ಬ್ಯಾಂಕುಗಳ ವಿಲೀನದಂತೆ ವಿಮಾ ಕಂಪನಿಗಳ ವಿಲೀನ ಸಾಧ್ಯವಾಗುವುದೆ?
ಕೇಂದ್ರ ಸರ್ಕಾರವು ಸರಕಾರಿ ಸ್ವಾಮ್ಯದ ಬ್ಯಾಂಕುಗಳ ವಿಲೀನದಂತೆಯೇ ವಿಮಾ ಕಂಪನಿಗಳ ವಿಲೀನಕ್ಕೆ ಮುಂದಾಗಿದೆ. ಬೃಹತ್ ಗಾತ್ರದ ವಿಮಾ ಕಂಪನಿಗಳನ್ನು ಚಿಕ್ಕ ಗಾತ್ರದ ಮೂರು ಕಂಪನಿಗಳಾಗಿ ವಿಭಾಗಿಸುವ ಆಯ್ಕೆಯನ್ನು ಪರಾಮರ್ಶಿಸುತ್ತಿದೆ.
ಕೇಂದ್ರ ಸರ್ಕಾರವು ಸರಕಾರಿ ಸ್ವಾಮ್ಯದ ಬ್ಯಾಂಕುಗಳ ವಿಲೀನದಂತೆಯೇ ವಿಮಾ ಕಂಪನಿಗಳ ವಿಲೀನಕ್ಕೆ ಮುಂದಾಗಿದೆ. ಬೃಹತ್ ಗಾತ್ರದ ವಿಮಾ ಕಂಪನಿಗಳನ್ನು ಚಿಕ್ಕ ಗಾತ್ರದ ಮೂರು ಕಂಪನಿಗಳಾಗಿ ವಿಭಾಗಿಸುವ ಆಯ್ಕೆಯನ್ನು ಪರಾಮರ್ಶಿಸುತ್ತಿದ್ದು, ಕೇಂದ್ರ ಸರ್ಕಾರಕ್ಕೆ ಕೆಲವು ಅಡ್ಡಿಗಳು ಎದುರಾಗಿವೆ.

ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಮೂರು ಸರ್ಕಾರಿ ಸ್ವಾಮ್ಯದ ವಿಮಾ ಸಂಸ್ಥೆಗಳಾದ ನ್ಯಾಷನಲ್ ಇನ್ಶುರೆನ್ಸ್ ಕಂಪನಿ, ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಮತ್ತು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಗಳನ್ನು ವಿಲೀನ ಮಾಡಲು ಹಣಕಾಸು ಸಚಿವಾಲಯ ಮುಂದಾಗಿತ್ತು.
ದೊಡ್ಡ ಕಂಪನಿಗಳನ್ನು ಚಿಕ್ಕ ಕಂಪನಿಗಳಾಗಿ ವಿಭಜಿಸಿ ಆ ಚಿಕ್ಕ ಘಟಕಗಳನ್ನು ಖಾಸಗಿ ವಲಯದ ಕಂಪನಿಗಳಿಗೆ ಮಾರಾಟ ಮಾಡುವ ಚಿಂತನೆ ಸರ್ಕಾರದ ಮುಂದಿದೆ. ಬಜೆಟ್‌ನಲ್ಲೂ ಈ ಬಗ್ಗೆ ಘೋಷಣೆ ಮಾಡಲಾಗಿತ್ತು, ಆದರೆ ಆಡಳಿತಾತ್ಮಕವಾಗಿ ಸಮಸ್ಯೆಗಳು ಎದುರಾಗಿದ್ದವು.
ಕಳೆದ ಎರಡು ವರ್ಷಗಳಿಂದ ಬಾಕಿ ಇರುವ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳ ಷೇರು ಮಾರಾಟವನ್ನು ತ್ವರಿತಗತಿಯಲ್ಲಿ ನಡೆಸುವ ಆಲೋಚನೆ ಇದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಸ್ವಾಮ್ಯದ ಪ್ರಮುಖ ಮೂರು ಇನ್ಷೂರೆನ್ಸ್ ಕಂಪನಿಗಳಲ್ಲಿ ಎರಡು ಕಂಪನಿಗಳು ಭಾರೀ ನಷ್ಟದಲ್ಲಿವೆ. ಕಳೆದ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಈ ಮೂರು ಕಂಪನಿಗಳ ಒಟ್ಟು ನಷ್ಟ ರೂ. 1,800 ಕೋಟಿ ದಾಟಿದೆ. ಕೆಲವು ಇನ್ಷೂರೆನ್ಸ್ ಕಂಪನಿಗಳು ಮಾರುಕಟ್ಟೆ ಪಾಲನ್ನೂ ಕಳೆದುಕೊಂಡಿದ್ದು, ಹೀಗಾಗಿ ವಿಭಜಿಸುವ ಯೋಜನೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.
ಸರ್ಕಾರಿ ಸ್ವಾಮ್ಯದ ನಾಲ್ಕು ಪ್ರಮುಖ ಸಂಸ್ಥೆಗಳು ಒಳಗೊಂಡಂತೆ ಜನರಲ್ ಇನ್ಷೂರೆನ್ಸ್ ಮಾರುಕಟ್ಟೆಯಲ್ಲಿ 27 ಕಂಪನಿಗಳಿವೆ. 23 ಖಾಸಗಿ ಕಂಪನಿಗಳು, ಅದರಲ್ಲಿ 6 ಕಂಪನಿಗಳು ಆರೋಗ್ಯ ವಿಮೆಗೆ ಒತ್ತು ನೀಡಿವೆ.


Click it and Unblock the Notifications