ಬಿಎಸ್ಎನ್ಎಲ್ ಅಭಿನಂದನ್ -151 ಸೂಪರ್ ಪ್ಲಾನ್ , ಸಿಗಲಿರುವ ಲಾಭಗಳೇನು?
ಭಾರತ ಸಂಚಾರ್ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಹೊಸ ಪ್ರೀಪೇಡ್ ಪ್ಲಾನ್ ಪರಿಚಯಿಸಿದ್ದು, ಬಿಎಸ್ಎನ್ಎಲ್ ಅದಕ್ಕೆ ಅಭಿನಂದನ್ -151 ಎಂದು ಹೆಸರಿಟ್ಟಿದೆ.
ಭಾರತ ಸಂಚಾರ್ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಹೊಸ ಪ್ರೀಪೇಡ್ ಪ್ಲಾನ್ ಪರಿಚಯಿಸಿದ್ದು, ಬಿಎಸ್ಎನ್ಎಲ್ ಅದಕ್ಕೆ ಅಭಿನಂದನ್ -151 ಎಂದು ಹೆಸರಿಟ್ಟಿದೆ. ಟೆಲಿಕಾಂ ವಲಯದಲ್ಲಿ ದರ ಸಮರದಲ್ಲಿ ಸಿಲುಕಿರುವ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಆಕರ್ಷಕ ಪ್ಲಾನ್ ಗಳನ್ನು ಘೋಷಿಸುತ್ತವೆ.

ಬಿಎಸ್ಎನ್ಎಲ್ನ ಅಭಿನಂದನ್ -151 ಪ್ಲಾನ್ ಅನಿಯಮಿತ ಕರೆಗಳೂ, ಪ್ರತಿದಿನ 1ಜಿಬಿ ಡೇಟಾ, 24 ದಿನಗಳ ವ್ಯಾಲಿಡಿಟಿ, ಪ್ರತಿ ದಿನ 100 ಎಸ್ಎಂಎಸ್ ಸೌಲಭ್ಯ ಒಳಗೊಂಡಿದೆ.
ಬಿಎಸ್ಎನ್ಎಲ್ ಅಭಿನಂದನ್ -151 ಯೋಜನೆಯು ಮುಂಬೈ ಹಾಗೂ ದೆಹಲಿ ವಲಯಗಳು ಒಳಗೊಂಡಂತೆ ಎಲ್ಲಾ ವಲಯಗಳಲ್ಲಿ ಲಭ್ಯವಿರುತ್ತದೆ. ಅನಿಯಮಿತ ಸ್ಥಳೀಯ ಮತ್ತು ರೋಮಿಂಗ್ ಕರೆ ಸಿಗಲಿದೆ. ಕರೆ ಹಾಗೂ ಡೇಟಾ, ಎಸ್ಎಂಎಸ್ ಉಚಿತವಾಗಿದೆ.
ಈ ಯೋಜನೆ 180 ದಿನಗಳ ವ್ಯಾಲಿಡಿಟಿ ಹೊಂದಿದ್ದು, 24 ದಿನಗಳ ನಂತರ ಗ್ರಾಹಕರು ಸೇವೆಗೆ ಹಣ ಪಾವತಿ ಮಾಡಬೇಕಾಗುತ್ತದೆ.
ಪ್ರಯೋಜನಗಳ ಪ್ರಕಾರ, ರೂ. 151 ಪ್ರಿಪೇಡ್ ರೀಚಾರ್ಜ್ ಪ್ಲಾನ್ ದೆಹಲಿ ಮತ್ತು ಮುಂಬೈ ವಲಯಗಳಲ್ಲಿ ಸೇರಿದಂತೆ ಎಲ್ಲಾ ನೆಟ್ವರ್ಕ್ ಗಳಿಗೆ ಅಪರಿಮಿತ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಕರೆಗಳನ್ನು ಒದಗಿಸುತ್ತದೆ.


Click it and Unblock the Notifications