ಚಾಲಕರಿಗೆ ಗುಡ್ ನ್ಯೂಸ್! ಡ್ರೈವಿಂಗ್ ಲೈಸೆನ್ಸ್ ಪಡೆಯಲು ಕನಿಷ್ಟ ಶೈಕ್ಷಣಿಕ ಅರ್ಹತೆ ಬೇಕಿಲ್ಲ

ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಚಾಲಕರಿಗೆ ಕನಿಷ್ಟ ಶಿಕ್ಷಣ ಅರ್ಹತೆಯೆ ಅಗತ್ಯವನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವಾಲಯ ಹೇಳಿದೆ.

ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಚಾಲಕರಿಗೆ ಕನಿಷ್ಟ ಶಿಕ್ಷಣ ಅರ್ಹತೆಯೆ ಅಗತ್ಯವನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವಾಲಯ ಹೇಳಿದೆ.

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಕನಿಷ್ಟ ಶೈಕ್ಷಣಿಕ ಅರ್ಹತೆ ಬೇಕಿಲ್ಲ

ಚಾಲಕರ ಆಕ್ರೋಶಕ್ಕೆ ಕಾರಣವಾಗಿದ್ದ ಕನಿಷ್ಟ ಶಿಕ್ಷಣ ಇರಬೇಕೆಂಬ ನಿಯಮವನ್ನು ಕೇಂದ್ರ ಸರ್ಕಾರ ಇದೀಗ ಕೈಬಿಟ್ಟಿರುವುದು ಸಂತಸ ತಂದಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಲಕ್ಷಾಂತರ ಜನರಿಗೆ ಈ ನಿಯಮದಿಂದ ಉದ್ಯೋಗದ ಸಮಸ್ಯೆಯಾಗಿ, ನಿರುದ್ಯೋಗ ಸೃಷ್ಟಿಯಾಗಬಹುದು ಎಂಬ ಲೆಕ್ಕಾಚಾರದಲ್ಲಿ ಈ ನಿಯಮ ಸಡಿಲಿಸಲಾಗಿದೆ. ಸೆಂಟ್ರಲ್ ಮೋಟಾರು ವಾಹನ ನಿಯಮಗಳು, 1989 ರ ನಿಯಮ 8 ರ ಅಡಿಯಲ್ಲಿ, ಸಾರಿಗೆ ವಾಹನ ಚಾಲಕನು 8 ನೇ ತರಗತಿಯಲ್ಲಿ ಕಡ್ಡಾಯವಾಗಿ ಉತ್ತೀರ್ಣನಾಗಿರಬೇಕು ಎಂಬ ನಿಯಮವಿತ್ತು.
ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆ ತೆಗೆದು ಹಾಕಲು ರಸ್ತೆ ಸಾರಿಗೆ ಸಚಿವಾಲಯ ಅಧಿಕೃತ ಆದೇಶವನ್ನು ಪ್ರಕಟಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಔಪಚಾರಿಕ ಶಿಕ್ಷಣ ಪಡೆಯದವರು ಹೆಚ್ಚಿನ ಪ್ರಮಾಣದಲ್ಲಿದ್ದು, ನಿರುದ್ಯೋಗವೂ ಇದೆ. ಜೊತೆಗೆ ಇವರು ಚಾಲನಾ ವೃತ್ತಿಯಲ್ಲಿ ಉತ್ತಮ ಕೌಶಲ್ಯ ಹೊಂದಿದ್ದಾರೆ. ಸರಕು ಸಾಗಣೆ ಕ್ಷೇತ್ರದಲ್ಲಿ 22 ಲಕ್ಷ ಚಾಲಕರ ಕೊರತೆ ಇದ್ದು, ಕೊರತೆಯನ್ನು ನೀಗಿಸಲು ನಿಯಮ ಸಡಿಲಿಸಲಾಗಿದೆ. ಆದರೆ ಸುರಕ್ಷತೆ ದೃಷ್ಟಿಯಿಂದ ಶೈಕ್ಷಣಿಕ ಅರ್ಹತೆ ಹೊರತುಪಡಿಸಿ ಚಾಲಕನ ತರಬೇತಿ, ಕೌಶಲ್ಯ ಪರೀಕ್ಷೆಗೆ ಸರ್ಕಾರ ಒತ್ತು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+