ಎಚ್ಎಎಲ್ ಗೆ 8,140 ಕೋಟಿ ಬಂಡವಾಳ

ಬೆಂಗಳೂರು ಮೂಲದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಂಸ್ಥೆ ರಕ್ಷಣಾ ವಲಯದ ಉತ್ಪಾದನೆಯಲ್ಲಿ ತನ್ನದೇಯಾದ ಛಾಪು ಮೂಡಿಸಿದೆ.

ಬೆಂಗಳೂರು ಮೂಲದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಂಸ್ಥೆ ರಕ್ಷಣಾ ವಲಯದ ಉತ್ಪಾದನೆಯಲ್ಲಿ ತನ್ನದೇಯಾದ ಛಾಪು ಮೂಡಿಸಿದೆ.

ಎಚ್ಎಎಲ್ ಗೆ 8,140 ಕೋಟಿ ಬಂಡವಾಳ

ರಕ್ಷಣಾ ವಲಯದ ಉತ್ಪಾದಕ ಎಚ್‌ಎಎಲ್‌ಗೆ ವಾಯುಪಡೆಯ ಸುಖೋಯ್‌, ತೇಜಸ್‌ ಯುದ್ಧ ವಿಮಾನ ಹಾಗೂ ಇತರ ಹೆಲಿಕಾಪ್ಟರ್‌ ಸೇರಿದಂತೆ ಹಲವಾರು ಪ್ರಮುಖ ರಕ್ಷಣಾ ಉತ್ಪಾದನೆಯ ಆರ್ಡರ್‌ಗಳು ಲಭಿಸಿದೆ.
ಸು 30 ಎಂಕೆಐ, ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ತೇಜಸ್, ಡಾರ್ನಿಯರ್, ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್, ಚೇತಕ್, ಚೀತಲ್ ಹೆಲಿಕಾಪ್ಟರ್‌ಗಳು (Su30 MKI, Light Combat Aircraft Tejas, Dornier, Advanced Light Helicopter, Chetak, Cheetal helicopters) ಮತ್ತು ಇನ್ನಿತರ ರಕ್ಷಣಾ ಉತ್ಪನ್ನಗಳನ್ನು ತಯಾರಿಸಲು ಕಳೆದ ಆರು ತಿಂಗಳಲ್ಲಿ ರೂ. 8,140 ಕೋಟಿ ಬಂಡವಾಳ ನೆರವು ನೀಡಲಾಗಿದೆ.
ಅಂದರೆ ಜನವರಿಯಿಂದ ಜೂನ್‌ ವರೆಗೆ ರೂ. 8,140 ಕೋಟಿ ಬಂಡವಾಳ ನೆರವಿನ ಜತೆಗೆ ಬ್ಯಾಂಕ್‌ ಸಾಲವನ್ನೂ ಒದಗಿಸಲಾಗಿದೆ.
ರಕ್ಷಣಾ ವಲಯದ ಯುದ್ದ ವಿಮಾನಗಳನ್ನು ಉತ್ಪಾದಿಸುವ ಯೋಜನೆ ಕಾರ್ಯಗತಗೊಳಿಸಲು ಎಚ್‌ಎಎಲ್‌ ಸಾಮರ್ಥ್ಯ‌ ಹೊಂದಿದೆ. ರೂ. 8,140 ಕೋಟಿ ಬಂಡವಾಳ ನೆರವಿನೊಂದಿಗೆ ಬ್ಯಾಂಕ್‌ ಸಾಲವನ್ನೂ ನೀಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ರಾಜ್ಯಸಭೆಗೆ ತಿಳಿಸಿದ್ದಾರೆ.
ಖಾಸಗಿ ವಲಯದ ಕಂಪನಿಗಳು ಹಾಗೂ ಎಂಎಸ್‌ಎಂಇ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉತ್ಪಾದನೆಗೆ ಅಗತ್ಯವಿರುವ ಸರಕುಗಳ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಉತ್ಪಾದನೆ, ಯೋಜನೆ, ಹಣಕಾಸು, ಮಾರುಕಟ್ಟೆ, ಎಚ್‌ಆರ್‌ಡಿ ಇತ್ಯಾದಿ ವಿಭಾಗಗಳಲ್ಲಿ ಸಾಫ್ಟ್‌ವೇರ್‌ ಸಲ್ಯೂಷನ್ಸ್‌ ಅಳವಡಿಸಲಾಗುತ್ತಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಚ್ಎಎಲ್ ವಿಷಯ ಪ್ರಸ್ತಾಪವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+