ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗುತ್ತಿದ್ದು, ಅವುಗಳಲ್ಲಿ ಪೆಟ್ರೋಲ್, ಡಿಸೇಲ್ ಖರೀದಿಗೆ ಸಂಬಂಧಿಸಿದಂತೆ ಮಹತ್ವದ ಯೋಜನೆ ಜಾರಿಗೆ ತರಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗುತ್ತಿದ್ದು, ಅವುಗಳಲ್ಲಿ ಪೆಟ್ರೋಲ್, ಡಿಸೇಲ್ ಖರೀದಿಗೆ ಸಂಬಂಧಿಸಿದಂತೆ ಮಹತ್ವದ ಯೋಜನೆ ಜಾರಿಗೆ ತರಲಿದೆ.
ಕೇಂದ್ರದ ಹೊಸ ಯೋಜನೆಯಂತೆ ನೀವು ದಿನನಿತ್ಯದ ಸಾಮಾಗ್ರಿಗಳನ್ನು ಖರೀದಿಸುವ ಚಿಲ್ಲರೆ ಅಂಗಡಿಗಳಲ್ಲಿ ಪೆಟ್ರೋಲ್-ಡಿಸೇಲ್ ಸಿಗುವಂತಾಗಬೇಕು ಎಂಬ ವಿಚಾರದ ಬಗ್ಗೆ ವಿಮರ್ಶೆ ನಡೆಯುತ್ತಿದೆ. ಭಾರತದಲ್ಲಿ ಪೆಟ್ರೋಲ್ ಪಂಪ್ ಡೀಲರ್ಶಿಪ್ ಅನ್ನು ಚಿಲ್ಲರೆ ಮಳಿಗೆಯವರಿಗೆ ನೀಡುವ ನಿಯಮದ ಬಗ್ಗೆ ತಜ್ಞರ ಸಮಿತಿ ಚರ್ಚಿಸುತ್ತಿದೆ.
ಚಿಲ್ಲರೆ ಮಳಿಗೆಗಳಲ್ಲಿ ಪೆಟ್ರೋಲ್-ಡಿಸೇಲ್
ಈ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪ್ರಸ್ತಾವನೆಯನ್ನು ಸಿದ್ಧಪಡಿಸಲಿದ್ದು, ತೈಲ ವ್ಯಾಪಾರಕ್ಕೆ ಸಂಬಂದಪಟ್ಟ ಈಗಿನ ನಿಯಮಗಳನ್ನು ಸಡಿಲಗೊಳಿಸುವ ಸಾಧ್ಯತೆಯಿದೆ. ಈಗಿನ ನಿಯಮ ಬದಲಾವಣೆಯಾದರೆ ಚಿಲ್ಲರೆ ಮಳಿಗೆಗಳಲ್ಲೂ ಪೆಟ್ರೋಲ್-ಡಿಸೇಲ್ ಸಿಗಲಿದೆ.
ತಜ್ಞರ ಸಮಿತಿ
ಅಕ್ಟೋಬರ್ 2018 ರಲ್ಲಿ ಪೆಟ್ರೋಲಿಯಂ ಸಚಿವಾಲಯವು ಇಂಧನ ಚಿಲ್ಲರೆ ವ್ಯಾಪಾರಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳಿಗೆ ತಜ್ಞರ ಸಮಿತಿಯನ್ನು ರಚಿಸಿದೆ. ಇಂಧನ ಚಿಲ್ಲರೆ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಪರಿಣಿತರ ಸಮಿತಿ ರಚಿಸಲಾಗಿತ್ತು. ಪರಿಣಿತರ ಸಮಿತಿಯಲ್ಲಿ ಮಾಜಿ ಪೆಟ್ರೋಲಿಯಂ ಕಾರ್ಯದರ್ಶಿ ಜಿ.ಸಿ.ಚತುರ್ವೇದಿ, ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಶುತೋಷ್ ಜಿಂದಾಲ್, ಅರ್ಥಶಾಸ್ತ್ರಜ್ಞ ಕಿರೀತ್ ಪಾರಿಖ್ ಮತ್ತು ಎಂ.ಎ. ಪಠಾನ್ ಇದ್ದಾರೆ.
ಹೊಸ ಪ್ಲಾನ್ ನಲ್ಲಿ ಏನಿದೆ?
- ನಿಯಮ ಜಾರಿಯಾದರೆ ಸೌದಿ ಅರೇಬಿಯಾದ ಪ್ರಸಿದ್ಧ ಕಂಪನಿಗಳು ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಸುಲಭವಾಗಿ ಪ್ರವೇಶ ಮಾಡಬಹುದಾಗಿದೆ.
- ಬ್ರಿಟನ್ ದೇಶಗಳಲ್ಲಿ ಈಗಾಗಲೇ ಚಿಲ್ಲರೆ ಮಳಿಗೆಗಳಲ್ಲಿ ಪೆಟ್ರೋಲ್ ಸಿಗುತ್ತಿರುವುದು ಭಾರತಕ್ಕೆ ಪ್ರೇರಣೆಯಾಗಿದೆ.
- ಬ್ರಿಟಿಷ್ ಅಸೋಸಿಯೇಷನ್‌ನ ಪೆಟ್ರೋಲಿಯಂ ರಿಟೇಲರ್ಸ್ ವ್ಯಾಪಾರಿಗಳ ಸಂಘ (ಪಿಆರ್‌ಎ) ಅಂದಾಜಿನ ಪ್ರಕಾರ, ಏಪ್ರಿಲ್‌ನಲ್ಲಿ ದೇಶದ ಒಟ್ಟು ಪೆಟ್ರೋಲ್ ಮಾರಾಟದಲ್ಲಿ ಸೂಪರ್ ಮಾರ್ಕೆಟ್‌ನ ಪಾಲು ಶೇ. 49 ರಷ್ಟಿದ್ದು, ಡೀಸೆಲ್ ಮಾರಾಟ ಶೇ. 43 ರಷ್ಟಿದೆ.
- ಭಾರತದಲ್ಲಿ ಈಗಾಗಲೇ ಈ ಒತ್ತಾಯ ಕೇಳಿಬರುತ್ತಿದ್ದು, ಈಗ ಸರ್ಕಾರ ಈ ಯೋಜನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ.
- ಈ ಯೋಜನೆ ಜಾರಿಯಾದರೆ ಸಾಮಾನ್ಯ ಜನರು ಸುಲಭ ಇಂಧನ ಪಡೆಯಲು ಸಾದ್ಯವಾಗುತ್ತದೆ.


Click it and Unblock the Notifications