ಹಣಕಾಸು ಸಚಿವಾಲಯ ಹಿರಿಯ 12 ಅಧಿಕಾರಿಗಳಿಂದ ಬಲವಂತದ ನಿವೃತ್ತಿ ಪಡೆದಿದೆ
ಹಣಕಾಸು ಸಚಿವಾಲಯವು ಜನರಲ್ ಫೈನಾನ್ಶಿಯಲ್ ರೂಲ್ಸ್ (ಜಿಎಫ್ಆರ್) ನಿಯಮ 56 ರ ಅಡಿಯಲ್ಲಿ ಮುಖ್ಯ ಆಯುಕ್ತರು, ಆದಾಯ ತೆರಿಗೆ ಇಲಾಖೆಯ ಆಯುಕ್ತರು ಮತ್ತು ಪ್ರಿನ್ಸಿಪಲ್ ಕಮಿಷನರ್ ಸೇರಿದಂತೆ ಹನ್ನೆರಡು ಹಿರಿಯ ಸರ್ಕಾರಿ ಅಧಿಕಾರಿಗಳಿಂದ ನಿವೃತ್ತಿ.
ಹಣಕಾಸು ಸಚಿವಾಲಯವು ಜನರಲ್ ಫೈನಾನ್ಶಿಯಲ್ ರೂಲ್ಸ್ (ಜಿಎಫ್ಆರ್) ನಿಯಮ 56 ರ ಅಡಿಯಲ್ಲಿ ಮುಖ್ಯ ಆಯುಕ್ತರು, ಆದಾಯ ತೆರಿಗೆ ಇಲಾಖೆಯ ಆಯುಕ್ತರು ಮತ್ತು ಪ್ರಿನ್ಸಿಪಲ್ ಕಮಿಷನರ್ ಸೇರಿದಂತೆ ಹನ್ನೆರಡು ಹಿರಿಯ ಸರ್ಕಾರಿ ಅಧಿಕಾರಿಗಳಿಂದ ನಿವೃತ್ತಿ ಪಡೆದಿದೆ.

ಕೇಂದ್ರ ಹಣಕಾಸು ಸಚಿವಾಲಯ ಆದಾಯ ತೆರಿಗೆ ಇಲಾಖೆಯು ಬಲವಂತವಾಗಿ 12 ಅಧಿಕಾರಿಗಳಿಂದ ನಿವೃತ್ತಿ ಪಡೆದಿದೆ. ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರು ಸೇರಿದಂತೆ 12 ಮಂದಿ ನಿವೃತ್ತಿ ಪಡೆದಿದ್ದು, ಇವರ ವಿರುದ್ಧ ಲಂಚ, ಮಹಿಳಾ ಉದ್ಯೋಗಿಗಳಿಗೆ ಕಿರುಕುಳ ಸೇರಿದಂತೆ ಅನೇಕ ದೂರುಗಳು ಕೇಳಿ ಬಂದಿದ್ದವು.
ಹಣಕಾಸು ಸಚಿವಾಲಯದ ಪ್ರಕಾರ, ಒಬ್ಬೊಬ್ಬ ಅಧಿಕಾರಿ ಮೇಲೆ ಒಂದೊಂದು ಆರೋಪಗಳಿವೆ. ಕೆಲವರ ಮೇಲೆ ಭ್ರಷ್ಟಾಚಾರ ಆರೋಪ, ಇನ್ನು ಕೆಲವರ ಮೇಲೆ ಸಹೋದ್ಯೋಗಿ ಮಹಿಳೆಯರಿಗೆ ಕಿರುಕುಳ ನೀಡಿರುವ ಆರೋಪ, ಮತ್ತೆ ಕೆಲವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪಗಳಿವೆ. ಕೆಲವರು ಕುಟುಂಬದ ಹೆಸರಿನಲ್ಲಿ ಆಸ್ತಿ ಮಾಡಿದ್ದರೆ, ಕೆಲವರು ಸ್ಕೀಮ್ ಗಳಲ್ಲಿ ಲಾಭ ಪಡೆದಿದ್ದರು.
ಹಣಕಾಸು ಸಚಿವಾಲಯ ನಿಯಮ 56ರ ಪ್ರಕಾರ, 50-55 ವರ್ಷ ವಯಸ್ಸಿನ, 30 ವರ್ಷ ಕೆಲಸ ಮಾಡಿರುವ ಅಧಿಕಾರಿಗಳಿಗೆ ಬಲವಂತದ ನಿವೃತ್ತಿ ಪಡೆಯಬಹುದು.


Click it and Unblock the Notifications