For Quick Alerts
ALLOW NOTIFICATIONS  
For Daily Alerts

ಗೃಹ ವಿಮೆ ಮೇಲೆ ತೆರಿಗೆ ವಿನಾಯಿತಿ, ವಿಮಾ ಕಂಪನಿಗಳ ಬೇಡಿಕೆ

ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಜುಲೈ 5, 2019 ರಂದು ಸಂಪೂರ್ಣ ಬಜೆಟ್ ಮಂಡನೆ ಮಾಡಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮೊದಲ ಬಜೆಟ್ ಮಂಡಿಸಲಿದ್ದು, ಬಜೆಟ್ ತಯಾರಿ ನಡೆಸಿದ್ದಾರೆ.

|

ನಿರ್ಮಲಾ ಸೀತಾರಾಮನ್ ಗುರುವಾರದಂದು ಬ್ಯಾಂಕ್ ಅಧಿಕಾರಿಗಳು ಮತ್ತು ಬಂಡವಾಳ ಮಾರುಕಟ್ಟೆಯ ಪ್ರತಿನಿಧಿಗಳನ್ನು ಭೇಟಿಯಾಗಿದ್ದರು.ಈ ಸಂದರ್ಭದಲ್ಲಿ ವಿಮಾ ಕಂಪೆನಿಗಳು ಇವರ ಮುಂದೆ ಕೆಲವು ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದೆ.
ಆರೋಗ್ಯ ಮತ್ತು ಜೀವ ವಿಮೆ ಅಡಿ ಗೃಹ ಸಾಲದ ಮೇಲಿನ ಪ್ರೀಮಿಯಂ ತೆರಿಗೆ ಮೇಲೆ ವಿನಾಯಿತಿ ಕೊಡುವ ಬಗ್ಗೆ ಸರ್ಕಾರದಿಂದ ಸಕರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಮೊದಲ ಬಜೆಟ್ ನಲ್ಲಿ ದೊಡ್ಡ ಮಟ್ಟದ ಯೋಜನೆಗಳು ಘೋಷಣೆಯಾಗುವ ಸಾಧ್ಯತೆಯಿದ್ದು, ಇದರಲ್ಲಿ ಗೃಹ ವಿಮೆಯ ಪ್ರೀಮಿಯಂ ತೆರಿಗೆ ವಿನಾಯಿತಿ ಸೇರಿದೆ.
ಕಳೆದ ವರ್ಷದಿಂದ ಕೇರಳ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಚಂಡಮಾರುತ ಪರಿಣಾಮದಿಂದ ಸಾಕಷ್ಟು ಹಾನಿಯಾಗಿದ್ದು, ಜನರ ಆಸ್ತಿ ನಷ್ಟವಾಗಿದೆ. ಸರ್ಕಾರ ಗೃಹ ವಿಮೆ ಪ್ರೀಮಿಯಂ ತೆರಿಗೆಯಲ್ಲಿ ವಿನಾಯತಿ ನೀಡಿದರೆ ಜನರಿಗೆ ಸಹಾಯಕವಾಗಲಿದೆ. 80ಸಿ ಯಿಂದ 80ಡಿ ಯವರೆಗೆ ರಿಯಾಯಿತಿ ನೀಡಿದರೆ ಹೆಚ್ಚಿನ ಜನರು ಗೃಹ ವಿಮೆ ಮಾಡಿಸಲಿದ್ದಾರೆಂದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Read more about: ತೆರಿಗೆ tax insurance
English summary

special tax relief on home insurance premium in budget 2019

special tax relief on home insurance premium in budget 2019
Story first published: Friday, June 14, 2019, 11:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X