For Quick Alerts
ALLOW NOTIFICATIONS  
For Daily Alerts

ಆಧಾರ್ ಕಾರ್ಡ್ ಬಳಕೆದಾರರಿಗೆ ಗುಡ್ ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಡೆದ ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಮಹತ್ವದ ಮಸೂದೆ ಪಾಸ್ ಮಾಡಲಾಗಿದೆ.

|

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಮಹತ್ವದ ಮಸೂದೆ ಪಾಸ್ ಮಾಡಲಾಗಿದೆ. ಇದರ ಪ್ರಕಾರ ಬ್ಯಾಂಕ್ ಖಾತೆ ತೆರೆಯಲು, ಸಿಮ್ ಕಾರ್ಡ್ ಪಡೆಯಲು ಆಧಾರ್ ಅನಿವಾರ್ಯವಲ್ಲ. ಆದರೆ ಗ್ರಾಹಕರು ಸ್ವಯಂಪ್ರೇರಿತರಾಗಿ ಆಧಾರ್ ನ್ನು ಪುರಾವೆಯಾಗಿ ಬ್ಯಾಂಕುಗಳು ಮತ್ತು ಟೆಲಿಕಾಂ ಕಂಪನಿಗಳಿಗೆ ಸಲ್ಲಿಸಬಹುದಾಗಿದೆ.

ಆಧಾರ್ ಕಾರ್ಡ್ ಬಳಕೆದಾರರಿಗೆ ಗುಡ್ ನ್ಯೂಸ್

ಸಿಮ್ ಕಾರ್ಡ್ ಖರೀದಿಸುವಾಗ ಇಲ್ಲವೇ ಬ್ಯಾಂಕುಗಳಲ್ಲಿ ಖಾತೆ ತೆರೆಯುವಾಗ ಆಧಾರ್ ಕಾರ್ಡ್ ನ್ನು ಪುರಾವೆಯಾಗಿ ಕೇಳಿದರೆ ಅದನ್ನು ತಿರಸ್ಕರಿಸುವ ಹಕ್ಕು ನಿಮಗಿದೆ. ಒಂದು ವೇಳೆ ಆಧಾರ್ ಕಾರ್ಡ್ ಗಾಗಿ ಒತ್ತಾಯ ಮಾಡಿದರೆ ಕೋರ್ಟ್ ಗೆ ಹೋಗಬಹುದು.
ಆಧಾರ್ ಕಾರ್ಡನ್ನು ತಪ್ಪಾಗಿ ಬಳಕೆ ಮಾಡುವುದು ಅಪರಾಧ. ಇದು ಸಾಬೀತಾದರೆ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಗ್ರಾಹಕರ ಇಚ್ಛೆಯಂತೆ ಬ್ಯಾಂಕುಗಳು ಖಾತೆ ತೆರೆಯಲು ಆಧಾರ್ ಕಾರ್ಡನ್ನು ದಾಖಲೆಯಾಗಿ ಪಡೆಯಬಹುದು.ಆದರೆ ಆಧಾರ್ ಕಾರ್ಡ್ ಗಾಗಿ ಒತ್ತಾಯ ಮಾಡುವಂತಿಲ್ಲ.
ಜೂನ್ 17 ರಿಂದ ಪ್ರಾರಂಭವಾಗುವ ಸಂಸತ್ತಿನ ಮೊದಲ ಅಧಿವೇಶನದಲ್ಲಿ ಸರ್ಕಾರ ಈ ಮಸೂದೆಯನ್ನು ಪರಿಚಯಿಸಲಿದೆ. ಖಾಸಗಿ ಸಂಸ್ಥೆಗಳು ಆಧಾರ್ ಬಳಸಲು ಅನುಮತಿಸುವ ಆಧಾರ್ ಕಾಯ್ದೆಯ ಸೆಕ್ಷನ್ 57 ಅನ್ನು ತೆಗೆದು ಹಾಕಲು ಮಸೂದೆಯು ಪ್ರಸ್ತಾಪಿಸಿದೆ. ಆದರೆ ಆಧಾರ್ ಉಲ್ಲಂಘನೆಯಾದರೆ ದಂಡವನ್ನು ಸಹ ಭರಿಸಬೇಕಾಗುತ್ತದೆ.

ಆಧಾರ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ? ಆಧಾರ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ?

Read more about: aadhar uidai money banking
English summary

Cabinet nod for Aadhaar as ID proof at banks, telcos

Prime Minister Narendra Modi, on Wednesday approved a Bill to allow voluntary submission of Aadhaar as identity proof for use by private entities such as banks and telecom companies.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X