For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ನೌಕರರಿಗೆ ಸಂಕಷ್ಟ, ರೂ. 850 ಕೋಟಿ ಸಂಬಳ ಪಾವತಿಗೆ ಪರದಾಟ!

|

ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ತನ್ನ ಕಾರ್ಯಾಚರಣೆಯನ್ನು ನಡೆಸಲು ಹೆಣಗಾಡುತ್ತಿದ್ದು, ಸರ್ಕಾರದದಿಂದ ತಕ್ಷಣ ಹಣ ನೀಡುವಂತೆ ಕೋರಿದೆ.

ಬಿಎಸ್ಎನ್ಎಲ್ ನೌಕರರಿಗೆ ಸಂಕಷ್ಟ, ರೂ. 850 ಕೋಟಿ ಸಂಬಳ ಪಾವತಿಗೆ ಪರದಾಟ

 

ಇದರಲ್ಲಿ ಜೂನ್ ಮೊದಲು ತನ್ನ ನೌಕರರ ರೂ. 850 ಕೋಟಿ ಸಂಬಳ ಪಾವತಿಗೆ ಹಣ ಬೇಕಾಗಿರುವುದು ಸೇರಿದೆ. ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಬಿಎಸ್ಎನ್ಎಲ್ ನೌಕರರಿಗೆ ಸಂಬಳ ನೀಡಲೂ ಪರದಾಡುತ್ತಿದೆ. ಬಿಎಸ್ಎನ್ಎಲ್ ಹಣಕಾಸು ವಿಭಾಗ ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಮಾಸಿಕ ಸಂಬಳ ಪಾವತಿಗೆ ತಕ್ಷಣವೇ ರೂ. 850 ಕೋಟಿ ರೂಪಾಯಿ ಬೇಕಾಗಿದೆ ಹಾಗು ಸಂಸ್ಥೆಯ ನಿರ್ವಹಣೆ ಕೂಡ ಕಷ್ಟಕರವಾಗಿರುವುದರಿಂದ ಆರ್ಥಿಕ ನೆರವಿಗೆ ಮುಂದಾಗಬೇಕು ಎಂದು ಮನವಿ ಮಾಡಿದೆ.

ಸಾರ್ವಜನಿಕ ವಲಯದ ಕಂಪನಿ ಸುಮಾರು ರೂ. 13,000 ಕೋಟಿ ಬಾಕಿ ಹೊಣೆಗಾರಿಕೆ ಹೊಂದಿರುವುದು ವ್ಯವಹಾರವನ್ನು ಕಷ್ಟಕರವಾಗಿಸಿದೆ. ಮಾಸಿಕ ಆದಾಯ ಮತ್ತು ಕಾರ್ಯಾಚರಣೆಯನ್ನು ಮುಂದುವರಿಸುವುದು ಅಸಾಧ್ಯವಾದ ಮಟ್ಟಕ್ಕೆ ತಲುಪಿದೆ.

ಖಾಸಗಿ ಕಂಪನಿಗಳ ದರ ಸಮರದ ಪೈಪೋಟಿಯಲ್ಲಿ ಬಿಎಸ್ಎನ್ಎಲ್ ನಷ್ಟದ ಹಾದಿ ಹಿಡಿದಿದ್ದು, ಈ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಬಿಎಸ್ಎನ್ಎಲ್ ಬಳಿ ಈಗಲೂ 4ಜಿ ತರಂಗಾಂತರಗಳಿಲ್ಲ.

ಅಲ್ಲದೆ ಬಿಎಸ್ಎನ್ಎಲ್ ಆದಾಯದಲ್ಲಿ ಶೇ. 66 ರಷ್ಟು ಹಣ ವೇತನ ಹಾಗೂ ಪಿಂಚಣಿಗೆ ಹೋಗುತ್ತಿದೆ. ಕಳೆದೊಂದು ದಶಕದಿಂದ ಬಿಎಸ್ಎನ್ಎಲ್ ನಷ್ಟದಲ್ಲಿದ್ದು ಲಾಭದ ಮುಖವನ್ನೇ ನೋಡಿಲ್ಲ.

Read more about: bsnl telecom money business
English summary

BSNL begs again, says no funds to pay June salary to 1.76 lakh employees

BSNL has sought immediate fund infusion from the government as the telecom firm is struggling to run its operations, including paying Rs 850 crore worth of salaries before June.
Story first published: Tuesday, June 25, 2019, 12:18 [IST]
Company Search
Enter the first few characters of the company's name or the NSE symbol or BSE code and click 'Go'

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more