For Quick Alerts
ALLOW NOTIFICATIONS  
For Daily Alerts

ದೀಪಿಕಾ ಪಡುಕೋಣೆ ಬೆಂಗಳೂರಿನ ಏರೋಸ್ಪೇಸ್ ಸ್ಟಾರ್ಟ್ಅಪ್ ನಲ್ಲಿ ಹೂಡಿಕೆ

ಬೆಂಗಳೂರು ಐಟಿ ಹಾಗು ಸ್ಟಾರ್ಟ್ಅಪ್ ಕ್ಷೇತ್ರದ ನೆಚ್ಚಿನ ತಾಣವಾಗಿದ್ದು, ಬೆಂಗಳೂರಿನ ಸ್ಟಾರ್ಟ್ಅಪ್ ಉದ್ಯಮ ಐಐಎಸ್ಸಿಯ ಸೊಸೈಟಿ ಫಾರ್ ಇನ್ನೋವೇಶನ್ ಅಂಡ್ ಡೆವಲಪ್ಮೆಂಟ್ (ಎಸ್ಐಡಿ) ಪ್ರಾಥಮಿಕ ಸುತ್ತಿನಲ್ಲಿ 3 ಮಿಲಿಯನ್ ಹಣವನ್ನು ಸಂಗ್ರಹಿಸಿದೆ.

|

ಬೆಂಗಳೂರು ಐಟಿ ಹಾಗು ಸ್ಟಾರ್ಟ್ಅಪ್ ಕ್ಷೇತ್ರದ ನೆಚ್ಚಿನ ತಾಣವಾಗಿದ್ದು, ಬೆಂಗಳೂರಿನ ಸ್ಟಾರ್ಟ್ಅಪ್ ಉದ್ಯಮ ಐಐಎಸ್ಸಿಯ ಸೊಸೈಟಿ ಫಾರ್ ಇನ್ನೋವೇಶನ್ ಅಂಡ್ ಡೆವಲಪ್ಮೆಂಟ್ (ಎಸ್ಐಡಿ) ಪ್ರಾಥಮಿಕ ಸುತ್ತಿನಲ್ಲಿ 3 ಮಿಲಿಯನ್ ಹಣವನ್ನು ಸಂಗ್ರಹಿಸಿದೆ. ವಿಶೇಷತೆಯೆಂದರೆ ಹೂಡಿಕೆದಾರರ ಪಟ್ಟಿಯಲ್ಲಿ ಬೆಂಗಳುರು ಮೂಲದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೂಡ ಹಣ ಹೂಡಿಕೆ ಮಾಡಿದ್ದಾರೆ.

 

ದೀಪಿಕಾ ಪಡುಕೋಣೆ ಬೆಂಗಳೂರಿನ ಏರೋಸ್ಪೇಸ್ ಸ್ಟಾರ್ಟ್ಅಪ್ ನಲ್ಲಿ ಹೂಡಿಕೆ

2015 ರಲ್ಲಿ ಯುವ ಇಂಜಿನಿಯರ್ ತಂಡ ಸ್ಥಾಪಿಸಿದ ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ ಸಂಸ್ಥೆಯು, ​​ಸುಧಾರಿತ ಬಾಹ್ಯಾಕಾಶ ಪ್ರೊಪಲ್ಷನ್ ವ್ಯವಸ್ಥೆ ಮತ್ತು ರಾಕೆಟ್ ಪ್ರೊಪಲ್ಷನ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ. ಕಂಪನಿ ಬಾನುವಾರ ತನ್ನ ಬಂಡವಾಳದ ಮೊತ್ತವನ್ನು ಪ್ರಕಟಿಸಿದೆ.
ಐಡಿಎಫ್‌ಸಿ-ಪರಂಪಾರಾ, ಸ್ಟಾರ್ಟ್ಅಪ್ ಎಕ್ಸ್‌ಸೀಡ್, ಕಾರ್ಸೆಮ್‌ವೆನ್ ಫಂಡ್ ಮತ್ತು ಸುರ್ವಂ ಪಾರ್ಟ್‌ನರ್ಸ್ ನೇತೃತ್ವ ವಹಿಸಿದೆ ಎಂದು ತಿಳಿಸಿದೆ.
ಹೂಡಿಕೆ ಮಾಡಿರುವ ಪ್ರಮುಖ ಹೂಡಿಕೆದಾರರು ದೀಪಿಕಾ ಪಡುಕೋಣೆ (ಕೆಎ ಎಂಟರ್ಪ್ರೈಸಸ್ ಎಲ್ಎಲ್ಪಿ ಮೂಲಕ), ಗ್ರೋಎಕ್ಸ್ ವೆಂಚರ್ಸ್, ಸಿಐಐಇ ಇನಿಶಿಯೇಟಿವ್ಸ್ (ಐಐಎಂ ಅಹಮದಾಬಾದ್ ನಲ್ಲಿ ಇನ್ಕ್ಯುಬೇಟರ್) ಮತ್ತು ಸಿನ್ (ಐಐಟಿ ಬಾಂಬೆಯಲ್ಲಿ ಇನ್ಕ್ಯುಬೇಟರ್)" ಎಂದು ಕಂಪನಿ ತಿಳಿಸಿದೆ.

ಈ ಹೂಡಿಕೆ ಹಣವು ಶೀಘ್ರದಲ್ಲೇ ನಮ್ಮ ಉತ್ಪನ್ನಗಳಿಗೆ ಅರ್ಹತೆ ಪಡೆಯಲು ಸಹಾಯ ಮಾಡುತ್ತದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ, ಯೋಜನೆಯನ್ನು ಕಠಿಣ ಅರ್ಹತಾ ಪರೀಕ್ಷೆಗಳಿಗೆ ಒಳಪಡಿಸುತ್ತೇವೆ. ನಮ್ಮ ಉತ್ಪನ್ನಗಳು ಹೆಚ್ಚು ಜನರನ್ನು ತಲುಪುವ ನಿಟ್ಟಿನ ಪ್ರಮುಖ ಆವಿಷ್ಕಾರಗಳ ಬಗ್ಗೆಯೂ ಕೆಲಸ ಮಾಡುತ್ತೇವೆ. ನಾವು ಪ್ರಮುಖ ಜಾಗತಿಕ ಸ್ಥಳಗಳಿಗೆ ನಮ್ಮ ಯೋಜನೆಯನ್ನು ವಿಸ್ತರಿಸುತ್ತೇವೆ.
ಪ್ರತಿಯೊಂದು ಕಂಪನಿಯೂ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದ್ದು, ಭಾರತದಿಂದ ವೇಗವಾಗಿ ಮತ್ತು ಮಿತವ್ಯಯದ ನಾವೀನ್ಯತೆಗಳಲ್ಲಿ ನಮ್ಮ ಸಾಮರ್ಥ್ಯ ತೋರಿಸಲಿದ್ದೇವೆ. ಇದಕ್ಕಾಗಿ ಇಸ್ರೋ ಮತ್ತು ಐಐಎಸ್‌ಸಿಗಳಿಂದ ಸ್ಫೂರ್ತಿ ಪಡೆಯುತ್ತೇವೆ ಎಂದಿದ್ದಾರೆ.

Read more about: money investments
English summary

Deepika Padukone invests in Bengaluru's aerospace startup

Aerospace startup has raised $3 million in a pre-series A round and among the list of investors is actor and city girl Deepika Padukone.
Story first published: Tuesday, June 25, 2019, 17:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X