ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ಅತಿದೊಡ್ಡ ರಿಯಾಯಿತಿ ಟಿಕೆಟ್ ಯೋಜನೆಯನ್ನು ಘೋಷಿಸಿದೆ.
ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ಅತಿದೊಡ್ಡ ರಿಯಾಯಿತಿ ಟಿಕೆಟ್ ಯೋಜನೆಯನ್ನು ಘೋಷಿಸಿದೆ.
ಇಂಡಿಗೋ ದೇಶಿ ಮಾರ್ಗಗಳ ಮಧ್ಯದ ಪ್ರಯಾಣಕ್ಕಾಗಿ ಆರಂಭಿಕ ದರ ಕೇವಲ ರೂ. 999 ಬೆಲೆಯಲ್ಲಿ ಸುಮಾರು ಹತ್ತು ಲಕ್ಷ ಸೀಟುಗಳನ್ನು ಈ ರಿಯಾಯಿತಿ ಆಫರ್ ಅಡಿಯಲ್ಲಿ ಮಾರಾಟ ಮಾಡುತ್ತಿದೆ. ಇಂಡಿಗೋ ಸಮ್ಮರ್ ಸೇಲ್ ಅಡಿಯಲ್ಲಿ ಟಿಕೆಟ್ ಬುಕಿಂಗ್ ಮಾಡಲು ಇವತ್ತು ಕೊನೆ ದಿನವಾಗಿದೆ. ಡಿಸ್ಕೌಂಟ್ ಪ್ರಸ್ತಾಪದಡಿಯಲ್ಲಿ, ಇಂಡಿಗೋ ಕಂಪನಿಯು ವಿದೇಶಿ ಮಾರ್ಗಗಳ ನಡುವೆ ಆರಂಭಿಕ ರೂ. 3,499 ದರದಲ್ಲಿ ಟಿಕೆಟ್ ಗಳ ಖರೀದಿಗೆ ಅವಕಾಶ ಕಲ್ಪಿಸಿದೆ.
ಪ್ರಯಾಣದ ಅವಧಿ
ಘೋಷಿಸಿರುವ ಈ ಆಫರ್, ಜೂನ್ 26 ರಿಂದ 28 ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಪ್ರಯಾಣ ಮಾಡಲು ಮಾನ್ಯವಾಗಿರುತ್ತದೆ ಎಂದು ತನ್ನ ವೆಬ್ಸೈಟ್ ನಲ್ಲಿ ಹೇಳಿದೆ. ಈ ಆಫರ್ ಅಡಿಯಲ್ಲಿ ಏರ್ಲೈನ್ ಸುಮಾರು 10 ಲಕ್ಷ ಟಿಕೆಟ್ ಗಳನ್ನು ಮಾರಾಟ ಮಾಡುತ್ತಿದೆ.
ದೇಶಿ ಮಾರ್ಗಗಳ ದರ
ಈ ಆಫರ್ ಅಡಿಯಲ್ಲಿ ಇಂಡಿಗೊ ಪ್ರಯಾಣಿಕರು ಈ ಕೆಳಗಿನ ಮಾರ್ಗಗಳ ಮಧ್ಯೆ ಪಾವತಿಸಬೇಕಾದ ಮೊತ್ತದ ವಿವರ:
ದೆಹಲಿ-ಅಹಮದಾಬಾದ್ ವಿಮಾನ ಟಿಕೆಟ್ ದರ ರೂ. 1,799
ದೆಹಲಿ-ಬೆಂಗಳೂರು ರೂ. 3,299
ದೆಹಲಿ-ಚಂಡೀಗಢ ರೂ. 1,299
ದೆಹಲಿ-ಜೈಪುರ ರೂ. 1,499
ಜೈಪುರ-ದೆಹಲಿ ರೂ. 1,799
ಗೋವಾ-ಹೈದರಾಬಾದ್ ರೂ. 1,499
ಹೈದರಾಬಾದ್-ಬೆಂಗಳೂರು ರೂ. 1,899
ದೆಹಲಿ-ಡೆಹ್ರಾಡೂನ್ ರೂ. 1,999
ಅಂತರಾಷ್ಟ್ರೀಯ ಮಾರ್ಗಗಳ ದರ
ಅಂತರಾಷ್ಟ್ರೀಯ ಮಾರ್ಗಗಳ ಮಧ್ಯೆ ಪಾವತಿಸಬೇಕಾಗಿರುವ ಮೊತ್ತದ ವಿವರ ಇಲ್ಲಿದೆ.
ದೆಹಲಿ-ಅಬು ಧಾಬಿ ರೂ. 6,799
ಬೆಂಗಳೂರು-ಬ್ಯಾಂಕಾಕ್ ರೂ. 6,899
ಕೋಲ್ಕತಾ-ಬ್ಯಾಂಕಾಕ್ ರೂ. 5099
ಹೈದರಾಬಾದ್- ದುಬೈ ರೂ. 8,999
ದೆಹಲಿ-ದುಬೈ ರೂ. 7,799
ದೆಹಲಿ-ಕೌಲಾಲಂಪುರ್ ರೂ. 6,599


Click it and Unblock the Notifications