For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್! ಎಟಿಎಂ ವಿತ್ ಡ್ರಾ ನಿಯಮ, ಉಚಿತ ವಹಿವಾಟು, ಶುಲ್ಕಗಳಲ್ಲಿ ಬದಲಾವಣೆ?

ಎಟಿಎಂ ಯಂತ್ರಗಳನ್ನು ಬಳಸುವುದಕ್ಕಾಗಿ ನೀವು ಪಾವತಿಸುವ ಶುಲ್ಕಗಳು ಶೀಘ್ರದಲ್ಲೇ ಬದಲಾಗಬಹುದು. ಎಟಿಎಂ ಇಂಟರ್ಚೇಂಜ್ ಶುಲ್ಕ ರಚನೆಯನ್ನು ಪರಿಶೀಲಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜೂನ್ 11 ರಂದು ಆರು ಸದಸ್ಯರ ಸಮಿತಿಯನ್ನು ರಚಿಸಿದ

|

ಎಟಿಎಂ ಯಂತ್ರಗಳನ್ನು ಬಳಸುವುದಕ್ಕಾಗಿ ನೀವು ಪಾವತಿಸುವ ಶುಲ್ಕಗಳು ಶೀಘ್ರದಲ್ಲೇ ಬದಲಾಗಬಹುದು. ಎಟಿಎಂ ಇಂಟರ್ಚೇಂಜ್ ಶುಲ್ಕ ರಚನೆಯನ್ನು ಪರಿಶೀಲಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜೂನ್ 11 ರಂದು ಆರು ಸದಸ್ಯರ ಸಮಿತಿಯನ್ನು ರಚಿಸಿದೆ.

ಎಸ್ಬಿಐ ಉಚಿತ ವಹಿವಾಟುಗಳು

ಎಸ್ಬಿಐ ಉಚಿತ ವಹಿವಾಟುಗಳು

ಪ್ರಸ್ತುತ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಾಮಾನ್ಯ ಉಳಿತಾಯ ಬ್ಯಾಂಕ್ ಖಾತೆದಾರರಿಗೆ ಎಂಟು ಉಚಿತ ವಹಿವಾಟುಗಳನ್ನು ನೀಡುತ್ತದೆ. ಇದರಲ್ಲಿ ಎಸ್‌ಬಿಐ ಎಟಿಎಂಗಳಲ್ಲಿ ಐದು ಮತ್ತು ಇತರ ಬ್ಯಾಂಕಿನ ಎಟಿಎಂಗಳಲ್ಲಿ ಮೂರು ವಹಿವಾಟುಗಳನ್ನು ನಡೆಸಬಹುದು.
ಮೆಟ್ರೋ ನಗರಗಳಲ್ಲಿ, ಉಳಿತಾಯ ಬ್ಯಾಂಕ್ ಖಾತೆದಾರರು 10 ಉಚಿತ ವಹಿವಾಟುಗಳನ್ನು ನಡೆಸಬಹುದಾಗಿದ್ದು, ಅವುಗಳಲ್ಲಿ ಎಸ್‌ಬಿಐ ಎಟಿಎಂಗಳಲ್ಲಿ ಐದು ಮತ್ತು ಇತರ ಎಟಿಎಂಗಳಲ್ಲಿ ಐದು ವ್ಯವಹಾರ ಸೇರಿವೆ.
ಈ ವಹಿವಾಟುಗಳ ಮಿತಿಯ ನಂತರ, ಪ್ರತಿ ಹಣಕಾಸು ವಹಿವಾಟಿಗೆ ರೂ. 20 ಜೊತೆಗೆ ಜಿಎಸ್‌ಟಿ ಮತ್ತು ಹಣಕಾಸಿನೇತರ ವಹಿವಾಟಿಗೆ ರೂ. 8 ಜೊತೆಗೆ ಜಿಎಸ್‌ಟಿ ವಿಧಿಸಲ್ಪಡುತ್ತದೆ.

ಸರಾಸರಿ ಬ್ಯಾಲೆನ್ಸ್ ಮತ್ತು ಉಚಿತ ವಹಿವಾಟು

ಸರಾಸರಿ ಬ್ಯಾಲೆನ್ಸ್ ಮತ್ತು ಉಚಿತ ವಹಿವಾಟು

ಹಿಂದಿನ ತಿಂಗಳಲ್ಲಿ ತಮ್ಮ ಉಳಿತಾಯ ಬ್ಯಾಂಕ್ ಖಾತೆಯಲ್ಲಿ ಸರಾಸರಿ ಬ್ಯಾಲೆನ್ಸ್ ರೂ. 25 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಕಾಯ್ದುಕೊಂಡಿರುವ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರೂಪ್ (ಎಸ್‌ಬಿಜಿ) ತನ್ನ ಎಟಿಎಂಗಳಲ್ಲಿ ಅನಿಯಮಿತ ಉಚಿತ ವಹಿವಾಟುಗಳಿಗೆ ಅವಕಾಶ ಕಲ್ಪಿಸುತ್ತದೆ.
ಸಾಮಾನ್ಯವಾಗಿ, ಎಲ್ಲಾ ಪ್ರಮುಖ ಬ್ಯಾಂಕುಗಳು ಪ್ರತಿ ತಿಂಗಳು ತಮ್ಮದೇ ಆದ ಎಟಿಎಂಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಉಚಿತ ವಹಿವಾಟುಗಳನ್ನು ಅವಕಾಶ ನೀಡುತ್ತದೆ. ಆದರೆ ಇತರ ಬ್ಯಾಂಕುಗಳ ಎಟಿಎಂಗಳಲ್ಲಿನ ವಹಿವಾಟುಗಳಿಗೆ ಒಂದು ನಿರ್ದಿಷ್ಟ ಮಿತಿ ಇರುತ್ತದೆ. ವಹಿವಾಟುಗಳು ಮಿತಿಯನ್ನು ಮೀರಿದರೆ ಬ್ಯಾಂಕುಗಳು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗಬಹುದಾದ ಶುಲ್ಕವನ್ನು ವಿಧಿಸುತ್ತವೆ.

ಸಮಿತಿ ರಚನೆ

ಸಮಿತಿ ರಚನೆ

ಎಟಿಎಂ ಸ್ಟ್ರಕ್ಚರ್ ಮತ್ತು ಶುಲ್ಕವನ್ನು ಬದಲಾಯಿಸುವಂತೆ ಹೆಚ್ಚುತ್ತಿರುವ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಸಮಿತಿಯನ್ನು ರಚಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಶುಲ್ಕ ರಚನೆಯು ನಿಮಗೆ ಎಟಿಎಂ ಕಾರ್ಡ್ ಅನ್ನು ವಿತರಿಸಿರುವ ಬ್ಯಾಂಕ್ ಹೊರತುಪಡಿಸಿ ಉಳಿದ ಬ್ಯಾಂಕುಗಳ ಎಟಿಎಂಗಳಲ್ಲಿ ಪಾವತಿಸುವ ಶುಲ್ಕವನ್ನು ನಿರ್ಧರಿಸುತ್ತದೆ.

ನೆಫ್ಟ್ ಮತ್ತು ಆರ್‌ಟಿಜಿಎಸ್ ಶುಲ್ಕ

ನೆಫ್ಟ್ ಮತ್ತು ಆರ್‌ಟಿಜಿಎಸ್ ಶುಲ್ಕ

ದೇಶದಲ್ಲಿ ಸುಮಾರು 2 ಲಕ್ಷ ಎಟಿಎಂಗಳಿವೆ. ಏಪ್ರಿಲ್ ಅಂತ್ಯದ ವೇಳೆಗೆ ಸುಮಾರು 88.47 ಕೋಟಿ ಡೆಬಿಟ್ ಕಾರ್ಡ್‌ಗಳು ಮತ್ತು 4.8 ಕೋಟಿ ಕ್ರೆಡಿಟ್ ಕಾರ್ಡ್‌ಗಳಿದ್ದವು. ಇತ್ತೀಚಿನ ಆರ್‌ಬಿಐ ಅಂಕಿಅಂಶಗಳ ಪ್ರಕಾರ, ಏಪ್ರಿಲ್‌ನಲ್ಲಿ ಎಟಿಎಂಗಳಲ್ಲಿ ಡೆಬಿಟ್ ಕಾರ್ಡ್‌ಗಳ ಮೂಲಕ 80.9 ಕೋಟಿ ವಹಿವಾಟು ನಡೆಸಲಾಗಿದೆ. ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ, ಆರ್‌ಬಿಐ ತನ್ನ ಹಣಕಾಸು ನೀತಿ ಪರಿಶೀಲನೆಯಲ್ಲಿ ನೆಫ್ಟ್ ಮತ್ತು ಆರ್‌ಟಿಜಿಎಸ್ ಹಣ ವರ್ಗಾವಣೆ ವ್ಯವಸ್ಥೆಗಳ ಶುಲ್ಕವನ್ನು ರದ್ದುಗೊಳಿಸಿದೆ.

Read more about: atm sbi banking money
English summary

SBI ATM withdrawal rules: Free transactions, charges and other details

The Reserve Bank of India (RBI) on 11 June constituted a six-member committee to review the ATM interchange fee structure.
Story first published: Saturday, June 22, 2019, 15:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X