For Quick Alerts
ALLOW NOTIFICATIONS  
For Daily Alerts

ವಾಹನ ಸವಾರರಿಗೆ ಕೇಂದ್ರ ಸರ್ಕಾರದ ಪ್ರಮುಖ ಸುದ್ದಿ

ಕೇಂದ್ರ ಸರ್ಕಾರವು ಮಾಲಿನ್ಯ ನಿಯಂತ್ರಣಗೊಳಿಸಲು ಮತ್ತು ಪೆಟ್ರೋಲ್-ಡಿಸೇಲ್ ಅವಲಂಬನೆ ಕಡಿಮೆ ಮಾಡುವ ಉದ್ದೇಶದೊಂದಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುವ ಯೋಜನೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ.

|

ಕೇಂದ್ರ ಸರ್ಕಾರವು ಮಾಲಿನ್ಯ ನಿಯಂತ್ರಣಗೊಳಿಸಲು ಮತ್ತು ಪೆಟ್ರೋಲ್-ಡಿಸೇಲ್ ಅವಲಂಬನೆ ಕಡಿಮೆ ಮಾಡುವ ಉದ್ದೇಶದೊಂದಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುವ ಯೋಜನೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ.

ವಾಹನ ಸವಾರರಿಗೆ ಕೇಂದ್ರ ಸರ್ಕಾರದ ಪ್ರಮುಖ ಸುದ್ದಿ

2030ರ ನಂತರ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ. 2023 ಮತ್ತು 2025 ರೊಳಗೆ ಐಸಿಇ (internal combustion engine) ಚಾಲಿತ ತ್ರಿ ಮತ್ತು ದ್ವಿಚಕ್ರ ವಾಹನಗಳನ್ನು (150 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿರುವ)ನಿಷೇಧಿಸಲು ಸರ್ಕಾರ ಬಯಸಿದೆ. ಇದರ ಬದಲಾಗಿ ಎಲೆಕ್ಟ್ರಿಕ್ ವಾಹನಗಳ (ಇವಿ) ಸಂಚಾರಕ್ಕೆ ಆದ್ಯತೆ ನೀಡಲಿದೆ.
ನೀತಿ ಆಯೋಗ ಈ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಯೋಜನೆ ಅನುಷ್ಠಾನಕ್ಕೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
2023 ರ ಏಪ್ರಿಲ್ ಬಳಿಕ ದ್ವಿಚಕ್ರ ವಾಹನಗಳನ್ನು ಮಾರುವಂತಿಲ್ಲ. ಅದೇ ರೀತಿ 150 ಸಿಸಿ ಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಮಾರಾಟಕ್ಕೆ 2025 ಡೆಡ್ ಲೈನ್ ಆಗಿದೆ. 2025 ರ ನಂತರ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳು ಕಡ್ಡಾಯವಾಗಲಿವೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಬ್ರೇಕ್ ಬೀಳಲಿದ್ದು, ಎಲೆಕ್ಟ್ರಿಕ್ ವಾಹನಗಳು ಮಾತ್ರ ಬಳಕೆಗೆ ಬರಲಿವೆ ಎನ್ನಲಾಗಿದೆ.
ಸರ್ಕಾರದ ಈ ನೀತಿಯನ್ನು ದ್ವಿಚಕ್ರ ಮತ್ತು ತ್ರಿ ಚಕ್ರ ವಾಹನ ತಯಾರಕರು ವಿರೋಧಿಸುತ್ತಿದ್ದಾರೆ. ನೀತಿ ಆಯೋಗ ಮತ್ತು ವಾಹನ ಉದ್ಯಮದ ನಡುವಿನ ಅಧಿಕಾರಿಗಳ ಸಭೆ ಶುಕ್ರವಾರ ಸ್ಥಗಿತಗೊಂಡಿದೆ.

Read more about: money finance news business
English summary

Electric Vehicles, Automakers run into collision with Centre's electric vehicle plan

Two- and three-wheeler manufacturers are stoutly resisting the government’s e-mobility plan.
Story first published: Monday, June 24, 2019, 11:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X