For Quick Alerts
ALLOW NOTIFICATIONS  
For Daily Alerts

ಅಗ್ಗದ ಜಿಯೋ ಗಿಗಾಫೈಬರ್ ಹೊಸ ಪ್ಯಾಕೇಜ್ ಘೋಷಣೆ, ಏನೇನಿದೆ ಗೊತ್ತಾ?

ಟೆಲಿಕಾಂ ವಲಯದ ಪ್ರಮುಖ ಕಂಪನಿಗಳು ಭಾರೀ ಕೊಡುಗೆಗಳನ್ನು ಪರಿಚಯಿಸುತ್ತಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ. ಇದೀಗ ರಿಲಯನ್ಸ್ ಜಿಯೋ ತನ್ನ ಜಿಯೋ ಗಿಗಾಫೈಬರ್ ಹೊಸ ಪ್ಯಾಕೇಜ್ ಘೋಷಣೆ ಮಾಡಿದ್ದು.

|

ಟೆಲಿಕಾಂ ವಲಯದ ಪ್ರಮುಖ ಕಂಪನಿಗಳು ಭಾರೀ ಕೊಡುಗೆಗಳನ್ನು ಪರಿಚಯಿಸುತ್ತಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ. ಇದೀಗ ರಿಲಯನ್ಸ್ ಜಿಯೋ ತನ್ನ ಜಿಯೋ ಗಿಗಾಫೈಬರ್ ಹೊಸ ಪ್ಯಾಕೇಜ್ ಘೋಷಣೆ ಮಾಡಿದ್ದು, ಭದ್ರತಾ ಠೇವಣಿ ಅಡಿಯಲ್ಲಿ ಈ ಯೋಜನೆ ಘೋಷಣೆಯಾಗಿದೆ.

ಅಗ್ಗದ ಜಿಯೋ ಗಿಗಾಫೈಬರ್ ಹೊಸ ಪ್ಯಾಕೇಜ್ ಘೋಷಣೆ, ಏನೇನಿದೆ ಗೊತ್ತಾ?

ಈ ಯೋಜನೆ ಪ್ರಕಾರ ಭದ್ರತಾ ಠೇವಣಿ ಶುಲ್ಕ ರೂ. 2500 ಮಾಡಿದ್ದು, ಈ ಹಿಂದೆ ಭದ್ರತಾ ಠೇವಣಿ ಶುಲ್ಕವನ್ನು ರೂ. 4500 ನಿಗದಿಪಡಿಸಿತ್ತು. ಜಿಯೋ ಭದ್ರತಾ ಠೇವಣಿ ಶುಲ್ಕ ಕಡಿತಗೊಳಿಸುವುದರ ಜೊತೆಗೆ ವೇಗವನ್ನೂ 100 ಎಂಬಿಪಿಎಸ್ ವೇಗದಿಂದ 50 ಎಂಬಿಪಿಎಸ್ ವೇಗಕ್ಕೆ ಇಳಿಕೆ ಮಾಡಿದೆ. ರೂಟರ್ ಡ್ಯುಯಲ್ ಬ್ಯಾಂಡ್ ಸಂಪರ್ಕದ ಬದಲು ಸಿಂಗಲ್ ಬ್ಯಾಂಡ್ ಸಂಪರ್ಕಕ್ಕೆ ಆದ್ಯತೆ ನೀಡಲಿದೆ.
ರಿಲಯನ್ಸ್ ಜಿಯೋ 'ಜಿಯೋ ಗಿಗಾಫೈಬರ್' ಘೋಷಣೆ ಮಾಡಿದಾಗ 10 ಎಂಬಿಪಿಎಸ್ ವೇಗದಲ್ಲಿ 100 ಜಿಬಿ ಡೇಟಾ ನೀಡುವುದಾಗಿ ತಿಳಿಸಿತ್ತು. ಈಗ ಹೊಸ ಪ್ಯಾಕೇಜ್ ನಲ್ಲಿ ಬದಲಾವಣೆ ಮಾಡಿದೆ.

2,500 ಯೋಜನೆಯಲ್ಲಿ ಹೊಸತೇನಿದೆ?
- ರೂಟರ್ ರೂ. 2,500 ಯೋಜನೆ ಒಂದೇ ಬ್ಯಾಂಡ್ ರೂಟರ್ ಒದಗಿಸಲಿದೆ. ರೂ 4,500 ಯೋಜನೆ ಡ್ಯುಯಲ್-ಬ್ಯಾಂಡ್ ರೂಟರ್ ಒದಗಿಸಿದರೆ, ರೂ. 2,500 ಯೋಜನೆ ಸಿಂಗಲ್ ಬ್ಯಾಂಡ್ ರೂಟರ್ ಒದಗಿಸಲಿದೆ.
- ಈ ಅಗ್ಗದ ಯೋಜನೆಯ ರೂಟರ್ ನೆಟ್ವರ್ಕ್ ವೇಗವನ್ನು 50Mbps ಗೆ ಕಡಿಮೆ ಮಾಡಿದೆ.
- ಆಶ್ಚರ್ಯಕರವಾಗಿ, ಈ ಅಗ್ಗದ ಯೋಜನೆಯನ್ನು ಪಡೆದ ಚಂದಾದಾರರು GigaFiber ನಲ್ಲಿ ಧ್ವನಿ ಸೇವೆಗಳನ್ನು ಪಡೆಯುತ್ತಿದ್ದಾರೆ. ಅಂದರೆ ಬ್ರಾಡ್ಬ್ಯಾಂಡ್ ಸೇವೆಯ ಮೂಲಕ ಅವರು ಕರೆಗಳನ್ನು ಮಾಡಬಹುದು.
- ಕಡಿಮೆ ಬೆಲೆ ಮತ್ತು ನಿಧಾನಗತಿಯ ವೇಗಗಳ ಹೊರತಾಗಿಯೂ, ಚಂದಾದಾರರಿಗೆ ತಿಂಗಳಿಗೆ 1,100GB ಡೇಟಾವನ್ನು ಆನಂದಿಸಲಿದ್ದಾರೆ.

Read more about: jio telecom money
English summary

Jio GigaFiber becomes cheaper than ever before

ಟೆಲಿಕಾಂ ವಲಯದ ಪ್ರಮುಖ ಕಂಪನಿಗಳು ಭಾರೀ ಕೊಡುಗೆಗಳನ್ನು ಪರಿಚಯಿಸುತ್ತಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ. ಇದೀಗ ರಿಲಯನ್ಸ್ ಜಿಯೋ ತನ್ನ ಜಿಯೋ ಗಿಗಾಫೈಬರ್ ಹೊಸ ಪ್ಯಾಕೇಜ್ ಘೋಷಣೆ ಮಾಡಿದ್ದು, ಭದ್ರತಾ ಠೇವಣಿ ಅಡಿಯಲ್ಲಿ ಈ ಯೋಜನೆ ಘೋಷಣೆಯಾಗಿದೆ.
Story first published: Friday, June 7, 2019, 16:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X