ಎಲೆಕ್ಟ್ರಿಕ್/ಬ್ಯಾಟರಿ ಚಾಲಿತ ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಸುದ್ದಿ

ಕೇಂದ್ರ ಸರ್ಕಾರ ಪರಿಸರ ಸ್ನೇಹಿ ವಾಹನಗಳ ಉತ್ತೇಜನಕ್ಕೆ ಅನುವು ಮಾಡಿಕೊಡಲು ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಪರಿಸರ ಮಾಲಿನ್ಯ ತಡೆಯಲು ಎಲೆಕ್ಟ್ರಿಕ್ ವಾಹನ ನೋಂದಣಿ ಶುಲ್ಕ ರದ್ದುಪಡಿಸುವುದರ ಜೊತೆಗೆ ಜಿಎಸ್ಟಿ ದರ ಇಳಿಕೆ

ಕೇಂದ್ರ ಸರ್ಕಾರ ಪರಿಸರ ಸ್ನೇಹಿ ವಾಹನಗಳ ಉತ್ತೇಜನಕ್ಕೆ ಅನುವು ಮಾಡಿಕೊಡಲು ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ.

ಎಲೆಕ್ಟ್ರಿಕ್/ಬ್ಯಾಟರಿ ಚಾಲಿತ ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಬಂ

ಪರಿಸರ ಮಾಲಿನ್ಯ ತಡೆಯಲು ಎಲೆಕ್ಟ್ರಿಕ್ ವಾಹನ ನೋಂದಣಿ ಶುಲ್ಕ ರದ್ದುಪಡಿಸುವುದರ ಜೊತೆಗೆ ಜಿಎಸ್ಟಿ ದರ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ.
ವಾಹನ ಸವಾರರನ್ನು ಆಕರ್ಷಿಸಲು ಹಾಗು ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹ ನೀಡಲು ಎಲೆಕ್ಟ್ರಿಕ್ ವಾಹನ ನೋಂದಣಿ ಶುಲ್ಕವನ್ನು ರದ್ದುಪಡಿಸಿದೆ. ಅಲ್ಲದೆ, ಎಲೆಕ್ಟ್ರಿಕ್ ವಾಹನಗಳ ಜಿಎಸ್ಟಿ ದರವನ್ನು ಶೇ. 12 ರಿಂದ ಶೇ. 5 ಕ್ಕೆ ಇಳಿಕೆ ಮಾಡುವ ನಿರೀಕ್ಷೆಯಿದೆ.
ಬ್ಯಾಟರಿ ಚಾಲಿತ ಎರಡು, ಮೂರು ಮತ್ತು ನಾಲ್ಕು ಚಕ್ರಗಳ ವಾಹನಗಳು ನೋಂದಣಿ ಪ್ರಮಾಣಪತ್ರವನ್ನು ಪಡೆಯಲು ಅಥವಾ ನವೀಕರಿಸಲು ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಕೇಂದ್ರೀಯ ಮೋಟಾರು ವಾಹನಗಳ ನಿಯಮ 1989 ಕ್ಕೆ ತಿದ್ದುಪಡಿ ತರಲಾಗಿದ್ದು, ಹೊಸ ಎಲೆಕ್ಟ್ರಿಕ್ ವಾಹನ ಮತ್ತು ಹಳೆಯ ಎಲೆಕ್ಟ್ರಿಕ್ ವಾಹನಗಳಿಗೂ ಶುಲ್ಕ ಇರುವುದಿಲ್ಲ. ದೇಶದಲ್ಲಿ 2030 ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಉತ್ಪಾದನೆ ಹಾಗು ಮಾರಾಟ ಬಂದ್ ಆಗಲಿದೆ. ಹೀಗಾಗಿ ಈಗಿನಿಂದಲೇ ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
ದೇಶದಲ್ಲಿ ಬ್ಯಾಟರಿ ಚಾಲಿತ ಅಥವಾ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುವ ಸಲುವಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ಅಡಿಯಲ್ಲಿ ನೋಂದಣಿ ಶುಲ್ಕಗಳ ನೂತನ ಕ್ರಮಗಳನ್ನು ಪ್ರಾರಂಭಿಸಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+