ಒಂದು ವರ್ಷದಲ್ಲಿ 10 ಲಕ್ಷ ನಗದು ವಿತ್ ಡ್ರಾ ಮಾಡಿದರೆ ತೆರಿಗೆ..?

ಒಂದು ವರ್ಷದಲ್ಲಿ ರೂ. 10 ಲಕ್ಷ ರೂಪಾಯಿ ನಗದು ವಿತ್ ಡ್ರಾ ಮಾಡುವ ಗ್ರಾಹಕರ ಮೇಲೆ ತೆರಿಗೆ ವಿಧಿಸುವ ಬಗ್ಗೆ ಕೇಂದ್ರ ಸರ್ಕಾರ ಆಲೋಚನೆ ಮಾಡುತ್ತಿದೆ.

ಒಂದು ವರ್ಷದಲ್ಲಿ ರೂ. 10 ಲಕ್ಷ ರೂಪಾಯಿ ನಗದು ವಿತ್ ಡ್ರಾ ಮಾಡುವ ಗ್ರಾಹಕರ ಮೇಲೆ ತೆರಿಗೆ ವಿಧಿಸುವ ಬಗ್ಗೆ ಕೇಂದ್ರ ಸರ್ಕಾರ ಆಲೋಚನೆ ಮಾಡುತ್ತಿದೆ.

ಒಂದು ವರ್ಷದಲ್ಲಿ 10 ಲಕ್ಷ ನಗದು ವಿತ್ ಡ್ರಾ ಮಾಡಿದರೆ ತೆರಿಗೆ..?

ನಗದು ವ್ಯವಹಾರ ಕಡಿಮೆ ಮಾಡಿ ಡಿಜಿಟಲ್ ಪೇಮೆಂಟ್ ಉತ್ತೇಜಿಸಲು ಮತ್ತು ಕಪ್ಪು ಹಣವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ನಗದು ವ್ಯವಹಾರ ಕಡಿಮೆಗೊಳಿಸಿ ಡಿಜಿಟಲ್ ವಹಿವಾಟಿಗೆ ಹೆಚ್ಚು ಒತ್ತು ನೀಡುವುದರಿಂದ ಅವ್ಯವಹಾರ/ವಂಚನೆಗಳನ್ನು ಪತ್ತೆಹಚ್ಚಲು ಹಾಗು ತೆರಿಗೆ ರಿಟರ್ನ್ ಸುಲಭವಾಗಿಸಲು ಸಹಾಯಕವಾಗುತ್ತದೆ.
ಹೆಚ್ಚಿನ ವ್ಯಕ್ತಿಗಳಿಗೆ ಹಾಗೂ ವ್ಯಾಪಾರಸ್ಥರಿಗೆ ವರ್ಷಕ್ಕೆ ರೂ. 10 ಲಕ್ಷ ನಗದು ವಿತ್ ಡ್ರಾ ಮಾಡುವ ಅವಶ್ಯಕತೆಯಿರುವುದಿಲ್ಲ ಎಂದು ಸರ್ಕಾರ ವರದಿಯಲ್ಲಿ ತಿಳಿಸಿದೆ. ತೆರಿಗೆ ವಿಧಿಸುವುದರ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ಇನ್ನು ಯೋಜನೆಯನ್ನು ಅಂತಿಮಗೊಳಿಸಿಲ್ಲ.
ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ಸಮಿತಿಯು 2016ರಲ್ಲಿ ರೂ. 50,000 ನಗದು ವಿತ್ ಡ್ರಾ ಮಾಡುವವರ ವಿರುದ್ಧ ತೆರಿಗೆ ವಿಧಿಸುವಂತೆ ಶಿಫಾರಸ್ಸು ಮಾಡಿತ್ತು. ಪ್ರಸ್ತುತ ರೂ. 50 ಸಾವಿರ ಜಮಾ ಮಾಡಲು ಪ್ಯಾನ್ ಕಾರ್ಡ್ ಅನಿವಾರ್ಯವಾಗಿದ್ದು, ಸಣ್ಣಪುಟ್ಟ ವ್ಯವಹಾರಕ್ಕೆ ಆಧಾರ್ ಅನಿವಾರ್ಯ ಮಾಡುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+