ಸೆನ್ಸೆಕ್ಸ್ 491 ಅಂಕಗಳ ಭಾರೀ ಕುಸಿತ
ವಾಣಿಜ್ಯ ಭೀತಿಯಿಂದಾಗಿ ಭಾರತೀಯ ಷೇರುಪೇಟೆ ತೀವ್ರ ಕುಸಿತಕ್ಕೆ ಒಳಗಾಗಿದ್ದು, ಸೆನ್ಸೆಕ್ಸ್ ಸೂಚ್ಯಂಕವು 39,000 ಕ್ಕಿಂತಲೂ ಹೆಚ್ಚು ಪಾಯಿಂಟ್ ಮತ್ತು ನಿಫ್ಟಿ ಸೂಚ್ಯಂಕ 11,700 ಮಟ್ಟ ಕೆಳಕ್ಕೆ ಕುಸಿದಿದೆ.
ವಾಣಿಜ್ಯ ಭೀತಿಯಿಂದಾಗಿ ಭಾರತೀಯ ಷೇರುಪೇಟೆ ತೀವ್ರ ಕುಸಿತಕ್ಕೆ ಒಳಗಾಗಿದ್ದು, ಸೆನ್ಸೆಕ್ಸ್ ಸೂಚ್ಯಂಕವು 39,000 ಕ್ಕಿಂತಲೂ ಹೆಚ್ಚು ಪಾಯಿಂಟ್ ಮತ್ತು ನಿಫ್ಟಿ ಸೂಚ್ಯಂಕ 11,700 ಮಟ್ಟ ಕೆಳಕ್ಕೆ ಕುಸಿದಿದೆ.

ಸೆನ್ಸೆಕ್ಸ್ ಸೂಚ್ಯಂಕ 491.28 ಪಾಯಿಂಟ್ ಕುಸಿದು 38,960.79 ಕ್ಕೆ ತಲುಪಿದ್ದರೆ, ನಿಫ್ಟಿ ಸೂಚ್ಯಂಕ 148.40 ಪಾಯಿಂಟ್ ಕುಸಿದು 11,674.90 ಕ್ಕೆ ತಲುಪಿದೆ.
ಟಾಟಾ ಸ್ಟೀಲ್, ಜೆಎಸ್ಡಬ್ಲ್ಯೂ ಸ್ಟೀಲ್, ಒಎನ್‌ಜಿಸಿ, ಇಂಡಿಯಾಬುಲ್ಸ್ ಹೌಸಿಂಗ್ ಮತ್ತು ಟಾಟಾ ಮೋಟಾರ್ಸ್ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ್ದು, ಯೆಸ್ ಬ್ಯಾಂಕ್, ಝೀ ಎಂಟರ್‌ಟೈನ್‌ಮೆಂಟ್, ಕೋಲ್ ಇಂಡಿಯಾ ಮತ್ತು ವಿಪ್ರೋ ಲಾಭ ಗಳಿಸಿವೆ.
ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 200 ಕ್ಕೂ ಅಧಿಕಪಾಯಿಂಟ್ ನಷ್ಟಕ್ಕೆ ಗುರಿಯಾದರೆ, ಎನ್ಎಸ್ಇ ನಿಫ್ಟಿ ಸೂಚ್ಯಂಕ 11,800 ಅಂಕಗಳ ಮಟ್ಟಕ್ಕೆ ಕುಸಿತ ಕಂಡಿತ್ತು.
ಬೆಳಿಗ್ಗೆ 10.15ರ ಸುಮಾರಿನಲ್ಲಿ ಸೆನ್ಸೆಕ್ಸ್ ಸುಚ್ಯಂಕವು 218.17 ಪಾಯಿಂಟ್ ನಷ್ಟದೊಂದಿಗೆ 39,233.90 ಅಂಶಗಳಲ್ಲೂ, ನಿಫ್ಟಿ ಸುಚ್ಯಂಕವು 73.60 ಅಂಕಗಳ ನಷ್ಟದೊಂದಿಗೆ 11,749.70 ಪಾಯಿಂಟ್ ಮಟ್ಟದಲ್ಲೂ ವಹಿವಾಟು ನಡೆಸಿದ್ದವು.
ಇಂದು ಡಾಲರ್ ಎದುರು ರೂಪಾಯಿ ಮೌಲ್ಯ ಆರು ಪೈಸೆಗಳ ಇಳಿಕೆಯನ್ನು ಕಂಡು ರೂ. 69.86 ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.


Click it and Unblock the Notifications