರೀಮಂತರಾಗಿರುವ ಅಜೀಂ ಪ್ರೇಮ್ ಜಿ ಅವರ ಪುತ್ರ ರಿಷಾದ್ ಪ್ರೇಮ್ ಜಿ ಅವರು ವಿಪ್ರೊ ಉತ್ತರಾಧಿಕಾರಿಯಾಗಲಿದ್ದಾರೆ. 74 ವರ್ಷ ವಯಸ್ಸಿನ ಅಜೀಂ ಪ್ರೇಮ್ ಜೀ ಕಾರ್ಯ ನಿರ್ವಾಹಕೇತರ ನಿರ್ದೇಶಕ ಹಾಗೂ ಸಂಸ್ಥಾಪಕ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
1960 ರ ದಶಕದಲ್ಲಿ ಅಜೀಂ ಪ್ರೇಮ್ ಜಿ ಅವರು ವಿಪ್ರೊ ಎಂಟರ್ಪ್ರೈಸಸ್ ಸೇರಿದಂತೆ ಹಲವು ಸಮೂಹ ಸಂಸ್ಥೆಗಳನ್ನು ಸ್ಥಾಪಿಸಿ, ಇದನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದರು. ದಾನ ಧರ್ಮ ಕಾರ್ಯಗಳಲ್ಲೂ ಅಜೀಂ ಪ್ರೇಮ್ ಜಿ ಸದಾ ಮುಂಚೂಣಿಯಲ್ಲಿದ್ದು, ತಮ್ಮ ಸಂಪತ್ತಿನ ಬಹುಪಾಲನ್ನು ಲೋಕೋಪಕಾರಕ್ಕಾಗಿ ವಿನಿಯೋಗಿಸುತ್ತಿದ್ದಾರೆ.

Read more about: wipro money it
English summary

Azim Premji to retire as executive chairman of Wipro

Wipro founder Azim Premji will step down in July from the company he built over five decades into one of the country’s largest technology services firms.
Story first published: Friday, June 7, 2019, 11:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X